Advertisement

ಸ್ಟೂಡೆಂಟ್‌ ಲೈಫ್ 

04:36 PM Oct 20, 2017 | |

ಸ್ಟೂಡೆಂಟ್‌ ಲೈಫ್ ಅಂದರೆನೇ ಹಾಗೆ. ಎಲ್ಲಿ ಕಾಲೇಜ್‌ಗೆ ರಜೆ ಸಿಗುತ್ತದೆಯೋ ಎಂದು ಕಾಯ್ತಾ ಇರಿ¤àವಿ. ಇಲ್ಲವಾದರೆ ಬಂಕ್‌ ಹಾಕಲಿಕ್ಕೆ ಸ್ಟೂಡೆಂಟ್‌ಗಳಿಗೆ ಹೇಳಿಕೊಡಬೇಕಾಗಿಲ್ಲ.ಶನಿವಾರ ಬಂದರೆ ಕಾಲೇಜು ಅರ್ಧ ದಿನ ಅಂತ ಖುಷಿ. ಸಂಡೇ ಎಲ್ಲಿಯೆಲ್ಲ ಹೋಗಬೇಕು ಅಂತ ತುಂಬಾ ಪ್ಲಾನ್‌ ನಡೆಯುತ್ತದೆ. ಆದರೆ ಭಾನುವಾರದ ನಿದ್ದೆ ಬಿಡಲು ಸ್ವಲ್ಪ ಕಷ್ಟನೇ. ಸಹಜವಾಗಿ ಅದೊಂದೇ ದಿನ ಲೇಟ್‌ ಏಳುವುದು. ಸಂಡೇ ಫ‌ುಲ್‌ ಮಸ್ತಿ ಮಾಡಿದಾಗ ಬೇಡ ಅಂದರೂ ನೆನಪಾಗುವುದು ನಾಳೆ ಕಾಲೇಜು ಸೆಮಿನಾರ್‌, ಅಸೈಮೆಂಟ್‌ಗಳ ಡೆಡ್‌ಲೈನ್‌. ಏಕಾದರೂ ಸೋಮವಾರ ಬರುತ್ತೋ… ಅಂತ ಅನ್ನಿಸುವುದುಂಟು ಒಂಥರ ಸಂಡೇ ನಂತರ ಬರುವುದು ಮಂಡೆ. ಅಂದರೆ “ಮಂಡೆ ಬೆಚ್ಚಮಾಡುವ ದಿನ’ ಅಂತ.ಕಾಲೇಜ್‌ಗೆ ಬೇಗ ಹೋಗಬೇಕು ಅಂತ ಎಷ್ಟು ಬೇಗ ಗಡಿಯಾರ ತಿವುಚಿದರೂ ಅಷ್ಟೇನೆ. ಬೇಗ ಎದ್ದೇಳುವ ಲಕ್ಷಣ ಬರುವುದು ಮಾತ್ರ ಪರೀಕ್ಷೆ ಟೈಮ್‌ಲ್ಲಿ ಮಾತ್ರ. ಮತ್ತೆಲ್ಲ ದಿನ ಅಲಾರಾಮ್‌ ಎಷ್ಟೇ ಹೂಡ್ಕೊಂಡ್ರೂ ಅದನ್ನು ಬಂದ್‌ ಮಾಡಿ ಹಾಗೆ ಹೊದಿಕೆ ಹಾಕಿ ಮಲಗುತ್ತೀವಿ. ನಂತರ  ಲೇಟ್‌ ಎದ್ದು  ಕಾಲೇಜ್‌ಗೆ ಟೈಮ್‌ ಆಯೂತ ತಿಂಡಿನೂ ಮಾಡದೆ ಬಸ್‌ ಹಿಡಿದು ಕಾಲೇಜು ಸೇರಿ¤àವಿ.

