Advertisement

ಗ್ರಾಮಾಂತರ ಭಾಗದಲ್ಲಿ ಪಕ್ಷ ಬಲಪಡಿಸಿ: ಸುಧಾಕರ್‌

11:32 AM Jun 30, 2020 | mahesh |

ಹಿರಿಯೂರು: ಕೆಪಿಸಿಸಿ ನೂತನ ಅಧ್ಯಕ್ಷರು ಪಕ್ಷ ಸಂಘಟನೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಪಕ್ಷವನ್ನು ಬಲಪಡಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ
ಕಾರ್ಯಕರ್ತರು ಸಜ್ಜಾಗಬೇಕು ಎಂದು ಮಾಜಿ ಸಚಿವ ಡಿ. ಸುಧಾಕರ್‌ ಕರೆ ನೀಡಿದರು. ತಾಲೂಕಿನ ಐಮಂಗಲ ಹಾಗೂ ಧರ್ಮಪುರ ಹೋಬಳಿಯ ಖಂಡೇನಹಳ್ಳಿ, ಧರ್ಮಪುರ, ಹರಿಯಬ್ಬೆ, ರಂಗೇನಹಳ್ಳಿ, ಗನ್ನಾಯಕನಹಳ್ಳಿ, ಹರ್ತಿಕೋಟೆ, ಯರಬಳ್ಳಿ, ಎಂ.ಡಿ. ಕೋಟೆ ಗ್ರಾಮಗಳಿಗೆ ಭೇಟಿ ನೀಡಿದ್ದ ಅವರು, ಜುಲೈ 2 ರಂದು ನಡೆಯಲಿರುವ ಡಿ.ಕೆ. ಶಿವಕುಮಾರ್‌ ಪದಗ್ರಹಣ ಸಮಾರಂಭ ವೀಕ್ಷಿಸಲು ಎಲ್‌ಸಿಡಿ ಪರದೆ ಅಳವಡಿಕೆ ಕಾರ್ಯ ವೀಕ್ಷಿಸಿ ಅವರು ಮಾತನಾಡಿದರು. ತಾಲೂಕಿನ ಸುಮಾರು ಐವತ್ತು ಕಡೆ ಎಲ್‌ ಇಡಿ ಪರದೆ ಅಳವಡಿಸಿ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದರು.

Advertisement

ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ ಬಾಬು, ಸದಸ್ಯೆ ಗೀತಾ ನಾಗಕುಮಾರ್‌, ಎಪಿಎಂಸಿ ಮಾಜಿ ಅಧ್ಯಕ್ಷ ಈರಲಿಂಗೇಗೌಡ, ಗ್ರಾಮಾಂತರ ಕಾಂಗ್ರೆಸ್‌ ಅಧ್ಯಕ್ಷ ಕಲ್ಲಟ್ಟಿ ತಿಪ್ಪೇಸ್ವಾಮಿ, ಕೆಪಿಸಿಸಿ ಸದಸ್ಯರಾದ ಕಂದಿಕೆರೆ ಸುರೇಶ್‌ಬಾಬು, ಬಿ.ಎಚ್‌. ಮಂಜುನಾಥ್‌, ನಗರಸಭಾ ಸದಸ್ಯರಾದ ಗುಂಡೇಶ್‌ ಕುಮಾರ್‌, ಎಸ್‌.ಆರ್‌. ತಿಪ್ಪೇಸ್ವಾಮಿ, ಹಂಪಣ್ಣ, ಮಧು ಹಳ್ಳಿಕೆರೆ, ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷೆ ಯಶೋದಮ್ಮ, ಚಿಕ್ಕಣ್ಣ, ಯುವ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಪೃಥ್ವಿ ಕೋಗಾರ್‌, ರಾಮಚಂದ್ರಪ್ಪ, ಶ್ರೀಧರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next