Advertisement

ವಿದ್ಯಾರ್ಥಿಗಳಿಗೆ ಸಂಸದೀಯ ವ್ಯವಸ್ಥೆ ಅರಿವಿನ ಅಗತ್ಯ

07:25 AM Feb 22, 2019 | |

ಹಾಸನ: ಪಠ್ಯದ ಶಿಕ್ಷಣದ ಜೊತೆಗೆ ಶಾಲಾ ಹಂತದಲ್ಲೇ ಮಕ್ಕಳಿಗೆ ಸಂಸದೀಯ ವ್ಯವಸ್ಥೆ ಹಾಗೂ ರಾಜಕೀಯದ ಬಗ್ಗೆ ತಿಳುವಳಿಕೆ ಇರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್‌ ತಿಮ್ಮಣ್ಣಚಾರ್‌ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಗ್ರಾಸ್‌ ರೂಟ್ಸ್‌ ರಿಸರ್ಚ್‌ ಆ್ಯಂಡ್‌ ಅಡ್ವಕಸಿ ಮೂವ್‌ಮೆಂಟ್‌, ಪೊಲೀಸ್‌ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲಾ ಪಂಚಾಯತಿ ಹೊಯ್ಸಳ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಸಂಸತ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದ ಅಡಿಯಲ್ಲಿ ಸಂಸದೀಯ ವ್ಯವಸ್ಥೆಯನ್ನು ರೂಪಿಸಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆ, ವಿಧಾನ ಸಭೆ, ವಿಧಾನ ಪರಿಷತ್‌ಗಳಿಗೆ ಆಯ್ಕೆಯ ವಿಧಾನ ಮಕ್ಕಳು ತಿಳಿದಿರಬೇಕು ಎಂಬ ಕಾರಣಕ್ಕಾಗಿ ಮಕ್ಕಳ ಸಂಸತ್‌ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಸಾರ್ವತ್ರಿಕ ವೇದಿಕೆ: ಗ್ರಾಸ್‌ ರೂಟ್ಸ್‌ ರಿಸರ್ಚ್‌ ಆ್ಯಂಡ್‌ ಅಡ್ವಕಸಿ ಮೂವ್‌ಮೆಂಟ್‌ನ ಕಾರ್ಯನಿರ್ವಾಹಕ ನಿರ್ದೇಶಕ‌ ಬಸವರಾಜು ಮಾತನಾಡಿ ಪ್ರಜಾಪ್ರಭುತ್ವ ಒಂದು ಸಾರ್ವತ್ರಿಕ ವೇದಿಕೆ. ದೇಶದ ಈ ವ್ಯವಸ್ಥೆಯ ಬಗ್ಗೆ ಆಡಳಿತ ನಾಯಕನ ಜೊತೆಗೆ ಪ್ರಜೆಯ ಪಾತ್ರ ಏನು ಎಂಬುದನ್ನು ಸಾರ್ವಜನಿಕರು ತಿಳಿದಿರಬೇಕು ಎಂದು ಹೇಳಿದರು.

ಸುಗಮ ಶಿಕ್ಷಾ ಮುಖ್ಯಸ್ಥೆ ಉಷಾ ಮಾತನಾಡಿ, ಸರ್ಕಾರಿ ಶಾಲೆಗಳು ಆಂಗ್ಲ ಭಾಷೆ ಹಾಗೂ ತಾಂತ್ರಿಕ ಶಿಕ್ಷಣ ವ್ಯವಸ್ಥೆ ಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳ ಮೇಲೆ ಆಸಕ್ತಿ ಸಾರ್ವಜನಿಕ ಅಥವಾ ಗ್ರಾಮೀಣ ಪ್ರದೇಶದ ಜನರಿಗೆ ಆಸಕ್ತಿ ಮೂಡುತ್ತದೆ ಎಂದರು.

Advertisement

ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಕೆ ಬಸವರಾಜ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಡಾ.ಎ.ಎನ್‌.ಪ್ರಕಾಶ್‌ಗೌಡ, ಅಪರ ಜಿಲ್ಲಾಧಿಕಾರಿ ಎಂ ಎಲ್‌.ವೈಶಾಲಿ, ಉಪಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್‌. ಮಂಜುನಾಥ್‌, ವಕೀಲರ ಸಂಘದ ಅಧ್ಯಕ್ಷ ಜಿ.ಪಿ. ಶಂಕರ್‌ ಭಾಗವಸಿದ್ದರು.

ಗಮನ ಸೆಳೆದ ಮಕ್ಕಳ ಸಂಸತ್‌: ಹಾಸನ ತಾಲೂಕಿನ ಬಿ.ಕಾಟೀಹಳ್ಳಿ, ಬೂವನಹಳ್ಳಿ, ದೇವೆಗೌಡ ನಗರ, ಹನುಮಂತಪುರ, ದೊಡ್ಡ ಮಂಡಿಗನಹಳ್ಳಿ ಹಾಗೂ ಸಿದ್ದಯ್ಯನಗರ 7 ಶಾಲೆಗಳಿಂದ ಸುಮಾರು 140 ವಿದ್ಯಾರ್ಥಿಗಳು, ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು. 

ವಿದ್ಯಾಥಿನಿಯೊಬ್ಬರು ಸ್ಪೀಕರ್‌ ಆಗಿ ಸಭೆಯನ್ನು ನಿರ್ವಸಿದರು. ಯುವ ಪ್ರತಿಭಾವಂತ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಾಗಿ, ವಿಧ ಸಚಿವರಾಗಿ ಪಾಲ್ಗೊಂಡು ತಮ್ಮ ಇಲಾಖೆಗಳಿಗೆ ಸಂಬಂಧಿಸಿಂತೆ ಪ್ರಶ್ನೆಗಳಿಗೆ ಉತ್ತರಿಸಿ ಅಭಿಪ್ರಾಯ ಪಂಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next