ಬ್ರಹ್ಮಾವರದ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಸ್ಟ್ರೋಕ್ಸ್-19 ಎನ್ನುವ ಕಲಾ ಪ್ರದರ್ಶನವನ್ನು ಮೂರು ದಿನ ಪ್ರದರ್ಶಿಸಿದರು. ಕಲಾ ವಿಭಾಗದಲ್ಲಿ ಪೆನ್ಸಿಲ್ ಶೇಡ್, ಆಯಿಲ್ ಪೇಸ್ಟಲ್, ಜಲವರ್ಣ ಮತ್ತು ಆಕ್ರಲಿಕ್ ಮಾಧ್ಯಮ ಗಳಲ್ಲಿ ರಚಿತವಾದ ಸುಮಾರು ನೂರರಷ್ಟು ಕೃತಿಗಳಿದ್ದವು. ಲ್ಯಾಂಡ್‌ಸ್ಕೇಪ್, ಸ್ಟಿಲ್‌ಲೈಫ್, ಮಿನಿಯೇಚರ್, ವರ್ಲಿ, ಅಮೂರ್ತ, ಅರೆ ಅಮೂರ್ತ, ಪೆನ್‌ವರ್ಕ್, ವಿ ಷಯಾಧಾರಿತ ಕೃತಿಗಳು, ಕಂಬಳ, ಯಕ್ಷಗಾನ, ಭೂತಕೋಲ, ಭಾವಚಿತ್ರಗಳು, ಪ್ರಾಣಿ ಮತ್ತು ಪಕ್ಷಿ ಸಂಕುಲಗಳು, ಕೊಲಾಜ್, ಶಿಲ್ಪಕಲೆಗಳ ಕಲಾಕೃತಿಗಳ ಜೊತೆಗೆ ಇತರ ಹಲವು ಕೃತಿಗಳು ವಿದ್ಯಾರ್ಥಿಗಳ ಪ್ರತಿಭೆಗೆ ಸಾಕ್ಷಿಯಾಗಿದ್ದವು. ಕರಕುಶಲ ವಿಭಾಗದಲ್ಲಿ ಫ್ಲವರ್ ವಾಝ್, ಗೂಡುದೀಪ, ವಾಲ್ ಹ್ಯಾಂಗಿಂಗ್ಸ್, ಕಸೂತಿ ಕಲೆ, ಡಾಲ್ಸ್, ಮನೆಗಳ ಮಾದರಿ, ಹಡಗು, ವಾಹನಗಳ ಮಾದರಿ, ಕ್ಲೇ ಮಾಡೆಲ್, ತ್ಯಾಜ್ಯ ಸಂಪನ್ಮೂಲಗಳಿಂದ ರಚಿಸಿದ ಕೃತಿಗಳು ಹೀಗೆ ಹಲವಾರು ವರ್ಣ ವೈವಿಧ್ಯತೆಗಳಿಂದ ಕೂಡಿದ ಕೃತಿಗಳು ಪ್ರದರ್ಶನಾಂಗಣವನ್ನು ಸುಂದರ ಕಲಾಲೋಕವನ್ನಾಗಿಸಿತ್ತು. ಪ್ರತೀಕ್ಷಾ ಪಿ. ಶೆಟ್ಟಿ, ಚಿಂತನ್ ಸಾಲ್ಯಾನ್, ಶರಣ್ಯ ಭಟ್, ಶ್ರದ್ಧಾ, ಮಣಿಕಂಠ, ವಿಶಾಲ್, ಪುನೀತ್, ಧೃತಿ, ಶಿವಮ್, ಧನ್ವಿ, ವದಂತ್, ರೋಹಿತ್, ಹಂಸವರ್ಧಿನಿ, ಸಿಂಚನಾ ಇವರ ಕೃತಿಗಳ ಜೊತೆ ಕಲಾಶಿಕ್ಷಕರಾದ ಮನೋಜ್ ಪಾಂಗಾಳ, ಉಷಾ, ಆಶಾ ಟಿ. ಹಾಗೂ ಸಹ ಶಿಕ್ಷಕರಾದ ಪ್ರಣವ್ ಶೆಟ್ಟಿ, ಮಲ್ಲಿಕಾ ಆಚಾರ್ಯ, ಸುನಿತಾ ಭಂಡಾರಿ ಇವರುಗಳ ಕೃತಿಗಳೂ ಇದ್ದವು.
– ಕೆ. ದಿನಮಣಿ ಶಾಸ್ತ್ರಿ