Advertisement
ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ನಡೆದ ವೀರರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಊರಿನಲ್ಲಿ ಕಿತ್ತೂರು ಚನ್ನಮ್ಮನ ಬಗೆಗೆ ದೊಡ್ಡ ಅಭಿಮಾನ ಹೊಂದಿರುವುದು ಹೆಮ್ಮೆಯ ಸಂಗತಿ. ಬ್ರಿಟಿಷರನ್ನು ನಡುಗಿಸಿದ ಚೆನ್ನಮ್ಮನ ಅಂತಃಶಕ್ತಿ ಭಾರತ ಸ್ವಾತಂತ್ರ್ಯದ ಕಹಳೆ ಊದಿದೆ. ಪಂಚಮಸಾಲಿ ಸಮಾಜ ಬಡವರು, ದುಃಖೀತರ ಕಣ್ಣೀರು ಒರೆಸುವ ಸಮಾಜ. ಆದರೆ ಈ ಸಮುದಾಯದ ಏಳಿಗೆ ಕುಂಠಿತವಾಗಿದೆ. ಇಲ್ಲಿರುವ ಬಹುತೇಕ ರೈತರು ಕೂಲಿ ಕಾರ್ಮಿಕರು. ಇಂತಹ ಸಮಾಜಕ್ಕೆ 2ಎ ಮೀಸಲಾತಿ ಅತ್ಯಾವಶ್ಯಕವಾಗಿದೆ. ಕಾಂಗ್ರೆಸ್ ಸರಕಾರದಲ್ಲಿ ಮೀಸಲಾತಿ ದೊರೆಯುವ ವಿಶ್ವಾಸವಿದೆ. ಆದರೆ ಕೇವಲ ಮೀಸಲಾತಿಗಾಗಿ ಕಾಯದೆ ಪಂಚಮಸಾಲಿ ಸಮಾಜದವರು ತಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯ ಕಲ್ಪಿಸಲು ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಏನಿದೆಯೋ ಅದನ್ನು ಎಲ್ಲರೂ ಚಾಚೂ ತಪ್ಪದೆ ಪಾಲಿಸಬೇಕು. ತಾನು ಕೂಡ ಅವರು ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಹಾನಗಲ್ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ನಾನು ಮಾತನಾಡುವುದಿಲ್ಲ. ಸಿಎಂ ಬದಲಾವಣೆ ಬಗ್ಗೆ ವೀರಪ್ಪ ಮೊಯ್ಲಿ ಹೇಳಿಕೆಗೂ ಪ್ರತಿಕ್ರಿಯಿಸುವುದಿಲ್ಲ. ಇದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಯಾರೇ ಮುಖ್ಯಮಂತ್ರಿಯಾದರು ನಾವು ಕೆಲಸ ಮಾಡುತ್ತೇವೆ. ಯಾರು ಸಿಎಂ ಆದರೂ ನಮ್ಮ ಅಭ್ಯಂತರವಿಲ್ಲ. ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಹೈಕಮಾಂಡ್ ತೀರ್ಮಾನ ಏನಿದಿಯೋ ಅದಕ್ಕೆ ಪಕ್ಷದ 136 ಶಾಸಕರೂ ಬದ್ಧರಾಗಿದ್ದೇವೆ. ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ನಾನು ಶಿಸ್ತಿನ ಸಿಪಾಯಿಯಂತೆ ಇರುತ್ತೇನೆ ಎಂದರು.