Advertisement

ಸಾನ್ಯಶ್ರೀ ಎಸ್‌. ಸುವರ್ಣಗೆ ಅವಳಿ ಚಿನ್ನ

01:10 PM Aug 15, 2018 | |

ಕಲ್ಯಾಣ್‌: ಇಂಟರ್‌ನ್ಯಾಷನಲ್‌ ಸ್ಟೂಡೆಂಟ್ಸ್‌ ಒಲಿಂಪಿಕ್‌ ಕಮಿಟಿಯ ಮಾನ್ಯತೆಗೊಳಪಟ್ಟ ಸ್ಟುಡೆಂಟ್ಸ್‌ ಒಲಂಪಿಕ್‌ ಅಸೋಸಿ ಯೇಶನ್‌ ಥಾçಲ್ಯಾಂಡ್‌ ಆಯೋಜ ನೆಯಲ್ಲಿ ಜು. 27 ರಂದು ಥಾçಲ್ಯಾಂಡ್‌ನ‌ಲ್ಲಿ ಜರಗಿದ ನಾಲ್ಕನೇ ಸ್ಟುಡೆಂಟ್ಸ್‌ ಒಲಂಪಿಕ್‌ ಇಂಟರ್‌ನ್ಯಾಷನಲ್‌ ಕ್ರೀಡಾ ಸ್ಪರ್ಧೆಯಲ್ಲಿ 14 ವರ್ಷದೊಳಗಿನ ಬಾಲಕಿಯರ ವಿಭಾಗದ 500 ಮೀ. ಸ್ಕೇಟಿಂಗ್‌ ಸ್ಪರ್ಧೆಯಲ್ಲಿ ಕಲ್ಯಾಣ್‌ನ ಸಾನ್ಯಶ್ರೀ ಎಸ್‌. ಸುವರ್ಣ ಅವರು ಪ್ರಥಮ ಸ್ಥಾನ ಗಳಿಸಿ ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 

Advertisement

ಕಲ್ಯಾಣ್‌ ಪಶ್ಚಿಮದ ಆಗ್ರಾರೋಡ್‌ನ‌ ಮೊಹಿಂದರ್‌ ಸಿಂಗ್‌ ಕಾಬಲ್‌ ಸಿಂಗ್‌ ಇಂಗ್ಲಿಷ್‌ ಹೈಸ್ಕೂಲ್‌ನ 7ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಇವರು, ಭರತನಾಟ್ಯ, ಯಕ್ಷಗಾನ, ಕ್ರೀಡೆ ಇನ್ನಿತರ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಅವರು  ಕಲ್ಯಾಣ್‌ ಪಶ್ಚಿಮದ ದುರ್ಗಾನಗರದ ನಿವಾಸಿ, ಉದ್ಯಮಿ, ಬಿಲ್ಲವರ ಅಸೋಸಿಯೇಶನ್‌ ಕಲ್ಯಾಣ್‌ ಸಮಿ ತಿಯ ಉಪ ಕಾರ್ಯಾಧ್ಯಕ್ಷ ಸದಾಶಿವ ಜಿ. ಸುವರ್ಣ ಹಾಗೂ ಹೇಮಾಮಾಲಿನಿ ಸುವರ್ಣ ದಂಪತಿಯ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next