Advertisement
ಕೊರೊನಾದಿಂದ ಶೈಕ್ಷಣಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ಬಿದ್ದಿದೆ. ಭೌತಿಕ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಶೈಕ್ಷಣಿಕ ಅಸುರಕ್ಷೆಯ ಭಾವದ ಜತೆಗೆ ಮಕ್ಕಳು ಶಿಕ್ಷಕರ ನಡುವಿನ ಬಾಂ ಧವ್ಯ, ಒಡನಾಟದ ಭಾವನೆ ಕಾಣುತ್ತಿಲ್ಲ. ಅಜೀಂ ಪ್ರೇಮ್ ಜೀ ವಿಶ್ವ ವಿದ್ಯಾ ನಿಲಯದಿಂದ ಐದು ರಾಜ್ಯದ ಸುಮಾರು 16 ಸಾವಿರ ಮಕ್ಕಳನ್ನು ಒಳ ಗೊಂಡ ಒಂದು ಸಮೀಕ್ಷೆ ನಡೆಸಿ ದ್ದೆವು. ಆ ಸಮೀಕ್ಷೆ ಯಲ್ಲಿ ಮಕ್ಕಳ ಕಲಿಕೆಯ ಅಂತರವನ್ನು ಗುರುತಿ ಸ ಲಾಗಿದೆ. ಶೇ.92ರಷ್ಟು ಮಕ್ಕ ಳಿಗೆ ಭಾಷಾ ವಿಷಯ ಮತ್ತು ಶೇ.82ರಷ್ಟು ಗಣಿತ ವಿಷಯದ ಅನೇಕ ಸಂಗತಿಗಳು ಮರೆತು ಹೋಗಿ ವೆ. ಹೀಗಾಗಿ ಕಲಿಕಾ ಅಂತರ ನಿವಾರಣೆಗೆ ಸರಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಆನ್‌ಲೈನ್ ಶಿಕ್ಷಣ ಅತ್ಯಂತ ಪರಿಣಾಮಕಾರಿಯಾಗಿಲ್ಲ. ಶೇ.80 ರಷ್ಟು ಆನ್‌ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಭಾವನಾತ್ಮಕ ಸಂಬಂಧ ಇಲ್ಲವಾಗಿದೆ. ಶೇ.60ಕ್ಕೂ ಅಧಿಕ ಮಕ್ಕಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಅಗತ್ಯವಾದ ಸ್ಮಾರ್ಟ್ ಫೋನ್ ಲಭ್ಯವಿಲ್ಲ.
**
ಪಾಠ ಬೋಧನೆಯ ಜತೆಗೆ ಬೌದ್ಧಿಕ ಬೆಳವಣಿಗೆ ಮುಖ್ಯ
Related Articles
Advertisement
– ಮುಕುಂದ ಪಿ., ಶಿಕ್ಷಣ ತಜ್ಞರು, ಸೇವಾ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ತೀರ್ಥಹಳ್ಳಿ**
ಆನ್‌ಲೈನ್ ಶಿಕ್ಷಣದ ಬಗ್ಗೆ ಧನಾತ್ಮಕ ಭಾವನೆ ಬೆಳೆಸಿ ಗ್ರಾಮೀಣ ಭಾಗದ ನೆಟ್‌ವರ್ಕ್ ಸಮಸ್ಯೆ, ವಿದ್ಯುತ್ ಕಡಿತ, ಮೊಬೈಲ್ ಬಳಕೆಯ ಮಾಹಿತಿ ಕೊರತೆ ಸೇರಿದಂತೆ ಹಲವು ಕಾರಣಗಳಿಗೆ ಆನ್‌ಲೈನ್ ತರಗತಿಗಳು ಸಮರ್ಪಕವಾಗಿ ನಡೆ ಯುತ್ತಿಲ್ಲ. ಆನ್‌ಲೈನ್ ತರಗತಿ ನಡೆಯುತ್ತಿದ್ದರೂ ವಿದ್ಯಾರ್ಥಿ ಗಳಿಗೆ ಪಾಲ್ಗೊಳ್ಳಲು ಆಗುತ್ತಿಲ್ಲ. ಸ್ಮಾರ್ಟ್ ಫೋನ್ ಇಲ್ಲದ ಪಾಲಕ, ಪೋಷಕರ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಸಾಧ್ಯವೇ ಇಲ್ಲ. ಆನ್‌ಲೈನ್ ಶಿಕ್ಷಣದಲ್ಲಿ ತರಗತಿ ಕೋಣೆಯ ವಾತಾವರಣ ಬರಬೇಕು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಪರಸ್ಪರ ಮಾತುಗಾರಿಕೆ ಇರಬೇಕು. ಹೆತ್ತವರಿಗೆ ಆನ್‌ಲೈನ್ ತರಗತಿಯ ಬಗ್ಗೆ ಅರಿವು, ಮಾಹಿತಿ ನೀಡಬೇಕು. ಎಲ್ಲ ವಿಷಯಗಳ ಚಟುವಟಿಕೆ ಆನ್‌ಲೈನ್ ತರಗತಿಯಲ್ಲೂ ನಡೆಯಬೇಕು. ಎರಡು ಗಂಟೆಗಳ ಸಮಯ ನಿಗದಿ ಮಾಡಿ ವಿದ್ಯಾರ್ಥಿಗೆ ಎಲ್ಲ ವಿಷಯ ದ ಸಮಗ್ರ ಮಾಹಿತಿ ಒದಗಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳು ಅಭ್ಯಾಸ ಪುಸ್ತಕದ ಬಳಕೆ ನಿರಂತರವಾಗಿ ಮಾಡುವಂತೆ ಆಗಬೇಕು. ಬರೆವಣಿಗೆಗೆ ಹೆಚ್ಚಿನ ಆದ್ಯತೆ ನೀಡ ಬೇಕು. ಇನ್ನು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಸ್ಟಾರ್ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ಸ್ಟಾರ್ ನೀಡುವು ದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚುವ ಜತೆಗೆ ಪ್ರೋತ್ಸಾಹವೂ ಸಿಕ್ಕಂತಾಗುತ್ತದೆ. ಆನ್‌ನ್ ಶಿಕ್ಷಣದ ಬಗ್ಗೆ ಆದಷ್ಟು ಧನಾತ್ಮಕ ಭಾವನೆ ಬೆಳೆಸಬೇಕು. ಫೀಡ್ ಬ್ಯಾಕ್ ಪಡೆಯುವ ವ್ಯವಸ್ಥೆ ತರಬೇಕು. ಕ್ಲಸ್ಟರ್ ಮಟ್ಟದಲ್ಲಿ ಕಲಿಕೆಗೆ ಬೇಕಾದ ಅಗತ್ಯ ಯೋಜನೆಗಳನ್ನು ಸಿದ್ಧಪಡಿಸಬೇಕು. – ಧನಲಕ್ಷ್ಮೀ ಬಿ.ಕೆ., ನಿವೃತ್ತ ಮುಖ್ಯಶಿಕ್ಷಕಿ ಹಾಗೂ ವಿಷಯ ತಜ್ಞರು, ಉಡುಪಿ