Advertisement
ಉಗ್ರ ನೆಲೆಗಳ ಮೇಲೆ ಮಂಗಳ ವಾರ ಭಾರತ ನಡೆಸಿದ ದಾಳಿಯನ್ನು ಒಪ್ಪಿಕೊಳ್ಳದ ಪಾಕಿಸ್ಥಾನವು ತನ್ನ ವಾಯು ಪ್ರದೇಶ ಉಲ್ಲಂ ಸಿದ್ದಕ್ಕೆ ಪಾಠ ಕಲಿಸುತ್ತೇನೆಂದು ಬುಧವಾರ ಪ್ರತಿ ದಾಳಿಯ ಪ್ರಯತ್ನ ನಡೆಸಿತಾದರೂ ಮರುಕ್ಷಣವೇ ತಣ್ಣಗಾಯಿತು. ಪ್ರಧಾನಿ ಇಮ್ರಾನ್ ಖಾನ್ ಶಾಂತಿಯ ಪ್ರಸ್ತಾವ ಮಾಡಿದರು. ಹೀಗೆ ಮಾಡಿದರೆ ಭಯೋತ್ಪಾದನೆ ಹತ್ತಿಕ್ಕುವ ಕ್ರಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗೆ ರಕ್ಷಣಾ ಪರಿಣತರ ಲೆಕ್ಕಾಚಾರಗಳನ್ನಿಟ್ಟಿದ್ದಾರೆ.
Related Articles
ಭಾರತವು ತನ್ನ ವಾಯುಸೀಮೆ ಉಲ್ಲಂ ಸಿದೆ ಎಂಬ ಪಾಕ್ ವಾದಕ್ಕೆ ರಾಜತಾಂತ್ರಿಕ ವಲಯದಲ್ಲಿ ವ್ಯಕ್ತವಾದ ಉತ್ತರವೇ ಬೇರೆ. ಯಾರ ವಾಯುಸೀಮೆ ಯಾರು ಉಲ್ಲಂಘಿಸಿದರು, ಎಷ್ಟು ಬಾಂಬ್ ಹಾಕಿದರು, ಎಷ್ಟು ವಿಮಾನ ಉರುಳಿಸಿದರು? ಇವೆಲ್ಲವೂ ಈ ಹೊತ್ತಿನ ಚರ್ಚೆಯ ಸಂಗತಿಯೇ ಅಲ್ಲ.
Advertisement
ಬದಲಾಗಿ ಇದು ಭಯೋತ್ಪಾದನೆ ಹತ್ತಿಕ್ಕಲು ಕೈಗೊಂಡ ಕಠಿನ ಕ್ರಮವಷ್ಟೇ. ಹಾಗಾಗಿ ವಿಶ್ವಸಂಸ್ಥೆಗೆ ದೂರು ಕೊಂಡೊಯ್ದರೂ ಪಾಕ್‌ಗೆ ಲಾಭವಾಗುತ್ತದೆಂಬ ಪರಿಸ್ಥಿತಿ ಇಲ್ಲ. ಮತ್ತೂಬ್ಬ ರಕ್ಷಣಾ ಪರಿಣತರು ಹೇಳುವಂತೆ ಯಾರಿಗೂ ಯುದ್ಧ ಬೇಕಿಲ್ಲ. ಆದರೆ, ಭಾರತ ಭಯೋತ್ಪಾದನೆಯ ವಿರುದ್ಧ ಹೋರಾಟ ಕುರಿತ ತನ್ನ ಬದ್ಧತೆಯನ್ನು ಮತ್ತೂಂದು ಹಂತಕ್ಕೆ ಕೊಂಡೊಯ್ದಿದೆ. 1971 ರ ಭಾರತ ಪಾಕ್ ಯುದ್ಧದ ಬಳಿಕ ಭಯೋತ್ಪಾದನೆ ತೀವ್ರ ಗೊಂಡಿದೆ. ಪ್ರತಿ ಬಾರಿಯೂ ಭಾರತ ಜಗತ್ತಿನಲ್ಲೆಲ್ಲಾ ಪಾಕ್‌ನ ದ್ವಂದ್ವ ನೀತಿ ಕುರಿತು ಹೇಳುತ್ತಾ ಬರುತ್ತಿತ್ತು, ಕೇವಲ ರಾಜತಾಂತ್ರಿಕ ತಂತ್ರಗಳಿಂದ ಸಮಸ್ಯೆಯನ್ನು ಸರಿಪಡಿಸುವ ಲೆಕ್ಕಾಚಾರದಲ್ಲಿತ್ತು. ಆದರೀಗ ರಾಜ ತಾಂತ್ರಿಕ ತಂತ್ರಗಳೊಂದಿಗೆ, ನಿರ್ಮೂಲನ ತಂತ್ರಗಳನ್ನೂ ಬಳಸಿಯೇವು ಎಂಬುದನ್ನು ಸಾಬೀತುಪಡಿಸಿದೆ. ಅದೇ ಈ ಘಟನೆಯಿಂದ ಹೊಮ್ಮುವ ಅರ್ಥ ಎಂಬುದು ರಕ್ಷಣಾ ಪರಿಣಿತರ ಅಭಿಪ್ರಾಯ.
ಸುಷ್ಮಾ ಪ್ರಸ್ತಾವವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹ ಭಾರತ, ಚೀನ ಹಾಗೂ ರಷ್ಯಾದೊಂದಿಗಿನ ಸಭೆಯಲ್ಲಿ ಬುಧವಾರ ಈ ವಿಷಯ ಪ್ರಸ್ತಾಪಿಸಿ ಮಂಗಳವಾರದ ಪ್ರಹಾರ ಯಾರ ವಿರುದ್ಧವೂ ಅಲ್ಲ; ಕೇವಲ ಭಯೋತ್ಪಾದನೆಯ ವಿರುದ್ಧ. ಯಾವುದೇ ನಾಗರಿಕರಿಗೆ ಹಾನಿ ಮಾಡಬಾರದೆಂದೇ ಈ ಮಾರ್ಗವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದರು. ಪ್ರಸ್ತುತ ಪಾಕ್‌ನಿಂದ ಎಲ್ಲರೂ ದೂರವಾಗಿದ್ದಾರೆ. ಚೀನಾ ಮಾತ್ರ ಪರಮಾಪ್ತವಾಗಿದೆ. ಇರಾನ್ ಹಾಗೂ ಅಫ್ಘಾನಿಸ್ತಾನ ಯಾವಾಗಲೋ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ಥಾನದ ಮೇಲೆ ತೀವ್ರ ಒತ್ತಡ ಹೇರಿವೆ. ಬ್ರಿಟನ್, ರಷ್ಯಾ, ಅಮೆರಿಕ ಪಾಕ್ ಪರ ಸೊಲ್ಲೆತ್ತುತ್ತಿಲ್ಲ. ಇವೆಲ್ಲವೂ ಪಾಕಿಸ್ಥಾನಕ್ಕೆ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾದ ಸ್ಥಿತಿಯನ್ನು ನಿರ್ಮಿಸಿವೆ.