Advertisement
ಇದರಲ್ಲಿ ಅತಿ ಮುಖ್ಯವೆಂದರೆ, ಫ್ರಾಂಚೈಸಿಯೊಂದು ಜೈವಿಕ ಸುರಕ್ಷಾ ನಿಯಮ ಉಲ್ಲಂಘಿಸಿದರೆ 1 ಕೋಟಿ ರೂ. ದಂಡಕ್ಕೊಳಗಾಗಲಿದೆ, ಗರಿಷ್ಠ 2 ಅಂಕ ಕಳೆದುಕೊಳ್ಳಲಿದೆ! ಅದೇ ಆಟಗಾರನೊಬ್ಬ ಉಲ್ಲಂಘಿಸುವುದಕ್ಕಿರುವ ಗರಿಷ್ಠ ಶಿಕ್ಷೆ ಇಡೀ ಕೂಟದಿಂದ ಹೊರಹಾಕಲ್ಪಡುವುದು.
ಮೊದಲನೇ ಬಾರಿ ಆಟಗಾರನೊಬ್ಬ ನಿಯಮ ಉಲ್ಲಂಘಿಸಿದರೆ 6 ದಿನ ಪ್ರತ್ಯೇಕವಾಸ ಮಾಡಬೇಕಾಗುತ್ತದೆ. ಎರಡನೇ ಬಾರಿ ಮಾಡಿದರೆ ಪ್ರತ್ಯೇಕವಾಸದ ಜತೆಗೆ 1 ಪಂದ್ಯ ಕಳೆದುಕೊಳ್ಳಬೇಕಾಗುತ್ತದೆ. ಮೂರನೇ ಬಾರಿ ಉಲ್ಲಂಘನೆಗೆ ಇಡೀ ಕೂಟವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅಂತಹ ಆಟಗಾರರಿಗೆ ಬದಲೀಯನ್ನು ನೀಡುವುದಿಲ್ಲ. ಆಟಗಾರರು ದೈನಂದಿನ ಆರೋಗ್ಯ ಪರೀಕ್ಷೆ ತಪ್ಪಿಸಿದರೆ, ಜಿಪಿಎಸ್ ಟ್ರ್ಯಾಕರ್ ಹಾಕಿಕೊಳ್ಳದಿದ್ದರೆ, ಕೋವಿಡ್-19 ಪರೀಕ್ಷೆಗೆ ಒಳಗಾಗದಿದ್ದರೆ ಅವರಿಗೆ 60,000 ರೂ. ದಂಡಹಾಕಲಾಗುತ್ತದೆ. ಇದನ್ನೂ ಓದಿ:IPL 2020: ಮುಂಬೈ ದಾಳಿಗೆ ಕುಸಿದ ಪಂಜಾಬ್; ಕಿಂಗ್ಸ್ ಗೆ 49ರನ್ ಗಳ ಸೋಲು
Related Articles
ಒಂದು ವೇಳೆ ಫ್ರಾಂಚೈಸಿ ಜೈವಿಕ ಸುರಕ್ಷಾ ವಲಯದೊಳಗೆ ಹೊರಗಿನ ವ್ಯಕ್ತಿಗಳಿಗೆ ಪ್ರವೇಶ ನೀಡಿದರೆ, ಮೊದಲ ಬಾರಿ 1 ಕೋಟಿ ರೂ. ದಂಡ ಹಾಕಲಾಗುತ್ತದೆ. ಎರಡನೇ ಬಾರಿ ತಂಡದ 1 ಅಂಕ, ಮೂರನೇ ಬಾರಿ ಎರಡು ಅಂಕ ಕಡಿತಗೊಳಿಸಲಾಗುತ್ತದೆ.
Advertisement
ಈ ಎರಡು ಅಂಕವೆನ್ನುವುದು ಒಂದು ಜಯಕ್ಕೆ ಸಿಗುವ ಅಂಕವೆನ್ನುವುದನ್ನು ಮರೆಯುವಂತಿಲ್ಲ. ಒಂದು ವೇಳೆ ತಂಡವೊಂದು ತನ್ನ ತಪ್ಪಿನಿಂದ 12ಕ್ಕಿಂತ ಕಡಿಮೆ ಆಟಗಾರರೊಂದಿಗೆ ಆಡುವ ಅನಿವಾರ್ಯತೆ ಎದುರಿಸಿದರೆ, ಆ ಪಂದ್ಯವನ್ನು ಬೇರೆ ದಿನಾಂಕದಲ್ಲಿ ಆಡಿಸಲು ಯತ್ನಿಸಲಾಗುತ್ತದೆ. ಆಗದಿದ್ದರೆ ರದ್ದು ಮಾಡಲಾಗುತ್ತದೆ.