Advertisement

ಕಠಿಣ ಲಾಕ್ ಡೌನ್ ಜಾರಿಗೊಳಿಸಿದ ರಾಜಸ್ಥಾನ: ಮದುವೆಗೆ 11 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ!

07:56 AM May 07, 2021 | Team Udayavani |

ಜೈಪುರ: ವೇಗವಾಗಿ ಹರಡುತ್ತಿರುವ ಕೋವಿಡ್19 ಸೋಂಕಿನ ಚೈನ್ ಬ್ರೇಕ್ ಮಾಡುವ ಸಲುವಾಗಿ ರಾಜಸ್ಥಾನ ಸರ್ಕಾರ ಮೇ.10ರಿಂದ ಮೇ.24ರವರೆಗೆ ಕಠಿಣ ಲಾಕ್ ಡೌನ್ ಜಾರಿ ಮಾಡಿದೆ.

Advertisement

ಮೇ.10ರ ಬೆಳಗ್ಗೆ 5 ಗಂಟೆಯಿಂದ ಲಾಕ್ ಡೌನ್ ಆರಂಭವಾಗಲಿದ್ದು, ಮೇ .24ರ ಬೆಳಗ್ಗೆ 5 ಗಂಟೆಯವರೆಗೆ ಮುಂದುವರಿಯಲಿದೆ. ವರ್ಚುವಲ್ ಆಗಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಮಾಡಲಾಗಿದೆ.

ಮದುವೆ ಕಾರ್ಯಗಳಿಗೂ ಈ ಸಮಯದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಮೇ 31ರವರೆಗೆ ಮದುವೆ ಸಮಾರಂಭಗಳನ್ನು ಹಮ್ಮಿಕೊಳ್ಳುವಂತಿಲ್ಲ. ಈ ಸಮಯದಲ್ಲಿ ಸಭಾಭವನದಲ್ಲಿ ಯಾವುದೇ ರೀತಿಯ ಮದುವೆ ಅನುಮತಿ ಕಾರ್ಯಗಳಿಗೆ ನೀಡಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಆದರೆ ಈ ಸಮಯದಲ್ಲಿ ಕೋರ್ಟ್ ನಲ್ಲಿ ನಡೆಯುವ ಮದುವೆಗಳಿಗೆ ಅವಕಾಶ ನೀಡಲಾಗಿದೆ. ಅದಲ್ಲದೆ ಮನೆಯಲ್ಲಿ ಮದುವೆ ಸಮಾರಂಭ ನಡೆಸಲು ಅನುಮತಿ ನೀಡಿದ್ದು, ಆದರೆ ಕೇವಲ 11 ಜನರಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಲಾಗಿದೆ. ಅದರೆ ಡಿಜೆ, ಸೌಂಡ್ ಸಿಸ್ಟಂ, ಕ್ಯಾಟರಿಂಗ್ ಗೆ ಅನುಮತಿ ಇಲ್ಲ.

ಗ್ರಾಮೀಣ ಭಾಗದಲ್ಲಿ ನರೇಗಾ ಕೆಲಸಗಳಿಗೂ ಅವಕಾಶ ನೀಡಿಲ್ಲ. ಸರ್ಕಾರಿ ಮತ್ತು ಖಾಸಗಿ ವಾಹನ ವ್ಯವಸ್ಥೆಯನ್ನು ಸ್ಥಗಿತ ಮಾಡಲಾಗಿದೆ. ಆರೋಗ್ಯ ತುರ್ತು ಕಾರ್ಯಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next