ಕುಂಬಳೆ:ಇನ್‌ಸ್ಟಾಗ್ರಾಂ, ಫೇಸ್‌ಬುಕ್, ವಾಟ್ಸಪ್, ಟೆಲಿಗ್ರಾಂ ಮೆಸೆಂಜರ್ ಇತ್ಯಾದಿ ಜಾಲತಾಣಗಳ ಮೂಲಕ ಕೋಮು ಭಾವನೆಯನ್ನು ಕೆರಳಿಸುವ ಸಂದೇಶವನ್ನು ರವಾನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರವನ್ನು ತಳೆದಿರುವ ಪೊಲೀಸರು ಕಾಸರಗೋಡು ಜಿಲ್ಲೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಮಣಿಪುರ ಜನಾಂಗೀಯ ಕಲಹದ ವಿರುದ್ಧ ಮುಸ್ಲಿಂಲೀಗ್ ಪಕ್ಷ ಕಾಞಂಗಾಡಿನಲ್ಲಿ ನಡೆಸಿದ ಮೆರವಣಿಗೆಯಲ್ಲಿ ಕೋಮು ಪ್ರಚೋದನೆಯ ಘೋಷಣೆಗಳನ್ನು ಕೂಗಿದ 300 ಮಂದಿಯ ವಿರುದ್ಧ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಈಗಾಗಲೇ ಹಲವಾರು ಮಂದಿಯನ್ನು ಬಂಧಿಸಿದ್ದಾರೆ.
ಕೆಲವರು ಬಂಧನದ ಭಯದಲ್ಲಿ ಪರಾರಿಯಾಗಿದ್ದಾರೆ.ಆ ಬಳಿಕ ಕೆಲವರು ರವಾನಿಸಿದ ಸಂದೇಶದಲ್ಲಿ ಆರು ಪ್ರಕರಣಗಳನ್ನು ದಾಖಲಿಸಲಾಗಿದೆ.
ಸೈಬರ್ ಸೆಲ್ ಠಾಣೆಯ ಎಸ್ ಐ ಪಿ.ನಾರಾಯಣನ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಕಾಸರಗೋಡಿಗೆ ಶುಕ್ರವಾರ ಆಗಮಿಸಿದ ಡಿಜಿಪಿ ಡಾ.ಶೇಖ್ ದರ್ವೇಶ್ ಸಾಹಿಬ್ ರವರು ಎಸ್‌ಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪೊಲೀಸರಿಗೆ ಕಠಿಣ ಕ್ರಮಕೈಗೊಳ್ಳಬೇಕೆಂಬುದಾಗಿ ಆದೇಶಿಸಿದ್ದಾರೆ.
ಯಾವುದೇ ಕಾರಣಕ್ಕೂ ಅಶಾಂತಿಗೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.