Advertisement
ಇತ್ತೀಚೆಗೆ ಅಗಲಿರುವ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟರನ್ನು ಕಡಂದಲೆಯ ಪ್ರದ್ಯುಮ್ನ ಮೂರ್ತಿ ಸ್ಮರಿಸಿಕೊಳ್ಳುವುದೂ ಸೇರಿದಂತೆ ವಿವಿಧ ಶಾಲೆ, ಪ್ರೌಢಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಕಾಸರಗೋಡು ಚಿನ್ಮಯ ವಿದ್ಯಾಲಯದ ಸನ್ನಿಧಿ ಟಿ. ರೈ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಉಡುಪಿ ಒಳಕಾಡು ಪ್ರೌಢಶಾಲೆಯ ನಚಿಕೇತ ನಾಯಕ್ ಅವರಿಂದ ಸಮಾರೋಪ ಭಾಷಣ, ಧಾಂ ಧೂಂ ಸುಂಟರಗಾಳಿ ನಾಟಕ ಪ್ರದರ್ಶನ, ಪುಟ್ಟಣ್ಣ ಕಣಗಾಲ್ ವೇದಿಕೆಯಲ್ಲಿ ಹಳೆಯ ಸದಭಿರುಚಿಯ ಕನ್ನಡ ಚಲನಚಿತ್ರಗಳ ಪ್ರದರ್ಶನವಿದೆ. ವಿಜ್ಞಾನ ಸಿರಿ -ವಿಜ್ಞಾನ ಮಾದರಿ ತಯಾರಿ, ಪ್ರದರ್ಶನ ಈ ಬಾರಿಯ ವಿಶೇಷ. 300ರಷ್ಟು ವಿದ್ಯಾರ್ಥಿಗಳು ವೇದಿಕೆ ಏರಲಿದ್ದಾರೆ.
ಮುಂಡ್ರುದೆಗುತ್ತು ರಾಮಮೋಹನ ರೈ ಆವರಣದಲ್ಲಿ ಗುರುವಾರದಿಂದ ರವಿವಾರದ ವರೆಗೆ ನಡೆಯಲಿರುವ “ಆಳ್ವಾಸ್ ಕೃಷಿ ಸಿರಿ’ ಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಉದ್ಘಾಟಿಸುವರು. ಕೃಷಿ ಬದುಕಿನ ಅನಾವರಣ ಕೃಷಿ ಸಿರಿಯಲ್ಲಿದೆ. ಗೇರುಕಟ್ಟೆ ಗಂಗಯ್ಯ ಶೆಟ್ಟಿ ವೇದಿಕೆ ಸೇರಿದಂತೆ ಹಲವು ವೇದಿಕೆಗಳಲ್ಲಿ ಮುಂಜಾನೆಯಿಂದ ತಡ ರಾತ್ರಿ ವರೆಗೆ ನಿರಂತರವಾಗಿ, ಇನ್ನೂ ಹಲವು ವೇದಿಕೆಗಳಲ್ಲಿ ಸಂಜೆಯಿಂದ ಸಾಂಸ್ಕೃತಿಕ ಕಲಾಪಗಳು ನಡೆಯಲಿವೆ. ಊಟೋಪಚಾರ, ವಾಸ್ತವ್ಯ
ಈ ಬಾರಿ ಎರಡು ಕಡೆ-ನೇತ್ರಾವತಿ ಹಾಸ್ಟೆಲ್ ಆವರಣ ಅಲ್ಲದೆ ಕೃಷಿಸಿರಿ ಆವರಣದಲ್ಲಿ- ಊಟೋಪಚಾರ ವ್ಯವಸ್ಥೆ ಆಗಿದೆ. ಒಂದು ಹೊತ್ತಿಗೆ ಮೊದಲ ಹಂತದಲ್ಲಿ 35,000 ಮಂದಿಗೆ ಅಡುಗೆ ವ್ಯವಸ್ಥೆ ಆಗಲಿದ್ದು ಮುಂದೆ ಜನರ ಸಂದಣಿ ನೋಡಿಕೊಂಡು ತಯಾರು ಮಾಡಲಾಗುತ್ತದೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಭೋಜನ ಏರ್ಪಡಿಸಲಾಗಿದೆ. 35,000ಕ್ಕೂ ಅಧಿಕ ಮಂದಿ ನುಡಿಸಿರಿಗೆ ಪ್ರತಿನಿಧಿಗಳಾಗಿ ನೋಂದಾಯಿಸಿದ್ದಾರೆ. ಎಷ್ಟು ಜನ ಬಂದರೂ ವಾಸ್ತವ್ಯಕ್ಕೆ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳಲಾಗುವುದು ಎಂದು ಸಂಘಟಕ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ.
Related Articles
ಕನ್ನಡ ಮಾಧ್ಯಮದಲ್ಲಿ ಎಸೆಸೆಲ್ಸಿವರೆಗೆ ಓದಿದ ಮತ್ತು ವಿವಿಧ ವಿಭಾಗಗಳಲ್ಲಿ ಶಿಕ್ಷಣ ಪಡೆ ದವರಿಗಾಗಿ ಡಿ. 3ರಂದು ಆಳ್ವಾಸ್ ಉದ್ಯೋಗ ಸಿರಿ ಎಂಬ ಉದ್ಯೋಗ ಮೇಳ ಏರ್ಪಡಿಸಿರುವುದು ಈ ಬಾರಿಯ ವಿಶೇಷಗಳಲ್ಲಿ ಒಂದು. ಆಸಕ್ತರು ನೇರವಾಗಿಯೂ (5 ಭಾವಚಿತ್ರ, 5 ಪ್ರತಿ ಸ್ವ ವಿವರ, ಅಂಕಪಟ್ಟಿಗಳೊಂದಿಗೆ) ಪಾಲ್ಗೊಳ್ಳಬಹುದು. ಯಾವುದೇ ಶುಲ್ಕವಿಲ್ಲ. ನುಡಿಸಿರಿ, ಉದ್ಯೋಗಸಿರಿ ನೋಂದಣಿಗೆ: www.alvas.nudisiri.com
Advertisement
ಆಳ್ವಾಸ್ ಗೂಡುದೀಪ ಸಿರಿ: ಗೂಡುದೀಪ ಸ್ಪರ್ಧೆಆಳ್ವಾಸ್ ನುಡಿಸಿರಿ ಸಂದರ್ಭ “ಆಳ್ವಾಸ್ ಗೂಡುದೀಪ ಸಿರಿ’ -ಗೂಡುದೀಪ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಆಯೋ ಜಿಸ ಲಾಗಿದೆ. ಡಿ. 1ರಿಂದ 3ರ ವರೆಗೆ ಗೂಡು ದೀಪ ಪ್ರದರ್ಶಿಸ ಲಾಗುವುದು. ಡಿ. 3ರಂದು ಸಾಯಂಕಾಲ ಬಹು ಮಾನ ವಿತರಿಸ ಲಾಗು ವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ.