Advertisement

ಜಂತುಹುಳು ನಿವಾರಣೆಯಿಂದ ಸದೃಢ ಆರೋಗ್ಯ

11:46 AM Aug 13, 2018 | |

ಹುಣಸೂರು: ಜಂತುಹುಳು ಬಾಧೆಯನ್ನು ನಿಯಂತ್ರಿಸಲು ಪ್ರತಿಯೊಬ್ಬ ವಿದ್ಯಾರ್ಥಿಯು ಕಡ್ಡಾಯವಾಗಿ ಜಂತುಹುಳು ನಾಶಕ ಮಾತ್ರೆಯನ್ನು ಸೇವಿಸಬೇಕೆಂದು ನ್ಯಾಯಾಧೀಶ ಗಿರೀಶ್‌ ಚಟ್ನಿ ಸೂಚಿಸಿದರು.

Advertisement

ನಗರದ ಬಾಲಕಿಯರ ಪದವಿಪೂರ್ವ ಕಾಲೇಜಿನ ಫೌಢಶಾಲಾ ವಿಭಾಗದಲ್ಲಿ ಆರೋಗ್ಯಇಲಾಖೆವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಜಂತುಹುಳು ಮಾತ್ರೆ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನ ದೇಶಾದ್ಯಂತ ಏಕ ಕಾಲಕ್ಕೆ ಈ ಅಭಿಯಾನ ನಡೆಸುತ್ತಿದ್ದು, ತಪ್ಪದೆ ಮಾತ್ರೆಯನ್ನು ಎಲ್ಲ ಮಕ್ಕಳೂ ಸೇವಿಸಬೇಕೆಂದು ಸೂಚಿಸಿದರು.

ಟಿ.ಎಚ್‌.ಒ.ಡಾ.ದೇವತಾ ಲಕ್ಷ್ಮೀ ಮಾತನಾಡಿ ಮಕ್ಕಳಲ್ಲಿ ಜಂತುಹುಳು ಕಾಣಿಸಿಕೊಳ್ಳುವುದರಿಂದ ಅಪೌಷ್ಟಿಕತೆ ಹಾಗೂ ರಕ್ತ  ಹೀನತೆಯಿಂದ ಬಳಲುತ್ತಾರೆ, ದೆ„ಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಲಿದೆ. ಹೀಗಾಗಿ ಸರಕಾರವು ಆ.10ರಂದು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನವನ್ನಾಗಿ ಆಚರಿಸುತ್ತಿದ್ದು, 1 ರಿಂದ 19 ವರ್ಷದೊಳಗಿನ ಎಲ್ಲಾ ಶಾಲೆ-ಅಂಗನವಾಡಿಗಳಲ್ಲಿ ಉಚಿತವಾಗಿ ಮಾತ್ರೆಗಳನ್ನು ನೀಡಲಾಗುತ್ತಿದೆ, ಗೆ„ರು ಹಾಜರಾಗುವ ಮಕ್ಕಳಿಗೆ ಆ.17 ರಂದು ಕಡ್ಡಾಯವಾಗಿ ನೀಡಲಾಗುವುದು.

ಬಿಇಒ ರೇವಣ್ಣ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕೃಷ್ಣಹಾಂಡ, ಉಪ ಪ್ರಾಂಶುಪಾಲರಾದ ಗೀತಾ, ಬಿಸಿಯೂಟ ಯೋಜನೆ ಸಹಾಯಕ ನಿಧೇìಶಕ ಸಂತೋಷಕುಮಾರ್‌, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್‌.ಮೂರ್ತಿ. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಹದೇವ್‌, ಹಿರಿಯ ಆರೋಗ್ಯ ಸಹಾಯಕ ಶಿವನಂಜು ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next