Advertisement

ರಸ್ತೆಯಲ್ಲಿನ ದೇವಾಲಯಗಳ ತೆರವಿಗೆ ಕಟ್ಟುನಿಟ್ಟಿನ ಆದೇಶ

04:15 PM Jan 18, 2020 | Team Udayavani |

ದೇವನಹಳ್ಳಿ: ರಸ್ತೆ ಬದಿಯಲ್ಲಿ 2009ರಿಂದ ಈ ವರೆಗೆ ನಿರ್ಮಾಣವಾಗಿರುವ ದೇವಾಲಯಗಳನ್ನು ತೆರವು ಗೊಳಿಸಬೇಕು. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳನ್ನು ಮೊದಲಿಗೆ ಪಟ್ಟಿ ಮಾಡಿ, ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು ಎಂದು ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ತಿಳಿಸಿದರು.

Advertisement

ನಗರದ ಮಿನಿ ವಿಧಾನ ಸೌಧದ ತಹಶೀಲ್ದಾರ್‌ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಭದ್ರತೆಯಲ್ಲಿ ದೇವಸ್ಥಾನ ತೆರವುಗೊಳಿಸಿ: ಸರ್ವೋತ್ಛ ನ್ಯಾಯಾಲಯವೇ ಆದೇಶ ನೀಡಿರುವುದರಿಂದ ಕೆಲ ಹಂತದ ನ್ಯಾಯಾಲಯದ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಸಾರ್ವಜನಿಕರು ಆಕ್ಷೇಪಿಸಿದರೆ ಸಮಾಧಾನ ದಿಂದ ಆದೇಶ ಆಗಿರುವುದರ ಬಗ್ಗೆ ಅವರಿಗೆ ಮನವರಿಕೆ ಮಾಡಬೇಕು. ಒಪ್ಪದಿದ್ದರೆ ಪೊಲೀಸ್‌ ಭದ್ರತೆಯಲ್ಲಿ ತೆರವುಗೊಳಿಸಿ, ತೆರವು ಕಾರ್ಯಾಚರಣೆ ಸಮಿತಿಯಲ್ಲಿ ಪುರಸಭೆ ಮುಖ್ಯಾಧಿಕಾರಿಗಳು, ಸ್ಥಳೀಯ ಪೊಲೀಸ್‌ ಇನ್ಸ್‌ಪೆಕ್ಟರ್‌, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇರುತ್ತಾರೆ. ಭೂಮಾಪನ ಇಲಾಖೆ ಸಂಬಂಧಿಸಿದ ದೇವಾಲಯಗಳ ಜಾಗವನ್ನು ಗುರುತಿಸಬೇಕು. ತಾಲೂಕು ಪಂಚಾಯಿತಿ ಇಲಾಖೆ ಸಹಕಾರ ನೀಡಬೇಕು. ಮಾರ್ಚ್‌ 31ರೊಳಗೆ ತೆರವು ಕಾರ್ಯಾಚರಣೆ ಗಡುವು ಮುಗಿಸಬೇಕು ಎಂದರು.

ಒಂದು ಕೋತಿ ಆಕ್ಮಿ ಆಕಸ್ಮಿಕವಾಗಿ ಮರಣ ಹೊಂದಿದ್ದರೆ ರಸ್ತೆ ಬದಿ, 2 ರಸ್ತೆಗಳು ಸೇರುವ ಮಧ್ಯದ ಜಾಗದಲ್ಲಿ ಶವಸಂಸ್ಕಾರ ಮಾಡಿ, ಪ್ರಾರಂಭದಲ್ಲಿ ಚಿಕ್ಕ ಕಲ್ಲುಗಳನ್ನು ಇಟ್ಟು ನಂತರ ತಗಡಿನ ಗುಡಿ ನಿರ್ಮಾಣ ಮಾಡಿ, ಒಂದೆರಡು ವರ್ಷದಲ್ಲಿ ಗುಡಿ, ದೇವಾಲಯಗಳನ್ನು ನಿರ್ಮಿಸುತ್ತಾರೆ. ದೇವಾಲಯ ಅಭಿವೃದ್ಧಿ ಆಗುತ್ತದೆ. ಮತ್ತೂಂದು ಕಡೆ ಭಿಕ್ಷುಕರ ಸಂಖ್ಯೆಯೂ ಹೆಚ್ಚುವುದು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ನ್ಯಾಯಾಲಯ 2019ರಲ್ಲಿ ಆದೇಶ ನೀಡಿ, ಯಾವುದೇ ದೇವಾಲಯ, ಮಸೀದಿ, ಚರ್ಚ್‌, ಮಂದಿರಗಳು ನಿಷೇಧಿತ ಸ್ಥಳಗಳಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಿದ್ದರೆ, ತೆರವುಗೊಳಿಸುವುದು ಕಡ್ಡಾಯ ಎಂದು ಮಾಹಿತಿ ನೀಡಿದರು.

ತಾಪಂ ಇಒ ಮುರುಡಯ್ಯ, ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ಸಿಡಿಪಿಒ ಹೇಮಲತಾ, ಶಿಕ್ಷಣಾಧಿಕಾರಿ ಗಾಯಿತ್ರಿ ದೇವಿ, ಕೃಷಿ ಸಹಾಯಕ ನಿರ್ದೇಶಕ ರೇವಣ್ಣ ಮನಗೋಳಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next