ಬೆಂಗಳೂರು: ಸೋಂಕು ಹೆಚ್ಚಿರುವ ಕಂಟೈನ್‌ಮೆಂಟ್ ವಲಯ ಗಳಲ್ಲಿ ಮುಂದಿನ ಒಂದು ತಿಂಗಳು ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡುವುದರ ಸಹಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಆದೇಶಿಸಿದೆ.
ಕೊರೊನಾ ಹೆಚ್ಚು ತ್ತಿ ರುವ ಹಿನ್ನೆಲೆಯಲ್ಲಿ ಬುಧ ವಾರ ಸರಕಾರದ ಮುಖ್ಯ ಕಾರ್ಯ ದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಎ. 1ರಿಂದ ಎ. 30ರ ವರೆಗೆ ಅಗತ್ಯ ಚಟುವಟಿಕೆ ಹೊರತುಪಡಿಸಿ ಉಳಿದೆಲ್ಲವನ್ನೂ ನಿರ್ಬಂಧಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಎ. 1ರಿಂದ ಎ. 30ರ ವರೆಗೆ ವೈರಾಣು ಜಾಡು ಪತ್ತೆ, ಪರೀಕ್ಷೆ ಹೆಚ್ಚಳ, ಸೋಂಕುಪೀಡಿತರನ್ನು ಪ್ರತ್ಯೇಕ ವಾಗಿಸಿ ಚಿಕಿತ್ಸೆ ಮತ್ತು ಹೆಚ್ಚು ಪ್ರಕರಣ ಗಳು ವರದಿಯಾಗುವ ಪ್ರದೇಶ ವನ್ನು ಕಂಟೈನ್‌ಮೆಂಟ್ ವಲಯ ವನ್ನಾಗಿ ಘೋಷಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕು ಎಂದು ಆದೇ ಶಿಸಿದ್ದಾರೆ.
ಅಧಿಕಾರಿಗಳೇ ಹೊಣೆ :
ಕಂಟೈನ್‌ಮೆಂಟ್ ವಲಯದಲ್ಲಿ ಕಣ್ಗಾವಲು ತಂಡ ರಚನೆ ಮಾಡಬೇಕು. ಈ ತಂಡ ಮನೆ ಮನೆ ಪರಿಶೀಲನೆ ನಡೆಸಬೇಕು. ಪ್ರಕರಣ ಹೆಚ್ಚಿರುವ ಕಡೆ ಪರೀಕ್ಷೆ ಹೆಚ್ಚಿಸಬೇಕು. ಅಗತ್ಯ ಸೇವೆ, ಅಗತ್ಯ ಸರಕು ಮತ್ತು ತುರ್ತು ಸೇವೆಗೆ ಮಾತ್ರ ಅವಕಾಶ ಒದಗಿಸಬೇಕು. ಜನರ ಅನಗತ್ಯ ಸಂಚಾರಕ್ಕೆ ಅವಕಾಶ ನೀಡ ಬಾರದು. ಸೋಂಕುಪೀಡಿತರ ಸಂಪರ್ಕಿತರನ್ನು ಪತ್ತೆ ಹಚ್ಚಿ 14 ದಿನಗಳ ನಿಗಾ ಇರಿಸಬೇಕು. ನಿಯಮ ಪಾಲನೆ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಬೇಕು ಎಂದು ತಿಳಿಸಿದ್ದಾರೆ.
ದಟ್ಟಣೆ ಕಡಿಮೆ ಮಾಡಿ : ಸಂತೆ, ಸಾರಿಗೆ, ಜನಸಂದಣಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಸಾಮಾ ಜಿಕ ಅಂತರ ಪಾಲನೆಗೆ ಕ್ರಮ ಕೈಗೊಳ್ಳ ಬೇಕು. ಪ್ರಯಾಣಕ್ಕೆ ಪ್ರತ್ಯೇಕ ಮಾರ್ಗ ಸೂಚಿ ಹೊರಡಿಸಬೇಕು. 65 ವರ್ಷ ಕ್ಕಿಂತ ಮೇಲ್ಪಟ್ಟವರು, ರೋಗಿಗಳು, ಗರ್ಭಿಣಿ ಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಮುನ್ನೆಚ್ಚ ರಿಕೆ ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.