ತುಮಕೂರು: ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀ ಕರಣ ವಿರೋಧಿಸಿ ಬ್ಯಾಂಕ್ ಯೂನಿ ನ್‌ಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ರಾಷ್ಟ್ರೀಕೃತ ಬ್ಯಾಂಕ್ ಗಳ ನೌಕರರು ಮುಷ್ಕರ ಆರಂಭಿಸಿದ್ದಾರೆ. ದೇಶಾದ್ಯಂತ ಸೋಮವಾರ ಮತ್ತು ಮಂಗಳವಾರ ನಡೆಸಲಾಗುತ್ತಿರುವ ಬ್ಯಾಂಕ್ ಗಳ ಮುಷ್ಕರ ಬೆಂಬಲಿಸಿ ತುಮಕೂರು ನಗರದ ಚರ್ಚ್ ಸರ್ಕಲ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಕಚೇರಿ ಮುಂಭಾಗ ಜಮಾಯಿಸಿರುವ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಘೋಷ ಣೆಗಳನ್ನು ಕೂಗಿ, ಕೂಡಲೇ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಗಾಮಿ ಕ್ರಮಗಳಿಗೆ ವಿರೋಧ: ಸುಧಾ ರಣೆಯ ನಿಟ್ಟಿನಲ್ಲಿ ಕೆಲವೊಂದು ಕ್ರಮಗಳನ್ನು ಕೇಂದ್ರ ಸರ್ಕಾರ ಮುಂಗಡ ಪತ್ರದಲ್ಲಿ ಘೋಷಿಸಿದೆ. ಐಡಿಬಿಐ ಬ್ಯಾಂಕ್ ಮತ್ತು ಎರಡು ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗೀಕರಣ, ಆಸ್ತಿ ವಸೂಲಿ ಕಂಪೆನಿಯ ಸ್ಥಾಪನೆ, ಜೀವ ವಿಮಾ ನಿಗಮದಲ್ಲಿ ಬಂಡ ವಾಳ ಹಿಂತೆಗೆತ, ಒಂದು ಸಾಮಾನ್ಯ ವಿಮಾ ಕಂಪೆನಿಯ ಖಾಸಗೀಕರಣ, ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಶೇ.74 ರವರೆಗೆ ಅವಕಾಶ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಬಂಡವಾಳ ಹಿಂತೆಗೆತದಲ್ಲಿ ಹುರುಪು ಹಾಗೂ ಅವುಗಳ ಮಾರಾಟ ಇವೆಲ್ಲವೂ ಪ್ರತಿಗಾಮಿ ಕ್ರಮಗಳಾಗಿರುವು ದರಿಂದ ಅವುಗಳನ್ನು ವಿರೋಧಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ಮುಷ್ಕರ ನಿರತ ಬ್ಯಾಂಕ್ ನೌಕರರು ಹೇಳಿದರು.
ಖಾಸಗೀಕರಣ ಮಾಡುವ ಕ್ರಮ ಸರಿಯಲ್ಲ: ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣದಿಂದ ದೇಶದ ಜನರ ಉಳಿತಾಯದ ಲೂಟಿಗೆ ಅವ ಕಾಶ ನೀಡಿದಂತಾಗುತ್ತದೆ. ಠೇವಣಿದಾರರ ಹಿತಾ ಸಕ್ತಿಗೆ ಧಕ್ಕೆಯಾಗುತ್ತದೆ. ಉದ್ಯೋಗಾ ವಕಾಶಗಳು ಹಾಗೂ ಮೀಸಲಾತಿಯಂತಹ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗುವುದರ ಜತೆಗೆ ಶಾಖೆಗಳ ಮುಚ್ಚುವಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರು ಬ್ಯಾಂಕಿಂಗ್ ಸೇವೆ ಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಹಾಗಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀ ಕರಣ ಮಾಡುವ ಕ್ರಮ ಸರಿಯಲ್ಲ. ಇದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು. 1969ರಲ್ಲಿ 14 ಮತ್ತು 1980ರಲ್ಲಿ 6 ವಾಣಿಜ್ಯ ಬ್ಯಾಂಕ್‌ಗಳನ್ನು ರಾಷ್ಟ್ರೀಕರಿಸಲಾಗಿತ್ತು. ರಾಷ್ಟ್ರೀಕರಣದ ಮುಂಚಿನ ದಿನಗಳಲ್ಲಿ ಬ್ಯಾಂಕ್ ಗಳ ಮುಳುಗುವಿಕೆ ಸರ್ವೆ ಸಾಮಾನ್ಯ ವಾಗಿತ್ತು. 1947 ರಿಂದ 1969ರ ಅವಧಿಯಲ್ಲಿ ಒಟ್ಟು 550 ಖಾಸಗಿ ಬ್ಯಾಂಕ್‌ಗಳು ಮುಳುಗಿ ದವು. ಈ ಬ್ಯಾಂಕ್‌ಗಳ ಠೇವಣಿದಾರರು ತಮ್ಮ ಉಳಿತಾಯವನ್ನು ಕಳೆದು ಕೊಂಡರು ಎಂದು ಮುಷ್ಕರ ನಿರತರು ಹೇಳಿದರು.
