Advertisement

ಆತ್ಮನಿರ್ಭರ ಭಾರತದ ಕಲ್ಪನೆ ಸಾಕಾರಗೊಳಿಸಲು ಶ್ರಮಿಸಿ: ಅಂಗಾರ

09:48 AM May 02, 2022 | Team Udayavani |

ಉಪ್ಪಿನಂಗಡಿ: ರೈತ ತನ್ನ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುವ ಹಕ್ಕನ್ನು ಹೊಂದುವುದಕ್ಕೆ ಪೂರಕವಾಗಿ ಸಹಕಾರಿ ಸಂಘಗಳು ಪ್ರಧಾನ ಪಾತ್ರ ವಹಿಸಬೇಕಾಗುತ್ತದೆ. ತನ್ಮೂಲಕ ಪ್ರಧಾನಿ ಅವರ ಆತ್ಮನಿರ್ಭರ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ಒಗ್ಗೂಡಿ ಶ್ರಮಿಸಬೇಕು ಎಂದು ಸಚಿವ ಎಸ್‌. ಅಂಗಾರ ಹೇಳಿದರು.

Advertisement

ಉಪ್ಪಿನಂಗಡಿಯ ಸಂಗಮ ಕೃಪಾ ಸಭಾಂಗಣದಲ್ಲಿ ಜರಗಿದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಮೃತ ಮಹೋತ್ಸವ ವರ್ಷಾಚರಣೆ ಅಂಗವಾಗಿ ವರ್ಷಪೂರ್ತಿ ನಡೆಯಲಿರುವ ‘ಅಮೃತ ಸಂಗಮ’ ಕಾರ್ಯಕ್ರಮದ ಉದ್ಘಾಟನೆ ಹಾಗೂ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಮೈ ಮಹಾಲಿಂಗ ನಾಯ್ಕ ಅವರನ್ನು ಸಮ್ಮಾನಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್‌, ಸಹಕಾರಿ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪುವ ವ್ಯವಸ್ಥೆಯಿರುವುದು ಸಹಕಾರಿ ಕ್ಷೇತ್ರದಲ್ಲಿ ಮಾತ್ರ. ದ.ಕ. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವು ಶಕ್ತಿಯುತವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಹಕಾರಿ ಸಂಘಗಳಿಂದ ಗ್ರಾಮಗಳ ಅಭಿವೃದ್ಧಿಯಾಗಿದೆ. ಈ ಮೂಲಕ ಸರಕಾರ ಮಾಡದ್ದನ್ನು ಸಹಕಾರ ಮಾಡಿದೆ. ಕೇಂದ್ರದಿಂದ ಸಹಕಾರಿ ಕ್ಷೇತ್ರಕ್ಕೆ ಒತ್ತು ನೀಡುವ ಕೆಲಸ ಆಗಿದೆ. ಸಹಕಾರಿ ಸಂಘಗಳಲ್ಲಿ ನಿಂತು ಹೋಗಿದ್ದ ಯಶಸ್ವಿನಿ ವಿಮೆಯನ್ನು ಪುನಃ ಪ್ರಾರಂಭಿಸಲಾಗಿದೆ ಎಂದರು.

ಸ್ಥಳೀಯ ಪೌರಕಾರ್ಮಿಕರಿಗೆ ಗೌರವಾರ್ಪಣೆ ನಡೆಯಿತು. ಅಟಲ್‌ ಪಿಂಚಣಿ ಯೋಜನೆಯ ಉತ್ತಮ ಅನುಷ್ಠಾನಕ್ಕಾಗಿ ಡಾ| ಎಂ.ಎನ್. ರಾಜೇಂದ್ರ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಮುನ್ನ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಕೊಡ ಮಾಡಲಾದ 2 ಟ್ರ್ಯಾಕ್ಟರ್‌ಗಳನ್ನು ಸಂಘಕ್ಕೆ ಹಸ್ತಾಂತರಿಸಲಾಯಿತು.

Advertisement

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ಸ್ವಾಗತಿಸಿದರು. ಉಪಾಧ್ಯಕ್ಷ ಸುನೀಲ್‌ ಕುಮಾರ್‌ ದಡ್ಡು ವಂದಿಸಿದರು. ಉಪನ್ಯಾಸಕರಾದ ರವೀಂದ್ರ ದರ್ಬೆ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್‌ ಬಿ. ನಾಯಕ್‌, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್‌ ನಿರ್ದೇಶಕ ರಾಜಶೇಖರ್‌ ಜೈನ್‌, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್‌ ಕೌಶಲ್‌ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೊಟ್ಟು, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಲೇರಿ ವೇಗಸ್‌, ಪ್ರಮುಖರಾದ ಜಗದೀಶ ರಾವ್‌ ಮಣಿಕ್ಕಳ, ರಾಮ ನಾಯ್ಕ, ಶ್ಯಾಮಲಾ ಶೆಣೈ, ಸುಜಾತಾ ಆರ್‌. ರೈ, ಸಚಿನ್‌, ಯತೀಶ್‌ ಶೆಟ್ಟಿ, ದಯಾನಂದ ಸರೋಳಿ, ಕುಂಞ, ರಾಜೇಶ್‌, ಶರತ್‌ ಡಿ, ತಾಳ್ತಜೆ ವಸಂತ ಕುಮಾರ್‌, ಪೆಲಪ್ಪಾರು ವೆಂಕಟರಮಣ ಭಟ್‌, ತಾಳ್ತಜೆ ಚಂದ್ರಶೇಖರ, ಅಜೀಜ್‌ ಬಸ್ತಿಕ್ಕಾರ್‌, ರಾಮಚಂದ್ರ ಮಣಿಯಾಣಿ, ಸುಭದ್ರಾ ಭಟ್‌, ಉಷಾ ಮುಳಿಯ, ಸುರೇಶ್‌ ಅತ್ರಮಜಲು, ಪ್ರಶಾಂತ್‌, ಜಯಂತ ಪೊರೋಳಿ, ಡಾ| ರಾಜಾರಾಮ ಕೆ.ಬಿ., ಚಂದಪ್ಪ ಮೂಲ್ಯ, ಹರಿರಾಮಚಂದ್ರ, ವಿಶ್ವನಾಥ ಶೆಟ್ಟಿ ಕಂಗ್ವೆ, ಕೈಲಾರ್‌ ರಾಜಗೋಪಾಲ ಭಟ್‌ ಮತ್ತಿತರರು ಉಪಸ್ಥಿತರಿದ್ದರು.

ನೀರು ಇಂಗಿಸಿ

ಅಮೈ ಮಹಾಲಿಂಗ ನಾಯ್ಕ ಮಾತನಾಡಿ, ನಾನು ಪ್ರಶಸ್ತಿಗಾಗಿ ದುಡಿದವನು ಅಲ್ಲ, ಬದುಕುವುದಕ್ಕಾಗಿ ಶ್ರಮಿಸಿದೆ. ಶ್ರಮಕ್ಕಾಗಿ ಇಂದು ಪ್ರಶಸ್ತಿ ಬಂದಿದೆ. ಭೂಮಿಗೆ ಸುರಿಯುವ ನೀರನ್ನು ಇಂಗಿಸಲು ಮನಸ್ಸು ಮಾಡಿದರೆ ನೀರಿನ ಕೊರತೆಯಾಗದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next