Advertisement

ಕಾಪಿ ಮಾಡಿ ಕೈ ಕೆಂಪಾಯ್ತು!

06:15 AM Aug 08, 2017 | Team Udayavani |

ಒಂದನೇ ಪ್ರಶ್ನೆಗೆ ನನಗೆ ಉತ್ತರ ಗೊತ್ತಿರಲಿಲ್ಲ. ನನ್ನ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಗೆಳತಿ ಪೂಜಾಳನ್ನು ಉತ್ತರ ಗೊತ್ತಿದೆಯಾ? ಎಂದು ಸನ್ನೆ ಮಾಡಿ ಕೇಳಿದೆ. 

Advertisement

ಅಂದು 5ನೇ ಕ್ಲಾಸಿನ ಮಧ್ಯವಾರ್ಷಿಕ ಪರೀಕ್ಷೆ ನಡೆಯುತ್ತಿತ್ತು. ಗಣಿತ ಪರೀಕ್ಷೆ ಪ್ರಾರಂಭವಾಯಿತು. ನಮ್ಮ ನಯನಾ ಟೀಚರ್‌ ಚೆನ್ನಾಗಿ ಪಾಠ ಮಾಡುತ್ತಿದ್ದುದರಿಂದ ಪಟಪಟನೆ ಉತ್ತರ ಬರೆಯಲಾರಂಭಿಸಿದೆವು. ಕೊನೆಯ ಭಾಗದಲ್ಲಿ 5 ಮಾರ್ಕಿನ 2 ಪ್ರಶ್ನೆಗಳಿದ್ದವು. ಆ ಪೈಕಿ ಒಂದನೇ ಪ್ರಶ್ನೆಗೆ ನನಗೆ ಉತ್ತರ ಗೊತ್ತಿರಲಿಲ್ಲ. ನನ್ನ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಗೆಳತಿ ಪೂಜಾಳನ್ನು ಉತ್ತರ ಗೊತ್ತಿದೆಯಾ? ಎಂದು ಸನ್ನೆ ಮಾಡಿ ಕೇಳಿದೆ. ಆಕೆ ಗೊತ್ತಿದೆ ಎಂದು ತಲೆ ಅಲ್ಲಾಡಿಸಿ, ಎರಡನೇ ಪ್ರಶ್ನೆಯ ಉತ್ತರ ಹೇಳಿಕೊಡುವಂತೆ ಬೇಡಿಕೆಯಿಟ್ಟಳು. ಇಬ್ಬರೂ ಪ್ರಶ್ನೆ ಪತ್ರಿಕೆಯಲ್ಲಿ ಉತ್ತರವನ್ನು ಬರೆದು ಎಕ್ಸ್‌ಚೇಂಜ್‌ ಮಾಡಿಕೊಂಡೆವು. ಈ ಸಂದರ್ಭ ಅವಳ ಪಕ್ಕದಲ್ಲಿ ಕೂತಿದ್ದ ಸೀನಿಯರ್‌ ಅಕ್ಕ ಮೇಘನಾ, ನಮ್ಮ ಚಲನವಲನಗಳನ್ನು ಗಮನಿಸುತ್ತಿದ್ದಳು.

ಯಾವತ್ತೂ ಸೈಲೆಂಟ್‌ ಆಗಿಯೇ ಇರುತ್ತಿದ್ದ ಮೇಘನಾ, ಟೀಚರ್‌ಗಳೊಂದಿಗೂ ಅಷ್ಟೊಂದು ಮಾತನಾಡುತ್ತಿರಲಿಲ್ಲ. ಹೀಗಾಗಿ ಆಕೆ ಕಂಪ್ಲೇಂಟ್‌ ಮಾಡಲಾರಳು ಎಂಬ ಧೈರ್ಯದಲ್ಲಿ ನಾವು ಕಾಪಿ ಮಾಡಿದೆವು. ಪರೀಕ್ಷೆ ಮುಗಿದು ನಾವು ಆಟವಾಡುತ್ತಿದ್ದ ಸಂದರ್ಭದಲ್ಲಿ ಪಿ.ಟಿ ಮೇಸ್ಟ್ರೆ ನಮ್ಮನ್ನು ಕರೆದು, ಸ್ಟಾಫ್‌ ರೂಂಗೆ ಬರುವಂತೆ ತಾಕೀತು ಮಾಡಿದರು. ಅಲ್ಲಿ ಮುಖ್ಯೋಪಾಧ್ಯಾಯಿನಿ ನಮ್ಮನ್ನು ತರಾಟೆಗೆ ತೆಗೆದುಕೊಂಡರು. ಬೆತ್ತದಿಂದ ಎರಡೇಟು ಕೊಟ್ಟರು. ಇದೆಲ್ಲ ಮೇಘನಾಳ ಕಿತಾಪತಿ ಎಂಬುದು ನಮಗೆ ಆಮೇಲೆ ತಿಳಿಯಿತು. ಕೆಂಪಾಗಿದ್ದ ಕೈಯನ್ನು ಉಜ್ಜಿಕೊಂಡು ಹೊರಬಂದ ನಾನು ಇನ್ನು ಮುಂದೆ ಎಂದಿಗೂ ಕಾಪಿ ಮಾಡಬಾರದೆಂದು ನಿರ್ಧರಿಸಿದೆ.

– ಪ್ರಜ್ಞಾ ಹೆಬ್ಟಾರ್‌, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next