ದೋಟಿಹಾಳ: ಶಾಲಾ-ಕಾಲೇಜು ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಬುಧವಾರ ಗ್ರಾಮದ ಬಸ್ ನಿಲ್ದಾಣ ಹತ್ತಿರ ಪ್ರತಿಭಟನೆ ನಡೆಸಿದರು.
ಈ ವೇಳೆ ಜಿಪಂ ಸದಸ್ಯ ಕೆ. ಮಹೇಶ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಕೊಪ್ಪಳ ವಿಭಾಗದ ಎಲ್ಲ ವೇಗಧೂತ ಬಸ್‌ಗಳನ್ನು ದೋಟಿಹಾಳ ಸಮಾರ್ಗವಾಗಿ ಓಡಿಬೇಕು. ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಒದಗಿಸಬೇಕು. ಇಲ್ಲದಿದ್ದರೆ ಕುಷ್ಟಗಿ ಬಸ್ ಡಿಪೋ ಎದರು ಪ್ರತಿಭಟನೆ ಮಾಡಲಾಗುವುದು ಎಂದು ಜಿಪಂ ಸದಸ್ಯ ಕೆ. ಮಹೇಶ ಎಚ್ಚರಿಕೆ ನೀಡಿದ್ದರು.
ಅಧಿ ಕಾರಿಗಳು ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಇಲ್ಲಕಲ್ ನಗರಕ್ಕೆ ವಿದ್ಯಾಭ್ಯಾಸಕ್ಕೆಂದು ಹೋಗಿ ಸಬರಲು ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವುದು ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಕೊಪ್ಪಳ ವಿಭಾಗದ ಎಲ್ಲಾ ವೇಗದೂತ ಬಸ್ ಗಳನ್ನು ದೋಟಿಹಾಳ ಮಾರ್ಗವಾಗಿ ಓಡಿಸಲು ಒಂದು ವಾರದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅಧಿ ಕಾರಿಗಳು ಮಾಹಿತಿ ನೀಡಿದ್ದಾರೆ. ಒಂದು ವೇಳೆ ಅಧಿ ಕಾರಿಗಳು ಮಾತಿಗೆ ತಪ್ಪಿದರೆ ನಿಮ್ಮ ಜೊತೆ ಇರುತ್ತೇನೆ. ವಿದ್ಯಾರ್ಥಿಗಳ ಬದಲು ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಕೂಡಿಕೊಂಡು ಕುಷ್ಟಗಿ ಬಸ್ ಡಿಪೋ ಎದರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಜಿಪಂ ಸದಸ್ಯರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಪಂ ಸದಸ್ಯ ಯಂಕಪ್ಪ ಚವ್ಹಾಣ ಮಾತನಾಡಿ, ವಿದ್ಯಾರ್ಥಿಗಳು ಸತತ ಹತ್ತು ವರ್ಷಗಳಿಂದ ಸರಿಯಾದ ಸಮಯಕ್ಕೆ ಬಸ್ ಬಿಡಬೇಕೆಂದು ಮನವಿ ಮಾಡಿಕೊಂಡರು. ಕುಷ್ಟಗಿ ಘಟಕದ ಅಧಿಕಾರಿಗಳು ಸ್ಪಂದನೆ ಮಾಡದ ಕಾರಣ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವಂತಾಗಿದೆ ಎಂದು ಹೇಳಿದರು.
ತಾಪಂ ಸದಸ್ಯ ಮಹಾಂತೇಶ ಬಾದಾವಿ ಅವರು ಮಾತನಾಡಿದರು. ಪ್ರತಿಭಟನೆ ಸ್ಥಳಕ್ಕೆ ಕುಷ್ಟಗಿ ಡಿಪೋ ಅಧಿಕಾರಿಗಳಾದ ಕಾಸೀಂಸಾಬ್, ಸಣ್ಣಕುಂಟಪ್ಪ ಅವರು ಭೇಟಿ ನೀಡಿ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು.
ಇದನ್ನೂ ಓದಿ :ವಿಜಯಪುರ: ಸಾಗುವಳಿ ಹಕ್ಕುಪತ್ರ ವಿತರಿಸಿ
ಪ್ರತಿಭಟನೆಯಲ್ಲಿ ದೋಟಿಹಾಳ ಗ್ರಾಪಂ ಅಧ್ಯಕ್ಷರು, ದೋಟಿಹಾಳ-ಕೇಸೂರ ಗ್ರಾಪಂ ಸದಸ್ಯರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.