Advertisement

ವಿದ್ಯಾರ್ಥಿನಿ ಸಾವು; ಗರಗಪಳ್ಳಿಯಲ್ಲಿ ಪ್ರತಿಭಟನೆ

05:00 PM Mar 07, 2021 | Team Udayavani |

ಚಿಂಚೋಳಿ: ಕಲಬುರಗಿ ನಗರದ ಚಂದ್ರಕಾಂತ ಪಾಟೀಲ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲ್ಲಿಕಾ ಹಣಮಂತರಾಯ ಹುಲಿ (17) ವಸತಿ ನಿಲಯದ ಮೇಲಿಂದ ಬಿದ್ದು ಮೃತಪಟ್ಟ ಘಟನೆಯನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಗರಗಪಳ್ಳಿ ಗ್ರಾಮಸ್ಥರು ಚಿಂಚೋಳಿ-ತಾಂಡೂರ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕಳೆದ ಮಾರ್ಚ್‌ 4ರಂದು ವಿದ್ಯಾರ್ಥಿನಿ ವಸತಿ ನಿಲಯದ ಕಟ್ಟಡದ ಮೇಲಿಂದ ಬಿದ್ದಿದ್ದಳು. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಹೆದ್ರಾಬಾದ್‌ಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮಾ.5ರಂದು ಮೃತಪಟ್ಟಿದ್ದಾಳೆ ಎಂದು ತಿಳಿಸಲಾಗಿದೆ. ಆದರೆ ವಸತಿ ನಿಲಯದ ಸುತ್ತಲೂ ಐದು ಅಡಿ ಎತ್ತರದ ಗೋಡೆಯಿದೆ. ಅಲ್ಲದೇ ಕಬ್ಬಿಣದ ಸಲಾಖೆಯನ್ನು ಅಳವಡಿಸ ಲಾಗಿದೆ. ಹೀಗಿದ್ದಾಗ ಮೇಲಿನಿಂದ ಬೀಳಲು ಹೇಗೆ ಸಾಧ್ಯ ಎಂದು ಮೃತಪಟ್ಟ ಯುವತಿ ತಂದೆ ಹಣಮಂತರಾಯ ಹುಲಿ ಪ್ರಶ್ನಿಸಿದರು.

ಚಂದ್ರಕಾಂತ ಪಾಟೀಲ ಕಾಲೇಜಿನ ವಸತಿ ನಿಲಯದ ಆಡಳಿತ ಮಂಡಳಿ ನಿರ್ಲಕ್ಷÂತನದಿಂದ ಈ ಘಟನೆ ನಡೆದಿದೆ. ವಸತಿ ನಿಲಯದಲ್ಲಿ ಯಾವುದೇ ಭಾಗದ ಕೋಣೆಗಳಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಕಟ್ಟಡದ ಮೇಲಿಂದ ಬಿದ್ದಳ್ಳೋ, ಇಲ್ಲವೇ ಮೇಲಿಂದ ನೂಕಲಾಗಿ ದೆಯೇ ಎನ್ನುವ ಕುರಿತು ಶಂಕೆಯಿದೆ. ಪ್ರಕರಣ ಕಲಬುರಗಿ ಎಂ.ಬಿ. ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಸೂಕ್ತ ತನಿಖೆಯಾಗಲು ಪ್ರಕರಣವನ್ನು ಸಿಒಡಿಗೆ ಒಪ್ಪಿಸಬೇಕೆಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗೌತಮ ಪಾಟೀಲ, ಗೌರಿಶಂಕರ ಉಪ್ಪಿನ, ಸುರೇಶ ದೇಶಪಾಂಡೆ, ಸಿದ್ದಯ್ಯ ಸ್ವಾಮಿ, ಶಂಭುಲಿಂಗ ಶಿವಪುರೆ, ಉಮಾ ಪಾಟೀಲ, ಮಾರುತಿ ಗಂಜಗಿರಿ, ಚಿತ್ರಶೇಖರ ಪಾಟೀಲ, ಅಲ್ಲಮಪ್ರಭು ಹುಲಿ ಒತ್ತಾಯಿಸಿದರು.

ನಂತರ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿಗೆ ಮನವಿ ಪತ್ರ ಸಲ್ಲಿಸಿದರು. ಸಿಪಿಐ ಮಹಾಂತೇಶ ಪಾಟೀಲ, ಜಿ.ಕೆ. ಜಗದೀಶ ಸುಲೇಪೇಟ ಬಂದೋಬಸ್ತ್ ಮಾಡಿದ್ದರು. ನಾಲ್ಕು ತಾಸುಗಳ ಕಾಲ ಪ್ರತಿಭಟನೆ ನಡೆದಿದ್ದರಿಂದ ತೆಲಂಗಾಣ, ತಾಂಡೂರ, ಚಿಂಚೋಳಿ ನಗರ ಪ್ರದೇಶಕ್ಕೆ ಹೋಗುವ ಪ್ರಯಾಣಿಕರು ಪರದಾಡುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next