Advertisement

ವೇಗದ ವಾಹನ ಚಾಲನೆ ವಿರುದ ಕಠಿನ ಕ್ರಮ: ರಾಜ್ಯ ಪೊಲೀಸ್‌

12:29 PM Jun 24, 2020 | Suhan S |

ಮುಂಬಯಿ, ಜೂ. 23: ರಾಜ್ಯದಲ್ಲಿ ರಸ್ತೆ ಅಪಘಾತ ಸಂಬಂಧಿತ ಸಾವು ನೋವುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮಹಾರಾಷ್ಟ್ರ ಹೆದ್ದಾರಿ ರಾಜ್ಯ ಪೊಲೀಸರು (ಎಸ್‌ ಎಸ್‌ಪಿ) ರಸ್ತೆಗಳಲ್ಲಿ ವೇಗದ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Advertisement

ಥಾಣೆ ಎಚ್‌ಎಸ್‌ಪಿ ಪೊಲೀಸ್‌ ಅಧೀಕ್ಷಕ ದಿಗಂಬರ್‌ ಪ್ರಧಾನ್‌ ಅವರು ಇತ್ತೀಚೆಗೆ ಹೊರಡಿಸಿದ ಆದೇಶದ ಪ್ರಕಾರ, ವೇಗದ ಮಿತಿಯನ್ನು ಪಾಲಿಸದ ವಾಹನ ಚಾಲಕರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದು, ದಂಡ ವಿಧಿಸಲಿದ್ದಾರೆ. ಶೇ. 30ರಷ್ಟು ರಸ್ತೆ ಅಪಘಾತಗಳು ವೇಗದ ಚಾಲನೆಯಿಂದಾಗಿ ಸಂಭವಿಸುತ್ತಿವೆ ಎಂಬ ಅಂಶವು ಬಹಿರಂಗವಾದ ಅನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ದಾಖಲಾದ ವೇಗದ ಉಲ್ಲಂಘನೆಗಳ ವಿರುದ್ಧ ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಇತರ ಪ್ರಮುಖ ರಸ್ತೆಗಳಿಗೆ ಪೊಲೀಸರು ಪ್ರತ್ಯೇಕ ವೇಗ ಮಿತಿಗಳನ್ನು ರೂಪಿಸಿದ್ದರು. ಈ ಹೊಸ ಪರಿಷ್ಕೃತ ವೇಗ ಮಿತಿಗಳನ್ನು ಕಳೆದ ವರ್ಷದ ಅ. 25ರಿಂದ ಜಾರಿಗೆ ತರಲಾಗಿದ್ದರೂ, ವಾಹನ ಚಾಲಕರು ಅವುಗಳನ್ನು ಅನುಸರಿಸುತ್ತಿಲ್ಲ. ನಿಯಮಗಳನ್ನು ಉಲ್ಲಂ ಸುವವರಿಗೆ ದಂಡ ವಿಧಿಸುವ ಪ್ರಕ್ರಿಯೆ ಹೆಚ್ಚಿಸಲು ಪೊಲೀಸರು ಇನ್ನುಮುಂದೆ ಟೋಲ್‌ ನಾಕಾದಲ್ಲಿ ಅಳವಡಿಸಲಾದ ವಿವಿಧ ಸಿಸಿಟಿವಿ ಕೆಮೆರಾಗಳು ಮತ್ತು ಇತರ ಸಂಚಾರ ಸಂಕೇತಗಳ ಸಹಾಯ ಪಡೆದುಕೊಳ್ಳಲಿದ್ದಾರೆ ಎಂದು ಪ್ರಧಾನ್‌ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರತಿವರ್ಷ ರಸ್ತೆ ಅಪಘಾತದಿಂದ ಸುಮಾರು 1.30 ಲಕ್ಷ ಮಂದಿ ಮರಣ ಹೊಂದುತ್ತಾರೆ, ಸುಮಾರು 2 ಲಕ್ಷ ಜನರು ಗಂಭೀರವಾಗಿ ಗಾಯಗೊಳ್ಳುತ್ತಾರೆ. ಹೆದ್ದಾರಿಗಳಲ್ಲಿ ವೇಗದ ವಾಹನ ಚಾಲನೆಯಿಂದ ಸಾವನ್ನಪ್ಪುವ ಹೆಚ್ಚಿನನವರು 15ರಿಂದ 45 ವರ್ಷದೊಳಗಿನವರಾಗಿದ್ದಾರೆ ಎಂದು ಅಧ್ಯಯನ ಬಹಿರಂಗಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next