Advertisement

ಗಡ್ಡ, ಮೀಸೆ ಬೋಳಿಸುವಂತೆ ರ್ಯಾಗಿಂಗ್ : ಆರೋಪಿಗಳ ಬಂಧನ

04:59 PM Mar 05, 2021 | Team Udayavani |

ಮಂಗಳೂರು :  ಇಲ್ಲಿನ ಖಾಸಗಿ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳ ಮೇಲೆ ಅದೇ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಗಡ್ಡ, ಮೀಸೆ ತೆಗೆಯುವಂತೆ ರ್ಯಾಗಿಂಗ್ ಮಾಡಿರುವ ಘಟನೆ ನಡೆದಿದೆ.

Advertisement

ಮಂಗಳೂರಿನ ಪಂಪ್ ವೆಲ್ ಬಳಿ ಒಂಬತ್ತು ಜನ ಬಿಬಿಎ ವಿದ್ಯಾರ್ಥಿಗಳು ವಾಸವಿದ್ದು, ಆ ಮನೆಗೆ ನುಗ್ಗಿದ ಆರೋಪಿಗಳು, ನಾವು ನಿಮ್ಮ ಸೀನಿಯರ್, ನೀವೆಲ್ಲರು ಗಡ್ಡ. ಮೀಸೆ ಬೋಳಿಸಿಕೊಂಡು ಇರಬೇಕು. ಹೊರಗಡೆ ತಿರುಗಾಡಬಾರದು ಎಂದು ರ್ಯಂಗಿಂಗ್ ಮಾಡಿದ್ದಾರೆ. ಆರೋಪಿಗಳನ್ನು ಮಹಮ್ಮದ್ ಆದಿಲ್, ರಿಜಿನ್ ರಿಯಾಸ್ ಮತ್ತು ಮಹಮ್ಮದ್ ನಿಜಾಮುದ್ದೀನ್ ಎಂದು ಗುರುತಿಸಲಾಗಿದೆ.

ರ್ಯಾಗಿಂಗ್ ಬಗ್ಗೆ ಕೆವಿನ್ ಮಥಾಲ್ ಜೆಕೋಬ್ ದೂರು ನೀಡಿದ್ದು ಐಪಿಸಿ ಸೆಕ್ಷನ್ ಅಡಿಯಲ್ಲಿ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಲಾಗಿದೆ. ಅಲ್ಲದೆ ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next