Advertisement

Kerala: ಶೀಘ್ರವೇ ಕೇರಳದಲ್ಲೂ ತಿಂಗಳಿಗೆ 4 ಬ್ಯಾಗ್‌ ರಹಿತ ದಿನ

08:35 PM Jul 27, 2024 | Team Udayavani |

ನವದೆಹಲಿ:  ಮಣ ಭಾರದ ಶಾಲಾ ಬ್ಯಾಗ್‌ಗಳನ್ನು ಹೊತ್ತು ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಕೇರಳ ಸರ್ಕಾರ ಸಿಹಿ ಸುದ್ದಿ ನೀಡಲು ಹೊರಟಿದೆ.

Advertisement

“ಬ್ಯಾಗ್‌ ಫ್ರೀ ಡೇಸ್‌’ ಅಭಿಯಾನದ ಮೂಲಕ ತಿಂಗಳಿಗೆ ಕನಿಷ್ಠ 4 ದಿನ ಬ್ಯಾಗ್‌ ರಹಿತ ತರಗತಿಗಳನ್ನು ನಡೆಸಲು ನಿರ್ಧರಿಸಿದೆ.

ಈ ಕುರಿತು ಮಾತನಾಡಿದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ , ಮಕ್ಕಳು ಹಾಗೂ ಪೋಷಕರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ, ರಾಜ್ಯದ 1ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ ಈ ಉಪಕ್ರಮ ಜಾರಿಗೊಳಿಸುವುದಾಗಿ ತಿಳಿಸಿದರು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದೇ ಮಾದರಿಯ ಬ್ಯಾಗ್‌ ರಹಿತ ದಿನ ಜಾರಿಯಲ್ಲಿರುವುದು ಗಮನಾರ್ಹ.

Advertisement

Udayavani is now on Telegram. Click here to join our channel and stay updated with the latest news.

Next