Advertisement

ವಿದ್ಯಾರ್ಥಿನಿ ಮನೆಗೆ ಸೋಲಾರ್‌ ವಿದ್ಯುತ್‌ ಸಂಪರ್ಕ

12:14 PM Jul 05, 2018 | Harsha Rao |

ಉಡುಪಿ: ನಿಟ್ಟೂರು ಪ್ರೌಢ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಹುಲಿಗವ್ವಳ ಮನೆಗೆ ಮಣಿಪಾಲ ಕಂಟ್ರಿ 
ಇನ್‌ ಸೂಟ್ಸ್‌ ಹೊಟೇಲ್‌ ಸಂಸ್ಥೆಯ ಉದ್ಯೋಗಿಗಳ ವತಿಯಿಂದ ಸೆಲ್ಕೊ ಸೋಲಾರ್‌ ಸಂಸ್ಥೆಯ ಸೋಲಾರ್‌ ದೀಪ ವನ್ನು ಜು.2ರಂದು ಅಳವಡಿಸಲಾಯಿತು. ಜತೆಗೆ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ನೋಟ್ಸ್‌ ಪುಸ್ತಕ ವಿತರಿಸಲಾಯಿತು. 

Advertisement

ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 15 ವರ್ಷಗಳಿಂದ  ಶಾಲೆಯ 100ಕ್ಕೂ ಮೇಲ್ಪಟ್ಟ ವಿದ್ಯಾರ್ಥಿಗಳ ಮನೆಗೆ “ಮನೆಬೆಳಕು’ ಯೋಜನೆಯಡಿಯಲ್ಲಿ  ವಿದ್ಯುತ್‌ ಅಥವಾ ಸೋಲಾರ್‌ ಬೆಳಕಿನ ಸೌಲಭ್ಯ ಕಲ್ಪಿಸಲಾಗಿದೆ. ಈ ಬಾರಿ ಓರ್ವ ವಿದ್ಯಾರ್ಥಿನಿ ಮನೆಗೆ ಸೋಲಾರ್‌ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಕಂಟ್ರಿ ಇನ್‌ ಸಂಸ್ಥೆಯ ನಿರ್ದೇಶಕ ಅಕ್ಷಯ ಪ್ರಸಾದ್‌, ಎಚ್‌.ಆರ್‌. ಮ್ಯಾನೇಜರ್‌ ಪ್ರಶಾಂತ್‌, ಕಾರ್ತಿಕ್‌ ದೇವಾಡಿಗ, ನಿತಿನ್‌ ಹೆಗ್ಡೆ, ಸಂದೇಶ ಹೆಗ್ಡೆ, ರವಿ ಸಾಲ್ವಂಕರ್‌, ಸೆಲ್ಕೋ ಸಂಸ್ಥೆಯ ಎ.ಜಿ.ಎಂ. ಗುರುಪ್ರಕಾಶ್‌ ಶೆಟ್ಟಿ ಉಪಸ್ಥಿತರಿದ್ದರು. 
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಭಾಸ್ಕರ್‌ ಡಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಎಚ್‌. ಎನ್‌. ಶೃಂಗೇಶ್ವರ ನಿರೂಪಿಸಿ, ಶಿಕ್ಷಕಿ ಅನಸೂಯ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next