ಯುಎಫ್ಬಿಯುನ ಸಂಚಾಲಕ ವಾದಿ ರಾಜ್ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ 10 ಲಕ್ಷಕ್ಕೂ ಅಧಿಕ ಮಂದಿ ಬ್ಯಾಂಕ್ ನೌಕರರು ಎರಡು ದಿನ ಮುಷ್ಕರ ನಡೆಸುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ದೇಶದ ಆರ್ಥಿಕ ಪ್ರಗತಿಯೂ ಆಗಿದೆ ಎಂದರು. ದೇಶದಲ್ಲಿ ಇದುವರೆಗೂ 550ಕ್ಕೂ ಹೆಚ್ಚು ಖಾಸಗಿ ಬ್ಯಾಂಕ್‌ಗಳು ದಿವಾಳಿಯಾಗಿವೆ. ಆದರೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳು ದಿವಾಳಿ ಯಾಗಿರುವ ನಿದರ್ಶನಗಳಿಲ್ಲ. 2009- 10 ರಲ್ಲಿ 77 ಸಾವಿರ ಕೋಟಿ ಲಾಭ ಮತ್ತು 2019-20ರಲ್ಲಿ 1.77 ಲಕ್ಷ ಕೋಟಿ ರೂ. ಲಾಭ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬಂದಿ ದೆ. ಇದು ರಾಷ್ಟ್ರೀಕೃತ ಬ್ಯಾಂಕ್‌ಗಳು ಲಾಭ ದಲ್ಲಿವೆ ಎಂಬುದನ್ನು ಸೂಚಿಸುತ್ತದೆ ಎಂದರು.
ವರ್ಷಪೂರ್ತಿ ತೊಂದರೆ: ಗ್ರಾಹಕರಿಗೆ 2 ದಿನ ಮಾತ್ರ ತಾತ್ಕಾಲಿಕವಾಗಿ ತೊಂದರೆಯಾಗಬ ಹುದು. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಖಾಸ ಗೀಕರಣವಾದರೆ ವರ್ಷಪೂರ್ತಿ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದ ರಿಂದ ನಮ್ಮ ಹೋರಾಟಕ್ಕೆ ಗ್ರಾಹಕರು ಸಹಕರಿ ಸಬೇಕು ಎಂದು ಮನವಿ ಮಾಡಿದರು. ಇದುವರೆಗೂ ಕೇಂದ್ರ ಸರ್ಕಾದ ಎಲ್ಲ ಸ್ಕೀಂಗಳನ್ನು ಕಾರ್ಯಗತಗೊಳಿಸಿರುವುದು ರಾಷ್ಟ್ರೀಕೃತ ಬ್ಯಾಂಕ್‌ಗಳು. ಯಾವುದೇ ಖಾಸಗಿ ಬ್ಯಾಂಕ್‌ಗಳಲ್ಲ ಎಂದು ಹೇಳಿದರು. ಯುಎಫ್ಬಿಯುನ ಸಂಚಾಲಕ ವಾದಿ ರಾಜ್, ವಿವಿಧ ಬ್ಯಾಂಕ್ ನೌಕರರಾದ ನಟ ರಾಜು, ಸರ್ವಮಂಗಳ, ಮಹೇ ಶ್ವರಪ್ಪ, ಶಂಕರಪ್ಪ, ರಾಮಕೃಷ್ಣೇಗೌಡ, ವೆಂಕಟೇಶ ಮೂರ್ತಿ, ರಾಮಕೃಷ್ಣ, ಜಾನಕೀರಾಂಬಾಬು, ವೆಂಕಟೇಶ್, ಮಹಲಿಂಗಯ್ಯ, ರಮೇಶ್ ಇದ್ದರು.