Advertisement

ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ ಅರೆಸೈನಿಕ ಪಡೆ ಸೇರಿದ ತಮಿಳುನಾಡಿನ ವಿದ್ಯಾರ್ಥಿ

10:05 AM Mar 08, 2022 | Team Udayavani |

ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ಸಾಯಿನಿಕೇಶ್ ರವಿಚಂದ್ರನ್ ಎಂಬ ವಿದ್ಯಾರ್ಥಿ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‌ನಲ್ಲಿ ಅರೆಸೈನಿಕ ಪಡೆಗಳನ್ನು ಸೇರಿಕೊಂಡಿದ್ದಾನೆ.

Advertisement

ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿ ಪೋಷಕರನ್ನು ವಿಚಾರಿಸಿದ್ದಾರೆ. ಈ ವೇಳೆ ಸಾಯಿನಿಕೇಶ್ ಭಾರತೀಯ ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದರು ಆದರೆ ತಿರಸ್ಕರಿಸಲಾಯಿತು ಎಂಬ ವಿಚಾರ ತಿಳಿದುಬಂದಿದೆ.

2018 ರಲ್ಲಿ, ಖಾರ್ಕಿವ್‌ನಲ್ಲಿರುವ ನ್ಯಾಷನಲ್ ಏರೋಸ್ಪೇಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಸಾಯಿನಿಕೇಶ್ ಉಕ್ರೇನ್‌ಗೆ ತೆರಳಿದ್ದರು. ಅವರು ಜುಲೈ 2022 ರೊಳಗೆ ಕೋರ್ಸ್ ಅನ್ನು ಪೂರ್ಣಗೊಳಿಸಬೇಕಿತ್ತು.

ಇದನ್ನೂ ಓದಿ:ಸ್ಫೋಟಗೊಳ್ಳದ 500 ಕೆಜಿ ಬಾಂಬ್‌! ಚೆರ್ನಿಹಿವ್‌ನ ಕಟ್ಟಡದಲ್ಲಿ ಬಿದ್ದಿದ್ದ ಬಾಂಬು

ಉಕ್ರೇನ್‌ ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದ, ಅವರ ಕುಟುಂಬವು ಸಾಯಿನಿಕೇಶ್ ನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ರಾಯಭಾರ ಕಚೇರಿಯ ಸಹಾಯವನ್ನು ಕೋರಿದ ನಂತರ, ಅವರು ಸಾಯಿಕೇಶ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಿದೆ. ರಷ್ಯಾದ ವಿರುದ್ಧ ಹೋರಾಡಲು ಉಕ್ರೇನಿಯನ್ ಅರೆಸೈನಿಕ ಪಡೆಗಳನ್ನು ಸೇರಿಕೊಂಡಿರುವುದಾಗಿ ಸಾಯಿನಿಕೇಶ್ ತಮ್ಮ ಕುಟುಂಬಕ್ಕೆ ತಿಳಿಸಿದ್ದಾರೆ.

Advertisement

ರಷ್ಯಾದ ಮೇಜರ್ ಜನರಲ್ ಹತ್ಯೆ: ಮಾರ್ಚ್ 7 ರಂದು ಖಾರ್ಕಿವ್ ಯುದ್ಧದಲ್ಲಿ ರಷ್ಯಾದ ಇನ್ನೊಬ್ಬ ಜನರಲ್ ವಿಟಾಲಿ ಗೆರಾಸಿಮೊವ್ ಕೊಲ್ಲಲ್ಪಟ್ಟರು ಎಂದು ಉಕ್ರೇನಿಯನ್ ರಕ್ಷಣಾ ವರದಿ ಮಾಡಿದೆ.  ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ರಷ್ಯಾದ ಕೇಂದ್ರ ಮಿಲಿಟರಿಯ 41 ನೇ ಸೈನ್ಯದ ಮೊದಲ ಉಪ ಕಮಾಂಡರ್ ಆಗಿದ್ದರು.

ಉಕ್ರೇನಿಯನ್ ರಕ್ಷಣಾ ಸಚಿವಾಲಯದ ಪ್ರಕಾರ, ಎರಡನೇ ಚೆಚೆನ್ ಯುದ್ಧ ಮತ್ತು ಸಿರಿಯಾದಲ್ಲಿ ನಡೆದ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳಲ್ಲಿ ವಿಟಾಲಿ ಗೆರಾಸಿಮೊವ್ ಪಾತ್ರ ವಹಿಸಿದ್ದಾರೆ. ಅವರಿಗೆ 2014 ರಲ್ಲಿ ‘ಫಾರ್ ದಿ ರಿಟರ್ನ್ ಆಫ್ ಕ್ರೈಮಿಯಾ’ ಪದಕ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next