Advertisement

ಆದರೆ, ಫ‌ರ್ಸ್ಡ್ ಕ್ಲಾಸ್‌ಲ್ಲಿ ಸ್ವಲ್ಪ ತಡವಾದರೂ ಒಳಗಡೆಗೆ ಬಂದು ಕೂರಲು ಪ್ರವೇಶ ಸಿಗುವುದಿಲ್ಲ. ಹಾಗಂತ, ಕ್ಲಾಸ್‌ಗೆ ಹೋಗಲ್ಲ ಅಂತ ಅಲ್ಲಾ ಕ್ಲಾಸ್‌ ಮುಂದೆ ನಿಂತು ನಮಗಿಂತ ಚೆಂದ ರೆಡಿಯಾಗಿ ಬಂದಿರುವ ಮುಖಗಳನ್ನು ನೋಡಿ ತದನಂತರ ಸರ್‌ ಕೈಯಲ್ಲಿ ಮಂಗಳಾರತಿ ಮಾಡಿಸಿಕೂಂಡು ಸಪ್ಪೆಮುಖದೂಂದಿಗೆ ಕ್ಲಾಸ್‌ನಿಂದ ಹೊರದಾಟಿ¤àವಿ! ಬಂಕ್‌ ಮಾಡಿದರೆ ಇನ್ನೂ ಕೆಲವೊಂದು ಸಲ ಮೂವಿ ನೋಡಲು ಕ್ಲಾಸ್‌ ಬಂಕ್‌ ಮಾಡ್ತೀವಿ.

ಆದರೆ, ಕೆಲವೊಂದು  ಕ್ಲಾಸ್‌ ಬೇಡವೆಂದರೂ ನಿದ್ದೆಗೆ ಜಾರಿ¤àವಿ. ಈ ನಿದ್ದೆಯ ಮುಖದಭಾವ, ಒಬೊಬ್ಬರ ಎಕ್ಸ್‌ಪ್ರೆಶನ್‌ ಮಾತ್ರ ತಮಾಷೆಯಾಗಿರುತ್ತದೆ. ಇಂತಹ ಸಣ್ಣ ನಗು ತರಿಸುವ ಸನ್ನಿವೇಶವನ್ನು ಕ್ಯಾಮರಾದ ಕಣ್ಣುಗಳಿಂದ ಸೆರೆಹಿಡಿದು ಅವರು ನಿದ್ದೆ ಮಾಡುವ ಚಿತ್ರಣಕ್ಕೆ ಸ್ವಲ್ಪ ಲೈಟಾಗಿ ಎಡಿಟ್‌ಮಾಡಿ ಕ್ಲಾಸ್‌ಮೇಟ್‌ ಗ್ರೂಪ್‌ಗೆ ಶೇರ್‌ ಮಾಡಿದರೆ ಒಂದಿಷ್ಟು ಬೈಯುಳ ಇರುತ್ತದೆ ಅಲ್ಲವಾ! ಇನ್ನೂ ಕೆಲವರ ಡೆಸ್ಕ್ಗಳು ಮಾತಾಡುತ್ತ ಇರುತ್ತವೆ. ಮೇಜುಗಳ ಮೇಲಿನ ಪ್ರೇಮದ ಬರಹಗಳು, ಹೃದಯದ ಚಿತ್ರ, ತಮಗೆ ನೆನಪಿನ ಕಾಯಿಲೆ ಬಂದಿರುವ ರೀತಿಯಲ್ಲಿ ತಮ್ಮ ಹೆಸರುಗಳನ್ನು ಡೆಸ್ಕ್ಗಳ ಮೇಲೆ ಗೀಚುವುದು, ಕವನ ಮತ್ತು ಭಯಂಕರವಾಗಿ ಕಾಣುವ ಅವರ ಚಿತ್ರಗಳು ಡೆಸ್ಕ್ಗಳ ಮೇಲೆ ಅದ್ಭುತವಾಗಿ ಮೂಡಿ ಬಂದಿರುತ್ತದೆ.

