Advertisement
ಅವರು ಶುಕ್ರವಾರ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋದ 14 ವಿಜ್ಞಾನಿಗಳ ತಂಡವು ಅದಮಾರು ಪೂರ್ಣಪ್ರಜ್ಞ ಪ. ಪೂ. ಕಾಲೇಜಿಗೆ ಆಗಮಿಸಿ ಅ. 4ರಿಂದ ಅ. 10ರ ವರೆಗೆ ಆಚರಿಸಲ್ಪಡುವ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮದ ಪ್ರಮುಖ ಅಂಗ ಪ್ರೌಢಶಾಲಾ ಮಕ್ಕಳಿಗೆ ಒಂದು ದಿನದ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯಅತಿಥಿಯಾಗಿದ್ದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ, ಖಗೋಳ ವಿಜ್ಞಾನಿ ಡಾ| ಎ.ಪಿ. ಭಟ್ ಮಾತನಾಡಿ, ಭಾರತೀಯ ಖಗೋಳ ವಿಜ್ಞಾನದ ಮೇರು ವ್ಯಕ್ತಿ ಉಡುಪಿ ರಾಮಚಂದ್ರ ರಾಯರ ಹುಟ್ಟೂರಿಗೆ ಇಸ್ರೋ ವಿಜ್ಞಾನಿಗಳು ಆಗಮಿಸಿರುವುದು ನಮ್ಮ ಹೆಮ್ಮೆ. ಚಂದ್ರಯಾನ 2ರ ಶೇ. 98ರಷ್ಟು ಯಶಸ್ಸಿನಿಂದಾಗಿ ಇಡಿಯ ವಿಶ್ವವೇ ಇಂದು ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳನ್ನು ಅಭಿನಂದಿಸಿದೆ. ಅಂತಹ ಚಂದ್ರಯಾನದ ಯಶಸ್ಸಿನ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಅದಮಾರಿಗೆ ಬಂದಿ ರುವುದೂ ನಮ್ಮ ಹೆಮ್ಮೆ ಎಂದರು. ಚಂದ್ರಯಾನ 2ರ ಸಹಾಯಕ ನಿರ್ದೇಶಕ ಎಚ್.ಎನ್. ಸುರೇಶ್ ಕುಮಾರ್ ಮಾತನಾಡಿ, “ಚಂದ್ರ ನಕ್ಷತ್ರಗಳಿಗೆ ಹೆಬ್ಟಾಗಿಲು’ ಆಗಿದ್ದು ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಇಸ್ರೋ ಸಾಧನೆಗಳು ಹಾಗೂ ಉಪಗ್ರಹಗಳು ಜನಸೇವೆಯಲ್ಲಿ ವಹಿಸುವ ಪಾತ್ರಗಳ ಬಗೆಗೆ ಮಾಹಿತಿ ಕಾರ್ಯಕ್ರಮದಲ್ಲಿ ವಿವರಿಸಲಾಗುವುದೆಂದರು.
Related Articles
Advertisement
ಅದಮಾರು ಪೂರ್ಣಪ್ರಜ್ಞ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಪೈ ಸ್ವಾಗತಿಸಿದರು. ನೀಶಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಜ್ಞಾ ಶೆಟ್ಟಿ ವಂದಿಸಿದರು. ಉಡುಪಿ ಜಿಲ್ಲೆಯ 32 ವಿವಿಧ ಪ್ರೌಢಶಾಲೆಗಳ 158 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜ್ಞಾನಿಗಳೊಂದಿಗೆ ಸಂವಾದ ನಡೆಯಿತು.
ದೂರ ಸಂವೇದಿ ಉಪಗ್ರಹ ವಾಹಕಗಳು, ಚಂದ್ರಯಾನ 2, ಮಂಗಳಯಾನ, ರಿಸೋರ್ಸ್ ಸ್ಯಾಟ್ ಉಪಗ್ರಹಗಳ ಸಹಿತ ವಿವಿಧ ಮಾಡೆಲ್‌ಗಳು, ಇಸ್ರೋ ಸಾಧನೆಗಳು, ಬಾಹ್ಯಾಕಾಶದಲ್ಲಿ ಸಾಧನೆಗಳ ಪಟ್ಟಿ, ಇಸ್ರೋ ಉಡ್ಡಯನದ ಬಳಿಕ ಅಂತರಿಕ್ಷದಲ್ಲಿ ನಮಗಿಂದು ವಿಶ್ವದ ಬೇರೆ ಬೇರೆ ದೇಶಗಳ ಟಿವಿ ಚಾನಲ್‌ಗಳನ್ನು ನೋಡಲು ಅನುಕೂಲವಾಗುವ, ಹವಾಮಾನದ ಕುರಿತಾಗಿ ಮಾಹಿತಿ ನೀಡುವ, ಕೃಷಿ ಸಂಬಂಧಿ ಮಾಹಿತಿಯನ್ನು ನೀಡುವ ಬೇರೆ, ಬೇರೆ ಉಪಗ್ರಹಗಳ ಪಟ್ಟಿಯನ್ನು ವೀಕ್ಷಿಸಿದ ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿದರು.