ಚಿಕ್ಕಬಳ್ಳಾಪುರ: ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಯಬೇಕಾದರೆ ಇಂತಹ ಸಂತೆ ಮೇಳದ ರೀತಿಯ ಶೈಕ್ಷಣಿಕ ಕಾರ್ಯಕ್ರಮಗಳು ನಡೆಯುವುದರಿಂದ ಅವರಲ್ಲಿ ಸಮಾಜದಪ್ರಜ್ಞೆ ಬೆಳೆಯುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಎನ್. ಮಂಜುನಾಥ ಅಭಿಪ್ರಾಯಪಟ್ಟರು.
ತಾಲೂಕಿನ ಎಸ್ ಗೊಲ್ಲಹಳ್ಳಿ ಕ್ಲಸ್ಟರ್ ಸರ್ಕಾರಿ ಶಾಲೆಗಳಾದ ಕಠಾರ ಕದರೇನಹಳ್ಳಿ ಮತ್ತು ನಲ್ಲ ಕದರೇನಹಳ್ಳಿ ಸಹಯೋಗದಲ್ಲಿ ನಡೆದ ಮಕ್ಕಳ ಸಂತೆ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಪಾಠಪ್ರವಚನಗಳ ಜತೆಗೆ ವ್ಯವಹಾರ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಕೃಷಿಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈತರ ಕಷ್ಟಗಳನ್ನುಅರಿತುಕೊಳ್ಳಲು ಸಹಕಾರಿ ಆಗುತ್ತದೆ ಎಂದರು.
ಸುಮಾರು 30ಕ್ಕೂ ಹೆಚ್ಚು ಮಕ್ಕಳು ಸಂತೆ ಮೇಳ ಕಾರ್ಯಕ್ರಮದಲ್ಲಿ ಮಾರಾಟ ಪ್ರದರ್ಶನ ಮಾಡುತ್ತಿದ್ದರು.ವಿಭಿನ್ನ ರೀತಿಯ ಹಣ್ಣು ಹಂಪಲಗಳು, ತರಕಾರಿಗಳು, ಮಕ್ಕಳ ತಿಂಡಿ ತಿನಿಸುಗಳಾದ ಚಕ್ಕುಲಿ, ನಿಪ್ಪಟ್ಟು, ಬೂಂದಿ, ಚುರುಮುರಿ, ತಂಪು ಪಾನೀಯ ಮತ್ತು ಗೃಹ ಉಪಯೋಗಿ ವಸ್ತುಗಳನ್ನುಸಂತೆ ಮೇಳದ ಆಕರ್ಷಣೆಯಾಗಿತ್ತು.ಶಾಲೆಯ ಮುಖ್ಯ ಶಿಕ್ಷಕರಾದ ಶಾಂತಮ್ಮ ನರಸಿಂಹಮೂರ್ತಿ ಮತ್ತು ಸಹ ಶಿಕ್ಷಕ ಮಂಜುನಾಥ ಇದ್ದರು.