ತಿ.ನರಸೀಪುರ: ವಿದ್ಯಾರ್ಥಿಗಳು ಬದುಕಿನಲ್ಲಿ ನಿರ್ದಿಷ್ಟವಾದ ಗುರಿ ಹೊಂದಿರಬೇಕು. ಆ ಗುರಿ ತಲುಪಲು ಅಡ್ಡಿಯಾಗುವ ಬಾಹ್ಯ ಆಕರ್ಷಣೆ, ಕೆಟ್ಟ ಸಹವಾಸ ಅಥವಾ ಕೆಟ್ಟ ಪರಿಸರದ ಪ್ರಭಾವಕ್ಕೆ ಒಳಗಾಗಬಾರದು ಆಗ ಮಾತ್ರ ಸಾಧನೆ ಸಾಧ್ಯ ಎಂದು ಬೆಂಗಳೂರಿನ ಪೂರ್ಣಪ್ರಜಾn ವಿದ್ಯಾನಿಕೇತನದ ಮುಖ್ಯೋಪಾಧ್ಯಾಯಿನಿ ದಮಯಂತಿ ಹೇಳಿದರು
ಪಟ್ಟಣದ ಪಿಆರ್‌ಎಂ ವಿಜಯ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ “ಕಲರವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಅನುಕೂಲಗಳಿವೆ ಅಲ್ಲಿ ನಾನು ಏನೋ ಸಾಧಿಸುತ್ತೇವೆ ಎಂಬ ಭಾವನೆ ಇರಬಾರದು, ಗ್ರಾಮೀಣ ಪ್ರದೇಶದ ಪ್ರಕೃತಿಯ ಮಡಿಲಲ್ಲಿ ನೀವು ಇಲ್ಲಗಳ ನಡುವೆ ಶೈಕ್ಷಣಿಕ ಅಥವಾ ಸಾಮಾಜಿಕವಾಗಿ ಪ್ರಗತಿ ಸಾಧಿಸುವುದಾದರೆ ಅದನ್ನು ಸಾಧನೆ ಎನ್ನುತ್ತೇವೆ ಎಂದರು.
ಕಿರುತೆರೆ ಕಲಾವಿದೆ ಸುಪ್ರೀತ ಜಿ.ಶೆಟ್ಟಿ ಮಾತನಾಡಿ, ತಂದೆ – ತಾಯಿ ಹಾಗೂ ಗುರುಗಳ ಮಾರ್ಗ ದರ್ಶನದಲ್ಲಿ ಮುನ್ನಡೆದಲ್ಲಿ ನಾವು ಎತ್ತರ ಬೆಳೆದು ಸಾಧನೆ ಮಾಡಲು ಸಾಧ್ಯವಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ರಂಗಸೌರಭ ತಂಡದಲ್ಲಿ ರಂಗ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ನಮ್ಮ ಗುರುಗಳಾದ ಪ್ರಭಾಕರ್ ಹಾಗೂ ಪದ್ಮನಾಭ್ ಪ್ರೇರೇಪಿಸಿದ ಫಲವಾಗಿ ಇಂದು ಒಬ್ಬ ಕಲಾವಿದೆಯಾಗಿ ನಿಮ್ಮ ಮುಂದೆ ನಿಂತಿದ್ದೇವೆ.
ನಮಗೆ ಪಾಠ ಕಲಿಸಿದ ಗುರುಗಳ ಜತೆ ವೇದಿಕೆಯಲ್ಲಿ ಕುಳಿತು ಕೊಳ್ಳುವ ಅವಕಾಶ ದೊರಕಿರುವುದೇ ನಮಗೆ ಗೌರವ ತರುವ ವಿಷಯ ಎಂದು ತಿಳಿಸಿದರು. ರಂಗಭೂಮಿ ಕಲಾವಿದ ಹಾಗೂ ನಟ ಕೆ. ಕೃಷ್ಣ, ಬಿಎಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಪೊ›. ಆರ್.ವಿ. ಪ್ರಭಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪೊ›. ಎ.ಪದ್ಮನಾಭ್, ಉಪಪ್ರಾಂಶುಪಾಲ ಡಾ. ಚಂದ್ರಮೋಹನ್, ಡಾ.ಲ.ನಾ. ಸ್ವಾಮಿ, ಪಿಆರ್‌ಎಂ ಪಿಯು ಕಾಲೇಜು ಪ್ರಾಂಶುಪಾಲ ಎಸ್.ಸಿದ್ದೇಶ್, ಬಿಎಚ್‌ಎಸ್ ಕೈಗಾರಿಕಾ ತರಬೇತಿ ಕೆಂದ್ರದ ಪ್ರಾಂಶುಪಾಲ ಸಿ.ಪ್ರಸನ್ನಕುಮಾರ್, ಅಧೀಕ್ಷಕ ಆರ್.ಸಾಂಬಶಿವಯ್ಯ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.