Advertisement

UP; ನಕಲು ತಡೆಯಲು ಕಠಿಣ ಕ್ರಮ; 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

04:01 PM Feb 23, 2024 | Team Udayavani |

ಲಕ್ನೋ: ಉತ್ತರ ಪ್ರದೇಶ ಬೋರ್ಡ್‌ ನ ಹೈಸ್ಕೂಲ್ ಮತ್ತು ಮಧ್ಯಂತರ ಪರೀಕ್ಷೆಗಳು ನಕಲು ಮಾಡುವುದನ್ನು ತಡೆಯಲು ಕಟ್ಟುನಿಟ್ಟಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಪರೀಕ್ಷೆಯ ಮೊದಲ ದಿನವೇ ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.

Advertisement

ಕೊಠಡಿ ಇನ್‌ಸ್ಪೆಕ್ಟರ್‌ ಗಳಿಗೆ ಬಾರ್‌ ಕೋಡ್‌ ಗಳೊಂದಿಗೆ ಐಡಿ ಕಾರ್ಡ್‌ಗಳನ್ನು ಪರಿಚಯಿಸುವುದು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಪೊಲೀಸ್ ಕಣ್ಗಾವಲುಗಳೊಂದಿಗೆ ತೀವ್ರ ನಿಗಾ, ಮತ್ತು ವಿವಿಧ ಹಂತಗಳಲ್ಲಿ ಪರೀಕ್ಷಾ ಕೇಂದ್ರಗಳ ಆನ್‌ ಲೈನ್ ಮೇಲ್ವಿಚಾರಣೆ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮೊದಲ ದಿನ ಗಣನೀಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಒಟ್ಟು 3,33,541 ಅಭ್ಯರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ. ಐದು ವಂಚನೆ ಘಟನೆಗಳು ವರದಿಯಾಗಿದ್ದು, ನಕಲಿ ಅಭ್ಯರ್ಥಿಗಳು ಮತ್ತು ಕೇಂದ್ರದ ನಿರ್ವಾಹಕರು ಸೇರಿದಂತೆ ಆರೋಪಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಹೆಚ್ಚಿನ ಜಾಗರೂಕತೆಯ ಅಗತ್ಯವನ್ನು ಗುರುತಿಸಿ, ಯುಪಿ ಮಂಡಳಿಯು ವಂಚನೆಯನ್ನು ತಡೆಯಲು ಹೆಚ್ಚುವರಿ ಉಪಕ್ರಮಗಳನ್ನು ಕೈಗೊಂಡಿದೆ.

ಐಡಿ ಕಾರ್ಡ್‌ಗಳಿಗೆ ಬಾರ್‌ ಕೋಡ್‌ ಗಳು ಸೇರಿ, ಸೂಕ್ಷ್ಮ ಪರೀಕ್ಷಾಕೇಂದ್ರಗಳಲ್ಲಿ ಕಟ್ಟುನಿಟ್ಟಾದ ಮೇಲ್ವಿಚಾರಣೆಯನ್ನು ಮಾಡಲಾಗುತ್ತಿದೆ. ಧ್ವನಿ ರೆಕಾರ್ಡರ್‌ ಗಳೊಂದಿಗೆ ಸಿಸಿಟಿವಿ ಕ್ಯಾಮೆರಾಗಳ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಯುಪಿ ಪೋಲೀಸರು ಭದ್ರತೆ ಒದಗಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next