ಕ್ಲಾಸ್‌ನ ಸಮಯ ನಮಗೆ ಇನ್ನೊಂದು ಕಡೆ ಆಸಕ್ತಿ ಬರುವುದು ಮೊಬೈಲ್‌ಗ‌ಳ ವಾಟ್ಸಾಪ್‌ನ ಮೆಸೇಜ್‌ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಪೋಟೊಗೆ ಎಷ್ಟು ಲೈಕ್‌ ಬಂದಿದೆ ಎಂದು ಆಗಾಗ ಬ್ಯಾಗ್‌ನಿಂದ ಮೊಬೈಲ್‌ನ್ನು ತೆಗೆದು ನೋಡಬಹುದು. ಅಪ್ಪಿತಪ್ಪಿ ಮೊಬೈಲ್‌ನ್ನು ಸೈಲೆಂಟ್‌ ಮಾಡಲು ಹೋಗಿ ಕ್ಲಾಸ್‌ ಮಧ್ಯೆ ಮೊಬೈಲ್‌ ರಿಂಗ್‌ ಆದರೆ ಅಲ್ಲಿಗೆ ಒಂದ್ಸಲ ಎಲ್ಲರೂ ನಮ್ಮ ಮುಖ ನೋಡ್ತಾರೆ. ಯಾರ ಮೊಬೈಲ್‌ ಅಂತ ಗೊತ್ತಾದರೆ ಆ ಪೋನ್‌ ಗತಿ ! ಎಕ್ಸ್‌ಟ್ರಾ ಫೈನ್‌ ಜೊತೆ ಎಕ್ಸ್‌ಟ್ರಾ ಮಂಗಳಾರತಿನೂ ಸಿಗುತ್ತೆ.

ಒಂದು ವೇಳೆ ಕ್ಲಾಸ್‌ ಸ್ವಲ್ಪ ಬೋರ್‌ ಆಯಿತು ಅಂದರೆ ನಮ್ಮ ಕೈಗೆ ಕಟ್ಟಿರುವ ವಾಚ್‌ನ್ನು ಆಗಾಗ ನೋಡಬೇಕು ಅನ್ಸುತ್ತೆ- ಯಾವಾಗ ಬೆಲ್‌ ಆಗುತ್ತೋ ಅಂತ! ಮತ್ತೇ ಪಕ್ಕದಲ್ಲಿರುವವರು ಆ ಕಡೆ ಈ ಕಡೆ ಕುಳಿತುಕೊಂಡವರು ಬೆಲ್‌ ಹೊಡೆಯಲು ಎಷ್ಟು ನಿಮಿಷ ಇದೆ ಎಂದು ತಮ್ಮ ಅಭಿನಯದ ಸನ್ನೆಯ ಮೂಲಕ ವ್ಯಕ್ತಪಡಿಸುವುದು ಮಜವಾಗಿರುತ್ತದೆ.

Advertisement

ಕಾಲೇಜು ದಿನಗಳೇ ಹಾಗೆ. ಚಿಕ್ಕ ಚಿಕ್ಕ ನೆನಪು ಕೂಡ ನಮ್ಮ ಮಗುಳುನಗೆಗೆ ಕಾರಣವಾಗುತ್ತದೆ. ನಾವು ಕಾಲೇಜು ಕ್ಯಾಂಪಸ್‌ನಲ್ಲಿ ಓಡಾಡಿದ ದಿನಗಳು ಫ್ರೆಂಡ್ಸ್‌ನ್ನು ಗೇಲಿಮಾಡಿಸಿದ್ದು, ಹೆದರಿಸಿದ್ದು, ಮಿಮಿಕ್ರಿಗಳು ಎಲ್ಲವೂ ಚೆಂದ.

– ಅರ್ಚನಾ ಕಾನೋಜಿ
ದ್ವೀತಿಯ ಎಮ್‌ಸಿಜೆ
ಎಸ್‌ಡಿಎಮ್‌ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next