Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದೇವೆ. ಗೋ ಸಂತತಿ ಉಳಿವಿಗಾಗಿ ಗೋ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
Related Articles
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ಮುಂದೆ ಗೋವು ಕಡಿದು ಸೇವನೆ ಮಾಡಿದರೂ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು. ಅವರು ಅಧಿಕಾರಕ್ಕೆ ಬಂದರೆ ಗೊ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೇವೆ ಅಂತಾರೆ, ಬಂದು ಪಡೆಯಲಿ ನೋಡೋಣ ಎಂದು ಹೇಳಿದರು.
Advertisement
12,89 ಲಕ್ಷ ರಾಸುಗಳಿಗೆ ಲಸಿಕೆ ರಾಜ್ಯದಲ್ಲಿ 13,732 ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, 12,89 ಲಕ್ಷ ರಾಸುಗಳಿಗೆ ಲಸಿಕೆ ಹಾಕಲಾಗಿದೆ. 19.21 ಲಕ್ಷ ಡೋಸ್ ಲಸಿಕೆ ಬೇಡಿಕೆಯಿದ್ದು 11.92 ಲಕ್ಷ ದಾಸ್ತಾನು ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪುಣ್ಯ ಕೋಟಿ ದತ್ತು ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದೆ. 2600 ಮಂದಿ ಮುಂದೆ ಬಂದಿದ್ದಾರೆ. 17 ಲಕ್ಷ ರೂ. ಸಂಗ್ರಹವಾಗಿದೆ. 200 ಗೋವು ದತ್ತು ಪಡೆಯಲಾಗಿದೆ. 212 ಖಾಸಗಿ ಗೋ ಶಾಲೆಗಳು ನೋಂದಣಿಯಾಗಿದ್ದು 177 ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. 25496 ಗೋವುಗಳಿಗೆ ಆಶ್ರಯ ನೀಡಲಾಗಿದೆ.
– ಪ್ರಭು ಚೌಹಾಣ್ ಸಚಿವ