Advertisement
ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಬೆಟ್ಟಂಪಾಡಿ ಪ.ಪೂ. ಕಾಲೇಜು ಆಶ್ರಯದಲ್ಲಿ ನ. 9ರಂದು ಬೆಟ್ಟಂಪಾಡಿಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ.ಪೂ. ಕಾಲೇಜಿನ ಬಾಲಕ, ಬಾಲಕಿಯರ ತ್ರೋಬಾಲ್ ಪಂದ್ಯವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಶುಭ ಹಾರೈಸಿದರು.
ಮುಖ್ಯ ಅತಿಥಿಯಾದ ತಾ.ಪಂ. ಸದಸ್ಯ ಹರೀಶ್ ಬಿಜತ್ರೆ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಶಿಸ್ತು, ನಿಯಮವನ್ನು ಅಳವಡಿಸಿಕೊಳ್ಳುವುದರೊಂದಿಗೆ ಕಠಿನ ಪರಿಶ್ರಮದ ಅಗತ್ಯವಿದೆ. ಇದಕ್ಕೆ ಹಿರಿಯರ ಮಾರ್ಗದರ್ಶನ, ಪ್ರೋತ್ಸಾಹ ಅಗತ್ಯ ಎಂದು ಹೇಳಿ ಶುಭ ಹಾರೈಸಿದರು. ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಸುಮತಿ ಅಧ್ಯಕ್ಷತೆ ವಹಿಸಿದ್ದರು. ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ಮೊಯಿದುಕುಂಞಿ ಕೋನಡ್ಕ, ಭವಾನಿ ಪಿ., ಪಾಣಾಜೆ ಗ್ರಾ.ಪಂ. ಸದಸ್ಯೆ ಯಶೋದಾ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ವೆಂಕಟ್ರಾವ್ ಬಿ., ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ನಾಗರಾಜ್ ಘಾಟೆ, ತಿಮ್ಮಣ್ಣ ರೈ ಆನಾಜೆ, ಪ್ರೌಢಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಕೆ.ಪಿ. ಭಟ್ ಕೋನಡ್ಕ, ಸದಸ್ಯರಾದ ಮಾಧವ ಪೂಜಾರಿ, ಅಬೂಬಕ್ಕರ್ ಕೊರಿಂಗಿಲ, ಆರ್.ಸಿ. ರೈ ಮದಕ ಮತ್ತಿತರರು ಉಪಸ್ಥಿತರಿದ್ದರು.
Related Articles
Advertisement
ಪಂದ್ಯಾಟದ ಫಲಿತಾಂಶಬಾಲಕರ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜು (ಪ್ರಥಮ), ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ (ದ್ವಿತೀಯ). ಬಾಲಕಿಯರ ವಿಭಾಗದಲ್ಲಿ ಶ್ರೀಕೃಷ್ಣ ಪದವಿಪೂರ್ವ ಕಾಲೇಜು ಪಟ್ಟೆ, ಬಡಗನ್ನೂರು (ಪ್ರಥಮ), ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ (ದ್ವಿತೀಯ) ಸ್ಥಾನ ಪಡೆದುಕೊಂಡರು. ಸಾಧಕರಿಗೆ ಗೌರವಾರ್ಪಣೆ
ಬೆಟ್ಟಂಪಾಡಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಾದ ನಡಿಗೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ದೀಕ್ಷಿತ್ ಕೆ. ಹಾಗೂ 3 ಮತ್ತು 5 ಸಾವಿರ ಮೀಟರ್ ಓಟದಲ್ಲಿ ತೃತೀಯ ಹಾಗೂ ಗುಡ್ಡಗಾಡು ಓಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹರ್ಷಿತ್ ನಿಡ್ಪಳ್ಳಿ ಅಲ್ಲದೆ ಇವರಿಗೆ ತರಬೇತಿ ನೀಡಿದ ನವೋದಯ ಪ್ರೌಢಶಾಲಾ ದೈಹಿಕ ಶಿಕ್ಷಕ ದಯಾನಂದ ರೈ ಕೊರ್ಮಂಡ ಅವರನ್ನು ಶಾಸಕರು ಹೂವು ನೀಡಿ ಗೌರವಿಸಿದರು.