ದೇವದುರ್ಗ: ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಲ್ಲಿ ಬಹುಮುಖ ಕೌಶಲ್ಯ ಕಲಿಸಬೇಕಾಗಿದೆ ಎಂದು ಶಿಕ್ಷಣ ಸಂಯೋ ಜಕ ನರಸಯ್ಯ ಪಾಟೀಲ್ ಹೇಳಿದರು.
ಪಟ್ಟಣದ ಹೊರವಲಯದ ಎಸ್ ಎಂಎಸ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ವಿದ್ಯೆಯೊಂದಿಗೆ ವೈಜ್ಞಾನಿಕ ತಂತ್ರಜ್ಞಾನಗಳ ಜ್ಞಾನ ನೀಡಬೇ ಕಾಗಿದೆ. ತನ್ಮೂಲಕ ವಿದ್ಯಾರ್ಥಿಗಳನ್ನು ಬಹುಮುಖ ಪ್ರತಿಭೆಯನ್ನಾಗಿಸಲು ಶಿಕ್ಷಕರು ಪ್ರಯತ್ನಿಸಬೇಕಾಗಿದೆ ಎಂದರು.
ಸಿಆರ್‌ಪಿ ಮಂಜುನಾಥ ಮಾತನಾಡಿ, ವಿಜ್ಞಾನ ಮೇಳದ ಮೂಲಕ ಮಕ್ಕಳ ಬಹುಮುಖ ಪ್ರತಿಭೆ ಎಸ್‌ಎಂಎಸ್ ಶಾಲೆ ಸಿಬ್ಬಂದಿ ಹೊರ ತಂದಿದ್ದಾರೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಲಿವೆ ಎಂದರು.
ಈ ವೇಳೆ ವೆಂಕಟೇಶ ನಾಯಕ ಸೋಮಕಾರ, ನ್ಯಾಯವಾದಿ ರವಿಕುಮಾರ ಪಾಟೀಲ್ ಅಳ್ಳುಂಡಿ, ಪ್ರವೀಣಕುಮಾರ ರೇವಣೆ, ಶರಣಬಸವ ರಾಮದುರ್ಗ, ಖಂಡೇರಾಯ ಪಾಟೀಲ್ ಗುಂಡಗುರ್ತಿ, ವೆಂಕಟರೆಡ್ಡಿ ಜೇರಬಂಡಿ, ಸಂಸ್ಥೆ ಮುಖ್ಯ ಸ್ಥರಾದ ಶರಣಮ್ಮ ಹರವಿ, ಶಿವಕುಮಾರ ಹರವಿ, ಸಂಗಪ್ಪ ಹರವಿ, ಮೇಘ ಶಿವಕುಮಾರ, ಪ್ರಭಾವತಿ ಸಂಗಮೇಶ ಹರವಿ, ಜಯಶ್ರೀ ಇದ್ದರು.