ಕಲಘಟಗಿ: ದೇಶದ ಸರ್ವಾಂಗೀಣ ಪ್ರಗತಿಗೆ ಎಲ್ಲರ ಪ್ರಾಮಾಣಿಕ ಪರಿಶ್ರಮ ಬಹುಮುಖ್ಯ ಎಂದು ತಹಶೀಲ್ದಾರ ಜೆ.ಬಿ. ಜಕ್ಕನಗೌಡರ ಹೇಳಿದರು. ಪಟ್ಟಣದ ಸರ್ಕಾರಿ ಮಾದರಿ ಶಾಲೆ ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಮಹಾನ್ ನಾಯಕರ ತ್ಯಾಗ ಮತ್ತು ಬಲಿದಾನದಿಂದ ದೇಶದ ಜನತೆಗೆ ಸ್ವಾತಂತ್ರ್ಯ ಲಭ್ಯವಾಗಿದೆ. ನಾಯಕರ ಜೀವನ ಚರಿತ್ರೆ ಅರಿತು ಕಿಂಚಿತ್ತಾದರೂ ಅವರೆಲ್ಲರ ಆದರ್ಶಗಳ ಪರಿಪಾಲನೆ ಮಾಡಲು ಮುಂದಾಗಬೇಕು ಎಂದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಲ್ಯಾಪ್‌ಟಾಪ್ ವಿತರಿಸಲಾಯಿತು.
ಮಕ್ಕಳ ಸಹಾಯವಾಣಿ ಹಾಗೂ ಕಸಾಪದಿಂದ ನಡೆದ ಆಶುಭಾಷಣ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಿಪಂ ಸದಸ್ಯೆ ಈರವ್ವ ದಾಸನಕೊಪ್ಪ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಆಡಿನವರ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಕೆಎಂಎಫ್ ನಿರ್ದೇಶಕ ವೈ.ಬಿ.ದಾಸನಕೊಪ್ಪ, ತಾಪಂ ಇಒ ಎಸ್.ಎಂ. ಕಾಂಬಳೆ, ಬಿಇಒ ಎಂ.ಕೆ. ಮರಿಗೌಡರ, ಸಿಪಿಐ ವಿಜಯ ಬಿರಾದಾರ,
-ಪಿಎಸ್‌ಐ ಪರಮೇಶ್ವರ ಕವಟಗಿ, ಪ್ರದೀಪ ಕಿವಟೆ, ಎಸ್. ಎಂ. ಮಾಕಣ್ಣವರ, ಕೆ.ವೈ. ಗಂಜಿಗಟ್ಟಿ, ಜಿ. ಪದ್ಮಾವತಿ, ಆರ್.ಜಿ. ಮುನವಳ್ಳಿ, ಎಸ್.ಜಿ. ಲೋಕುರ, ಸೋಮಶೇಖರ ಬೆನ್ನೂರ, ತಾಪಂ ಸದಸ್ಯರಾದ ಬಸಪ್ಪ ಸಾದರ, ಬಸವರಾಜ ಬಾವಕಾರ, ಶೋಭಾ ಯಾದವ, ಬಸವ್ವ ಮೂಗಣ್ಣವರ,
-ಮಂಜುಳಾ ಲಮಾಣಿ, ಕವಿತಾ ಬಡಿಗೇರ, ಪಪಂ ಅಧ್ಯಕ್ಷ ಬೂದಪ್ಪ ಹುರಕಡ್ಲಿ, ಉಪಾಧ್ಯಕ್ಷೆ ಗೀತಾ ದೈವಜ್ಞ, ಗಂಗಪ್ಪ ಗೌಳಿ, ರಾಜು ಕಲಘಟಗಿ, ಎಸ್.ಎ. ಚಿಕ್ಕನರ್ತಿ, ವಿ.ಎನ್. ಹಾಲಿ, ಸಾತಪ್ಪ ಕುಂಕೂರ, ಬಿ.ಬಿ. ಕಿಚಡಿ ಇತರರಿದ್ದರು. ಎಪಿಎಂಸಿಯಲ್ಲಿ: ಸ್ಥಳೀಯ ಎಪಿಎಂಸಿ ಆವರಣದಲ್ಲಿ ಸ್ವಾತಂತ್ರೊತ್ಸವ ಆಚರಿಸಲಾಯಿತು.
ಆಡಳಿತ ಮಂಡಳಿ ಅಧ್ಯಕ್ಷ ಮುತ್ತಪ್ಪ ಅಂಗಡಿ, ಉಪಾಧ್ಯಕ್ಷ ಸಿದ್ದಪ್ಪ ಕೂಡಲಗಿ, ಸದಸ್ಯರಾದ ಸಿ.ಎಂ. ಜಮ್ಮಿಹಾಳ, ಎಚ್.ಎಂ. ಕಾಳೆ, ಆರ್.ಕೆ. ಬಿಜವಾಡ, ಎ.ಎಸ್. ಪಾಟೀಲ, ಆರ್. ಎಸ್. ಪಾಟೀಲ, ಎಂ.ಎಂ. ಧಾರವಾಡ, ಎಚ್.ಎಫ್. ಸಾಲಿ, ಕೆ.ಎಸ್. ನಿಗದಿ, ವಿ.ಬಿ. ಸತ್ತೂರ, ಎಂ.ಸಿ. ಹಿರೇಮಠ, ಆರ್. ಎಚ್. ಪಾಟೀಲ, ವಿ.ಎನ್. ದೊಡಮನಿ, ಕೆ.ಎಸ್. ಕುಬಿಹಾಳ, ಕಾರ್ಯದರ್ಶಿ ಬಿ.ವಿ. ನೇಸರಗಿ, ಸಹಕಾರ್ಯದರ್ಶಿ ಅನಿತಾ ಗಾಮನಗಟ್ಟಿ ಇತರರಿದ್ದರು.