Advertisement

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಹತ್ಯೆಗೈದ ಕಾಮುಕ ಶಿಕ್ಷಕ

10:30 PM Jan 29, 2021 | Team Udayavani |

ರಾಂಚಿ: ಕಾಮುಕ ಶಿಕ್ಷಕನೊಬ್ಬ 13 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಗೈದು, ವಿಷದ ಮಾತ್ರೆ ನೀಡಿ ಹತ್ಯೆಗೈದ ಅಮಾನುಷ ಘಟನೆ ಜಾರ್ಖಂಡ್‌ನ‌ ಪಲಾಮೌ ಎಂಬಲ್ಲಿ ನಡೆದಿದೆ.

Advertisement

35 ವರ್ಷದ ಶಿಕ್ಷಕ ಶಂಬು ಸಿಂಗ್‌ ವಿರುದ್ಧ ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಜ.25ರಂದು ವಿದ್ಯಾರ್ಥಿನಿ ಶೌಚಾಲಯಕ್ಕೆ ಧಾವಿಸಿದ್ದಾಗ ಶಂಬು ಅತ್ಯಾಚಾರಗೈದಿದ್ದಾನೆ. ಮರುದಿನವೂ ಖಾಲಿ ಇದ್ದ ಕ್ಲಾಸ್‌ರೂಮ್‌ನಲ್ಲಿ ವಿದ್ಯಾರ್ಥಿನಿ ಮೇಲೆ ದೃಷ್ಕೃತ್ಯ ಎಸಗಿದ್ದಾನೆ. ಬಳಿಕ ರಾತ್ರಿ ಆಕೆಯ ಮನೆಗೆ ನುಗ್ಗಿ, ಬಲವಂತವಾಗಿ ವಿಷದ ಟ್ಯಾಬ್ಲೆಟ್‌ ನೀಡಿ ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ಮತ್ತು ವಿಷವುಣ್ಣಿಸಿರುವ ಸಂಗತಿ ದೃಢಪಟ್ಟಿದೆ.

ಇದನ್ನೂ ಓದಿ:ನನ್ನ ತಮಾಷೆಯನ್ನು ಸುಪ್ರೀಂ ಗಂಭೀರವಾಗಿ ಸ್ವೀಕರಿಸಿದ್ದೇ ಅಚ್ಚರಿ: ಕುನಾಲ್‌ ಸಮರ್ಥನೆ

Advertisement

Udayavani is now on Telegram. Click here to join our channel and stay updated with the latest news.

Next