Advertisement

ಥಿಯೋಸಾಫಿಕಲ್‌ ಕಾಲೇಜು ವಿದ್ಯಾರ್ಥಿನಿಯರ ಪಕ್ಷಿ ಪ್ರೇಮ

07:31 PM Mar 28, 2021 | Team Udayavani |

ಹೊಸಪೇಟೆ: ಕಲಿಕೆಯ ನಡುವೆಯೂ ಥಿಯೋಸಾಫಿಕಲ್‌ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾಣಿ-ಪಕ್ಷಿಗಳಿಗೆ ಆಹಾರ-ನೀರು ಒದಗಿಸುವ ಮೂಲಕ ಪಕ್ಷಿ ಪ್ರೇಮಕ್ಕೆ ಸಾಕ್ಷಿಯಾಗಿದ್ದಾರೆ.

Advertisement

ಬೇಸಿಗೆಯಲ್ಲಿ ಪಕ್ಷಿಗಳ ನೀರಿನ ದಾಹ ತಣಿಸಲು ಮುಂದಾಗಿರುವ ವಿದ್ಯಾರ್ಥಿನಿಯರು, ಕಳೆದ ಏಳು ವರ್ಷದಿಂದ ಕಾಲೇಜ್‌ ಆವರಣದ ಗಿಡ-ಮರಗಳಲ್ಲಿ ಮಣ್ಣಿನ ಮಡಿಕೆಯಲ್ಲಿ ಆಹಾರ-ನೀರಿನ ವ್ಯವಸ್ಥೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ಕಾಲೇಜಿನ ಬಿಎ, ಬಿಕಾಂ, ಎನ್‌ ಎಸ್‌ಎಸ್‌ ಘಟಕದ ವಿದ್ಯಾರ್ಥಿಗಳು ಈ ಸಮಾಜಮುಖೀ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾಲೇಜಿನ ಮರಗಳಿಗೆ ಸುಮಾರು 30 ಮಣ್ಣಿನ ಮಡಿಕೆಗಳನ್ನು ನೇತು ಹಾಕಿ, ಪಕ್ಷಿಗಳಿಗೆ ನೀರು ಹಾಗೂ ಆಹಾರವನ್ನು ಕೈಗೆಟುಕುವಂತೆ ಮಾಡುತ್ತಿದ್ದಾರೆ.

ಹಣ ಸಂಗ್ರಹಣೆ: ಸಿದ್ಧಪಡಿಸಿರುವ ಕಾಣಿಕೆ ಹುಂಡಿಯಲ್ಲಿ ಸ್ವಯಂಪ್ರೇರಿತರಾಗಿ ವಿದ್ಯಾರ್ಥಿಗಳು ಹಾಕಿದ ಹಣದಿಂದ ಪಕ್ಷಿಗಳಿಗೆ ಆಹಾರ ಮತ್ತು ಕಾರ್ಯಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಹಣದಿಂದ ಖರೀದಿ ಮಾಡಲಾಗುತ್ತಿದೆ. ಅಲ್ಲದೇ, ವಿದ್ಯಾರ್ಥಿಗಳು ಮನೆಯಿಂದ ತಂದ ದವಸ ಧಾನ್ಯಗಳು ಪಕ್ಷಿಗಳಿಗೆ ನಿತ್ಯದ ಆಹಾರವಾಗುತ್ತಿದೆ.

ಪಕ್ಷಿ ಸ್ನೇಹಿ ಕಾರ್ಯ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪಕ್ಷಿಗಳಿಗಾಗಿ ಈ ಕಾರ್ಯ ಮಾಡುತ್ತಿಲ್ಲ. ಮನೆಯಲ್ಲೂ ಸಹ ನೀರು ಮತ್ತು ಆಹಾರವನ್ನು ಇಡುತ್ತಿದ್ದಾರೆ. ಇದು ಬೇಸಿಗೆ ಸಂದರ್ಭದಲ್ಲಿ ಪಕ್ಷಿಗಳಿಗೆ ಅನಕೂಲವಾಗಲಿದೆ. ಮಾರ್ಚ್‌, ಏಪ್ರಿಲ್‌, ಮೇ ಈ ಮೂರು ತಿಂಗಳು ಪಕ್ಷಿಗಳಿಗೆ ನೀರು ಹಾಗೂ ಆಹಾರವನ್ನು ಕಾಲೇಜಿನಲ್ಲಿ ಒದಗಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next