Advertisement

ಸ್ಕೂಟರು ಕಾರು ಬಿಟ್ಟು ಬಿಡಿ, ಆಕಾಶಕ್ಕೇ ಲಗ್ಗೆ ಇಡಿ

03:30 PM Jan 28, 2017 | Team Udayavani |

ಆಕಾಶದಲ್ಲಿ ಹಾರುವ ವಿಮಾನವನ್ನು ನೋಡಿ ಅದೆಷ್ಟೋ ಮಂದಿ ನಾನೂ ಒಂದಲ್ಲ ಒಂದಿನ ವಿಮಾನದಲ್ಲಿ ಹೋಗೇ ಹೋಗುತ್ತೇನೆ ಅಂತ ಆಸೆ ಪಟ್ಟಿರುತ್ತಾರೆ. ಇನ್ನು ಕೆಲವರ ಆಸೆ ಅದಕ್ಕಿಂತ ಒಂದು ಲೆವೆಲ್‌ ಜಾಸ್ತಿಯೇ ಇರುತ್ತದೆ. ಅದೇನೆಂದರೆ ವಿಮಾನ ಹಾರಿಸುವುದು. ವಿಪರ್ಯಾಸವೆಂದರೆ ಬಹುತೇಕರ ಕನಸು ಅರ್ಧದಲ್ಲೇ ಕೊನೆಯಾಗಿರುತ್ತದೆ. ಈಗ ಕಾಲ ವೇಗವಾಗಿರುವುದರಿಂದ ಕನಸು ಅರ್ಧದಲ್ಲೇ ನಿಂತುಹೋಗಬೇಕಾಗಿಲ್ಲ. ಆಸೆಪಟ್ಟವರೆಲ್ಲಾ ವಿಮಾನ ಹಾರಿಸಲು ಕಲಿಯಬಹುದು. ವಿಮಾನ ಹಾರಿಸಲು ಕಲಿಸುವ ಒಂದು ಸ್ಕೂಲು ನಮ್ಮೂರಲ್ಲಿದೆ. ಅದರ ಹೆಸರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ.

Advertisement

ಏನಿದು?
ಇದೊಂದು ಸರ್ಕಾರಿ ಶಾಲೆ. ವೈಮಾನಿಕ ತರಬೇತಿ ನೀಡುವ ಶಾಲೆ. ಇಲ್ಲಿ ಮೂರು ಥರದ ಕೋರ್ಸು ಇದೆ.
1. ಸ್ಟುಡೆಂಟ್ಸ್‌ ಪೈಲೆಟ್‌ ಲೈಸೆನ್ಸ್‌
ಈ ಕೋರ್ಸು ಎಲ್‌ಎಲ್‌ಆರ್‌ ಥರ. ಉಳಿದೆರಡು ಕೋರ್ಸುಗಳನ್ನು ಕಲಿಯಬೇಕಾದರೆ ಈ ಕೋರ್ಸು ಕಲಿಯುವುದು ಕಡ್ಡಾಯ. ಹತ್ತನೇ ಕ್ಲಾಸು ಪಾಸಾದ, ವಯಸ್ಸು 16 ದಾಟಿದ ಯಾರು ಬೇಕಾದರೂ ಈ ಕೋರ್ಸಿಗೆ ಸೇರಿಕೊಳ್ಳಬಹುದು.

2. ಪ್ರೈವೇಟ್‌ ಪೈಲೆಟ್‌ ಲೈಸೆನ್ಸ್‌
ವಯಸ್ಸು ಹದಿನೇಳು ದಾಟಿದವರು ಈ ಕೋರ್ಸಿಗೆ ಸೇರಿಕೊಳ್ಳಬಹುದು. ಹತ್ತನೇ ಕ್ಲಾಸು ಪಾಸಾಗಿರಬೇಕು. ಈ ಕೋರ್ಸಿನ ಅವಧಿ ಒಂದು ವರ್ಷ. 

3. ಕಮರ್ಷಿಯಲ್‌ ಪೈಲೆಟ್‌ ಲೈಸೆನ್ಸ್‌
ಈ ಕೋರ್ಸು ಕಲಿತವರು ಪೈಲೆಟ್‌ಗಳಾಗಬಹುದು. ವಿಜ್ಞಾನ ವಿಭಾಗದಲ್ಲಿ 10+2 ಉತ್ತೀರ್ಣರಾದವರಿಗೆ ಮಾತ್ರ ಈ ಕೋರ್ಸು. ಎರಡು ವರ್ಷ ಅವಧಿಯ ಈ ಕೋರ್ಸು ಕಲಿತರೆ ಕಮರ್ಷಿಯಲ್‌ ವಿಮಾನಗಳನ್ನು ಹಾರಿಸಬಹುದು.

ಹೇಗೆ?
ಈ ಯಾವ ಕೋರ್ಸುಗಳನ್ನು ಕಲಿಯುವುದಾದರೂ ಆರೋಗ್ಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಇಂಡಿಯನ್‌ ಏರ್‌ಕ್ರಾಫ್ಟ್ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಕಲಿಯಲು ಅನುಮತಿ ದೊರೆಯದು.

Advertisement

ಫೀಸು- ಅಪ್ಲಿಕೇಷನ್‌ ಫೀಸು ರೂ.4000. ವಿಮಾನ ಹಾರಿಸಲು ಗಂಟೆಗೆ ರೂ.9500. ಇನ್ನುಳಿದ ಮಾಹಿತಿಯನ್ನು ದೂರವಾಣಿ ಕರೆ ಮಾಡಿ ಅಥವಾ ವೆಬ್‌ಸೈಟ್‌ನಲ್ಲಿ ತಿಳಿದುಕೊಳ್ಳಬಹುದು.

ಎಲ್ಲಿ- ಸರ್ಕಾರಿ ವೈಮಾನಿಕ ತರಬೇತಿ ಶಾಲೆ, ಜಕ್ಕೂರು ವಿಮಾನ ನಿಲ್ದಾಣ, ಯಲಹಂಕ ಅಂಚೆ
ದೂ- 9986656788, 9483530582, 080 23332251 
ಇಮೇಲ್‌- gfts.kar@gmail.com
ವೆಬ್‌ಸೈಟ್‌-  //gfts.kar.nic.in/

Advertisement

Udayavani is now on Telegram. Click here to join our channel and stay updated with the latest news.

Next