Advertisement
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹಾಗೂ ಇತರರು ಭಾರತೀಯ ವಿದ್ಯಾರ್ಥಿನಿಯರನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರಲ್ಲಿ ಮನವಿ ಮಾಡಿದ್ದಾರೆ.
“ನಾವು ಕೀವ್‌ನಲ್ಲಿ ಸಿಲುಕಿದ್ದೇವೆ. ನಮಗೆ ಯಾರಿಂದಲೂ ಸಹಾಯ ಸಿಗುತ್ತಿಲ್ಲ. ಇಲ್ಲಿನ ಸ್ಥಳೀಯರು ಕೀವ್‌ನಲ್ಲಿ ನಾವಿರುವ ಕಡೆ, ನಾವು ತಂಗಿರುವ ಕೋಣೆಯ ಬಾಗಿಲು ಒಡೆದು ಒಳಬರಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ನಮಗೆ ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭೀತಿ ಆವರಿಸಿದೆ. ಭಾರತೀಯ ದೂತಾವಾಸ ಕಚೇರಿಗೆ ಎಷ್ಟು ಬಾರಿ ಫೋನ್ ಮಾಡಿದರೂ, ಸ್ಪಂದನೆ ಸಿಕ್ಕಿಲ್ಲ. ನಮಗೆ ಸಹಾಯ ಸಿಗುವುದಿಲ್ಲ ಎಂದೆನಿಸತೊಡಗಿದೆ” ಎಂದು ಗಿಡ್ವಾ ತಿಳಿಸಿದ್ದಾರೆ. ಇದಲ್ಲದೆ, “ಬಂಕರ್‌ಗಳಿಂದ ಗಡಿಯ ಕಡೆಗೆ ತೆರಳುವ ಭಾರತೀಯ ವಿದ್ಯಾರ್ಥಿನಿಯರ ಸಮೂಹದ ಮೇಲೆ ರಷ್ಯಾದ ಸೈನಿಕರು, ಕೆಟ್ಟದಾಗಿ ವರ್ತಿಸಿದ್ದಾರೆ. ಇದನ್ನು ವಿರೋಧಿಸಿದ ವಿದ್ಯಾರ್ಥಿಗಳ ಮೇಲೆ ಫೈರಿಂಗ್ ಮಾಡಿ, ವಿದ್ಯಾರ್ಥಿನಿಯರನ್ನು ಅಪಹರಿಸಿದ್ದಾರೆಂದು ಹೇಳಲಾಗಿದೆ. ಆ ವಿದ್ಯಾರ್ಥಿನಿಯರು, ಫೈರಿಂಗ್‌ಗೆ ಒಳಗಾದ ವಿದ್ಯಾರ್ಥಿಗಳು ಎಲ್ಲಿ ಹೋದರು ಎಂಬ ಮಾಹಿತಿಯಿಲ್ಲ” ಎಂದು ಹೇಳಿದ್ದಾರೆ.