Advertisement
ಪಟ್ಟಣದ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ನೂತನ ಬಿಜೆಪಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ದಿ. ಬಿ.ಬಿ ಶಿವಪ್ಪ ಅವರು ಅಪಾರವಾಗಿ ಶ್ರಮಿಸಿದ್ದರು. ಆದರೆ ಕಳೆದ ಹಲವಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನು ಹೊಂದುವಲ್ಲಿ ವಿಫಲವಾಗಿದೆ. ಈ ನಿಟ್ಟಿನಲ್ಲಿ ನೂತನ ಬಿಜೆಪಿ ಅಧ್ಯಕ್ಷರು ಬೂತ್ ಮಟ್ಟದಿಂದ ಸಂಘಟಿಸಬೇಕಾಗಿದೆ ಎಂದರು.
Related Articles
Advertisement
ಸಂಘಟನಾ ಪರ್ವ: ಬಿಜೆಪಿ ನಿಯೋಜಿತ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಮಾತನಾಡಿ, ಹಾಸನದಲ್ಲಿ ಬಿಜೆಪಿ ಸಂಘಟನಾ ಪರ್ವ ಆರಂಭಗೊಂಡಿದ್ದು, ರಾಜ್ಯದಲ್ಲೆ ಮೊದಲಿಗೆ ಎಲ್ಲಾ ಮಂಡಲಗಳಲ್ಲೂ ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಅಭ್ಯರ್ಥಿ ಸೋಮಶೇಖರ್ ಹಾಗೂ ಬೇಲೂರಿನಿಂದ ನಾನು ಕೆಲವೇ ಕೆಲವು ಮತಗಳಿಂದ ಪರಾಜಿತರಾಗಿದ್ದೆವು. ಪಕ್ಷದ ಕೆಲವು ಕಾರ್ಯಕರ್ತರೇ ಕೈಕೊಟ್ಟಿದ್ದರಿಂದ ಈ ರೀತಿಯ ಫಲಿತಾಂಶ ಹೊರಹೊಮ್ಮಿತ್ತು. ಮುಂದಿನ ದಿನಗಳಲ್ಲಿ ಈ ರೀತಿಯಾಗಬಾರದು, ಪ್ರತಿಯೊಬ್ಬ ಕಾರ್ಯಕರ್ತರು ವ್ಯಕ್ತಿಯ ಹಿಂದೆ ಹೋಗದೆ ಪಕ್ಷಕ್ಕಾಗಿ ಶ್ರಮಿಸಬೇಕು ಎಂದರು.
ಜಿಲ್ಲೆಯಲ್ಲಿ ಬಿಜೆಪಿಯತ್ತ ಒಲವು: ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಬದಲಾವಣೆ ಉಂಟಾಗುತ್ತಿದ್ದು ಜನ ಬಿಜೆಪಿಯತ್ತ ವಾಲುತ್ತಿದ್ದಾರೆ. ಇದರಿಂದ ಹತಾಶರಾಗಿರುವ ಜೆಡಿಎಸ್ ಮುಖಂಡ ರೇವಣ್ಣನವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಮುಂದೆ ಪ್ರತಿಭಟನೆ ಮಾಡುವ ಮಾತನಾಡುತ್ತಿದ್ದಾರೆ ಅವರು ಎಡಗಡೆ ಪ್ರತಿಭಟನೆ ಮಾಡಿದರೆ ನಾವು ಬಲಗಡೆ ಕೂತು ಪ್ರತಿಭಟನೆ ಮಾಡುತ್ತೇವೆ.
ನೂತನ ಅಧ್ಯಕ್ಷರಿಗೆ ನಾವೆಲ್ಲಾ ಶಕ್ತಿ ತುಂಬೋಣ, ಅವರ ನೇತೃತ್ವದಲ್ಲಿ ಸಿಎಎ ಪರ ಬೃಹತ್ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಆಯೋಜಿಸೋಣ. ಮುಂದಿನ ದಿನಗಳಲ್ಲಿ ಕಾರ್ಯಕರ್ತರನ್ನು ಆರ್ಥಿಕವಾಗಿ, ರಾಜಕೀಯವಾಗಿ ಮೇಲೆತ್ತುವ ಪ್ರಯತ್ನ ಮಾಡೋಣ ಎಂದರು.