Advertisement

ಯುವಕನ ಕೊಲೆ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

11:47 AM Sep 25, 2018 | Team Udayavani |

ಕಲಬುರಗಿ: ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಯುವಕನ ಕೊಲೆ ನಡೆದಿರುವುದನ್ನು ಖಂಡಿಸಿ ಹಾಗೂ ಸೂಕ್ತ ಬಂದೋಬಸ್ತ್ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದರು.

Advertisement

ಒಂದು ಹಂತದಲ್ಲಿ ವಿವಿ ಆಡಳಿತ ಭವನಕ್ಕೆ ನುಗ್ಗಿ ದಾಂಧಲೆ ಮಾಡಿದರು. ಸೋಮವಾರ ಬೆಳಗ್ಗೆಯಿಂದಲೇ ತರಗತಿ ಬಹಿಷ್ಕರಿಸಿ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು ಕೊಲೆ ಮಾಡಿದವರು ಯಾರೇ ಆಗಿರಲಿ ಮೊದಲು ಬಂಧವಾಗಬೇಕು. ಕೊಲೆ ಇಡೀ ವಿವಿ ವಿದ್ಯಾರ್ಥಿ ವಲಯದಲ್ಲಿ ಆಂತಕ ಹಾಗೂ ಭಯದ ವಾತಾವರಣ ಮೂಡಿಸಿದೆ. ವಿವಿಗೆ ಜೀವ ಕೈಯಲ್ಲಿ ಹಿಡಿದುಕೊಂಡು ಬರುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿವಿಯೊಳಗೆ ಯಾರಾದರೂ ಸರಳವಾಗಿ ನುಗ್ಗುತ್ತಿದ್ದಾರೆ. ಬಂದೋಬಸ್ತ್ ನಾಮಕವಾಸ್ತೆ ಎನ್ನುವಂತಾಗಿದೆ. ಇರುವ ಸೆಕ್ಯೂರಿಟಿ ಗಾಡ್ಸ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಂಜೆಯಂತೂ ಕಿಡಗೇಡಿಗಳು ನಿರ್ಭಯವಾಗಿ ನುಗ್ಗುತ್ತಿದ್ದಾರೆ. ಯಾರಿಗೆ ಯಾರೂ ಹೇಳದಂತಾಗಿದೆ.

ಬರೀ ಕುಲಪತಿಗಳ ನಿವಾಸಕ್ಕೆ ಮಾತ್ರ ಸಿಸಿ ಕ್ಯಾಮೆರಾ ಇದ್ದರೆ ಸಾಲದು. ಇಡೀ ವಿಶ್ವವಿದ್ಯಾಲಯ ಕ್ಯಾಂಪಸ್‌ದಾದ್ಯಂತ ಸಿಸಿ ಕ್ಯಾಮೆರಾ ಅಳವಡಿಸಬೇಕು. ವಿವಿ ಸುತ್ತುಗೋಡೆ ಎತ್ತರಿಸಬೇಕು. ವಿವಿ ಹಿಂದುಗಡೆಯೂ ಪ್ರದೇಶದಲ್ಲೂ ಸುತ್ತು ಗೋಡೆ ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೂ ವಿವಿ ಕುಲಪತಿಗಳು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಬಾರದೇ ಇದ್ದುದ್ದಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಕುಲಪತಿಗಳಿರುವ ವಿವಿ ಆಡಳಿತ ಭವನಕ್ಕೆ ನುಗ್ಗಿದರು. ಗದ್ದಲಕ್ಕೆ ಮುಂದಾದರು. ಇಷ್ಟೋತ್ತಿಗೆ ಪೊಲೀಸು ವಿದ್ಯಾರ್ಥಿಗಳನ್ನು ತಡೆದು ಮುಂದಾಗುವುದನ್ನು ತಪ್ಪಿಸಿದರು.

ಕುಲಪತಿ ಭರವಸೆ: ತದನಂತರ ಪ್ರತಿಭಟನಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಿವಿ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ, ಬಂದೋಬಸ್ತ್ ಇನ್ನಷ್ಟು ಬಲಪಡಿಸಲಾಗುವುದು. ಬಹು ಮುಖ್ಯವಾಗಿ ಸುತ್ತುಗೋಡೆ ಎತ್ತರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. 100 ಅಡಿ ಅಂತರದಲ್ಲಿ ಕಂಬಗಳಿಗೆ ಸಿಸಿ ಕ್ಯಾಮೆರಾ  ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.

ಮತ್ತೆ ಹೋರಾಟ: ಬರೀ ಭರವಸೆ ನೀಡಿದರೆ ಸಾಲದು. ವಾರ ಇಲ್ಲವೇ 10 ದಿನದೊಳಗೆ ಬೇಡಿಕೆ ಈಡೇರದಿದ್ದರೆ ಮತ್ತೆ
ಹೋರಾಟಕ್ಕೀಳಿಯುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು. ತದನಂತರ ಕುಲಪತಿಗಳು ಬಂದೋಬಸ್ತ್ಹೆ ಚ್ಚಳ ಹಿನ್ನೆಲೆಯಲ್ಲಿ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next