Advertisement

ಸ್ವಚ್ಛ ಶಾಲೆ ಪುರಸ್ಕಾರಕ್ಕೆ ಇನ್ನು ಖಾಸಗಿ ಶಾಲೆಗಳ ಪರಿಗಣನೆ

07:55 AM Sep 02, 2017 | Team Udayavani |

ಹೊಸದಿಲ್ಲಿ: ರಾಷ್ಟ್ರ ಮಟ್ಟದ “ಸ್ವಚ್ಛ ವಿದ್ಯಾಲಯ ಪುರಸ್ಕಾರ’ ಸ್ಪರ್ಧೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ದೇಶದ ಖಾಸಗಿ ಶಾಲೆಗಳನ್ನೂ ಪರಿಗಣಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ. 

Advertisement

ಈವರೆಗೂ ಕೇವಲ ಸರಕಾರಿ ಶಾಲೆಗಳಿಗೆ ಈ ಪ್ರಶಸ್ತಿ ಕೊಡಲಾಗುತ್ತಿತ್ತು. ಇನ್ನು ಮುಂದೆ ಕೇಂದ್ರ ಮತ್ತು ರಾಜ್ಯ ಸರಕಾರದ ಅಡಿ ಬರುವ ಶಾಲೆಗಳನ್ನೂ ಈ ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಪ್ರಸಕ್ತ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದ್ದಾರೆ. 

ಅಲ್ಲದೇ, “ಸ್ವಚ್ಛ  ವಿದ್ಯಾಲಯ ಪುರಸ್ಕಾರ’ ಸ್ಪರ್ಧೆಯನ್ನು ದೇಶದ ಪ್ರತಿ ಮೂಲೆಯ ಶಾಲೆಗಳಿಗೂ ತಲುಪಿಸಲು ಮತ್ತು ಮಕ್ಕಳನ್ನು ಸ್ವಚ್ಛತಾ ಅಭಿಯಾನ ರಾಯಭಾರಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಯುನಿಸೆಫ್ನ ಸಹಭಾಗಿತ್ವ ಪಡೆಯಲಾಗಿದೆ ಎಂದಿದ್ದಾರೆ. ಸ್ಪರ್ಧೆಯಲ್ಲಿ ಜಯಶಾಲಿಯಾಗುವ ಶಾಲೆಗಳಿಗೆ 50,000 ರೂ. ಬಹುಮಾನ ನೀಡಲಾಗುತ್ತದೆ. ಅದನ್ನು ಅವರು ಶಾಲೆಯ ಸ್ವಚ್ಛತಾ ಚಟುವಟಿಕೆಗೆ ಬಳಸಿಕೊಳ್ಳಬಹುದು. 

Advertisement

Udayavani is now on Telegram. Click here to join our channel and stay updated with the latest news.

Next