Advertisement

ಕುಕ್ಕೆ: ಮಠದ ಅಂಗಡಿ ಮುಂಗಟ್ಟು ಹೊರತು ಪಡಿಸಿ ನಗರ ಬಂದ್ 

05:13 AM Mar 07, 2019 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಠಕ್ಕೆ ಸೇರಿದ ಅಂಗಡಿ ಮುಂಗಟ್ಟುಗಳನ್ನು ಹೊರತು ಪಡಿಸಿ ಉಳಿದೆಲ್ಲವು ಗುರುವಾರ ಸ್ವಯಂ ಪ್ರೇರಿತ ಬಂದ್ ಆಗಿದೆ.

Advertisement

ನಾಗಾರಾಧನೆಗೆ ಪ್ರಸಿದ್ದಿ ಪಡೆದ ಇತಿಹಾಸ ಪ್ರಸಿದ್ದ ಕುಕ್ಕೆ ಶ್ರೀ ದೇವಸ್ಥಾನವನ್ನು  ಸಂಪುಟ ಶ್ರೀ ಮಠಕ್ಕೆ ಹಸ್ತಾಂತರಿಸುವಂತೆ ಮಠದ ಪರ ನೀಡಿರುವ ನೊಟೀಸ್ ವಿರೋಧಿಸಿ ಮತ್ತು ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರ ಮಾಡದಂತೆ ಸರಕಾರವನ್ನು ಒತ್ತಾಯಿಸಿ ಗುರುವಾರ  ಕುಕ್ಕೆ ಶ್ರೀ ಭಕ್ತರ ಹಿತ ರಕ್ಷಣಾ ವೇದಿಕೆ ಕರೆ ನೀಡಿರುವ ಗುರುವಾರದ ಕುಕ್ಕೆ ನಗರ ಬಂದ್ ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಗುರುವಾರದ ಬಂದ್ ಕಾನೂನು ಬಾಹಿರವಾಗಿದ್ದು, ಬಂದ್ ಗೆ ತಡೆ ನೀಡುವಂತೆ ಮಠದ ಪರ ವಕೀಲರು ಉಚ್ಛ ನ್ಯಾಯಾಲಯದಲ್ಲಿ ಅರ್ಜಿ  ಸಲ್ಲಿಸಿದ್ದು ವಿಚಾರಣೆ ವೇಳೆ ನ್ಯಾಯಾಲಯವು ಬಂದ್ ವಿಚಾರದಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡಲು ನಿರಾಕರಿಸಿತು. ಮತ್ತು ಬಂದ್ ವೇಳೆ ಬಲತ್ಕಾರದ ಬಂದ್ ಗೆ ಅವಕಾಶ ನೀಡದೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ರಾಜ್ಯ ಗೃಹ ಇಲಾಖೆ ಪೊಲೀಸ್ ಇಲಾಖೆಗೆ ಸೂಚಿಸಿತ್ತು‌.


ಅದರಂತೆ ಬಂದ್ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ತೊಂದರೆಯಾಗದಂತೆ ಕಾನೂನಿನ ತೊಡಕಿಗೆ ಅಡ್ಡಿಯಾಗದ ರೀತಿಯಲ್ಲಿ ಬಂದ್ ಆಚರಿಸುವಂತೆ ಪೊಲೀಸ್ ಇಲಾಖೆ ಸಂಘಟಕರಿಗೆ ಕಟ್ಟುನಿಟ್ಟಾಗಿ ತಿಳಿಸಿತ್ತು. ಅದರಂತೆ ನಗರದಲ್ಲಿ ಭಾರಿ ಬಿಗು ಬಂದೋಬಸ್ತ್ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ಸಂಜೆ ರಥ ಬೀದಿಯಲ್ಲಿ ಶಾಂತಿಯುತ ಜನಾಂದೋಲನ ಸಭೆ ನಡೆಯಲಿದೆ. ಭಕ್ತರಿಗೆ ತೊಂದರೆ ಆಗದಂತೆ ದೇವಸ್ಥಾನದ ವತಿಯಿಂದ ಭಕ್ತರಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next