Advertisement

ಇವಿಎಂ ಬಗ್ಗೆ ಹಾದಿ-ಬೀದಿ ಚರ್ಚೆ ಬೇಡ

07:43 AM Mar 30, 2019 | Vishnu Das |

ಬೆಂಗಳೂರು: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಗ್ಗೆ ರಾಜಕೀಯ ಪಕ್ಷಗಳು
ಅಥವಾ ಜನಸಾಮಾನ್ಯರು ಸುಖಾಸುಮ್ಮನೆ ಆರೋಪ ಮಾಡುವುದು ಮತ್ತು ಇದರ
ಬಗ್ಗೆಹಾದಿ-ಬೀದಿಯಲ್ಲಿಮಾತನಾಡುವುದು ಸರಿಯಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Advertisement

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇವಿಎಂ-ವಿವಿಪ್ಯಾಟ್‌ಗಳ ತಾಂತ್ರಿಕ ವಿಷಯ
ಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಮಾತ
ನಾಡಿದ ಅವರು, ಇವಿಎಂನ ತಾಂತ್ರಿಕ ಹಾಗೂ ಆಡಳಿತಾತ್ಮಕ ವಿಷಯಗಳನ್ನು ಬಲವಾಗಿ ಸಮರ್ಥಿಸಿಕೊಂಡರು. ನಮ್ಮ ದೇಶದಲ್ಲಿ ಬಳಕೆ ಆಗುತ್ತಿರುವ ಇವಿಎಂಗಳು
ಇಡೀ ಪ್ರಪಂಚದಲ್ಲೇ ಅತ್ಯಂತ ಸುಧಾರಿತ ಮತ್ತು ತಾಂತ್ರಿಕವಾಗಿ ಸುರಕ್ಷಿತ ಇವಿಎಂಗಳಾಗಿವೆ. ಇವುಗಳನ್ನು ಹ್ಯಾಕ್‌ ಮಾಡಲು, ತಿರುಚಲು, ದುರ್ಬಳಕೆ ಮಾಡಿಕೊಳ್ಳಲು ಯಾವ ಕಾರಣಕ್ಕೂ, ಯಾವ ಹಂತದಲ್ಲೂ ಸಾಧ್ಯ ವಿಲ್ಲ. ಇವುಗಳ ಬಗೆಗಿನ ಎಲ್ಲ ಆರೋಪ, ಆಕ್ಷೇಪ ಮತ್ತು ಅಪಸ್ವರಗಳಿಗೆ ತಾಂತ್ರಿಕ ಉತ್ತರಗಳು ಸಿಕ್ಕಿವೆ. ಮೇಲಾಗಿ ಇದಕ್ಕೆ ನ್ಯಾಯಾಲ ಯದ ಸಮರ್ಥನೆ ಸಿಕ್ಕಿದೆ ಎಂದರು.

ಇವಿಎಂ ಬಗ್ಗೆ ರಾಜಕೀಯ ಪಕ್ಷಗಳಿಂದ ಹಾಗೂ ಜನಸಾಮಾನ್ಯರಿಂದ ಸಾಕಷ್ಟು
ದೂರುಗಳು ಬಂದಿವೆ. ಅನುಮಾನಗಳನ್ನು ವ್ಯಕ್ತಪಡಿಸಲಾಗಿದೆ. ಆದರೆ, ಅದೆಲ್ಲದರ ಬಗ್ಗೆ
ತಾಂತ್ರಿಕ ತಜ್ಞರಿಂದ ಸಮಂಜಸವಾದ ಉತ್ತರ ಮತ್ತು ಸ್ಪಷ್ಟನೆಗಳನ್ನು ಕೊಡಲಾಗಿದೆ.
ಇವಿಎಂ ಹ್ಯಾಕ್‌ ಬಗ್ಗೆ ಬಲವಾದ ಆರೋಪಗಳು ಕೇಳಿ ಬಂದಿದ್ದಾಗ ಕೇಂದ್ರ ಚುನಾವಣಾ
ಆಯೋಗ “ಓಪನ್‌ ಹ್ಯಾಕಥಾನ್‌’ಗೆ ಕರೆ ಕೊಟ್ಟಿತ್ತು. ಆರೋಪ ಮಾಡಿದ್ದ ಯಾರೊಬ
ºರೂ ಅಲ್ಲಿಗೆ ಬಂದಿಲ್ಲ. ಇವಿಎಂ ಬಗ್ಗೆ ಇಲ್ಲಿವರೆಗೆ ಮಾಡಲಾದ ಯಾವ ಆರೋಪವ
ನ್ನೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದರು.

ಈ ವೇಳೆ, ಉಪ ಮುಖ್ಯ ಚುನಾವಣಾಧಿಕಾರಿ ವಿ.ರಾಘ ವೇಂದ್ರ ಅವರು
ಇವಿಎಂ-ವಿವಿಪ್ಯಾಟ್‌ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ವಾರ್ತಾ ಇಲಾಖೆ ನಿರ್ದೇಶಕ
ಭೃಂಗೀಶ್‌ ಮತ್ತಿತರರು ಇದ್ದರು.

5 ಕೋಟಿ ಮಂದಿಗೆ ಪ್ರಾತ್ಯಕ್ಷಿಕೆ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ 3.5 ಕೋಟಿ ಜನರಿಗೆ ಇವಿಎಂ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗಿತ್ತು. ಈ ಬಾರಿ ಇಲ್ಲಿವರೆಗೆ 3 ಕೋಟಿಗೂ ಹೆಚ್ಚು ಜನರಿಗೆ ಪ್ರಾತ್ಯಕ್ಷಿಕೆ ನೀಡಲಾಗಿದ್ದು, 5 ಕೋಟಿಗೂ ಹೆಚ್ಚು ಜನರಿಗೆ ಪ್ರಾತ್ಯಕ್ಷಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ವಿವಿಪ್ಯಾಟ್‌ ಬಳಕೆಯಿಂದ ಮತದಾನದ ಖಾತರಿ ಸಿಗಲಿದೆ. ಒಬ್ಬ ಮತದಾರ ಮತ ಚಲಾಯಿಸಿದಾಗ ವಿವಿಪ್ಯಾಟ್‌ನ ಗಾಜಿನ ಕಿಂಡಿಯಲ್ಲಿ ಏಳು ಸೆಕೆಂಡ್‌ ವರೆಗೆ ಮತದಾನದ ವಿವರ ಪ್ರದರ್ಶನಗೊಳ್ಳುತ್ತದೆ. ಇವಿಎಂ ಮತಯಂತ್ರಗಳನ್ನು ಜಿಪಿಎಸ್‌ ವ್ಯವಸ್ಥೆ ಅಳವಡಿಸಿರುವ ವಾಹನಗಳಲ್ಲಿ ಬಿಗಿ ಪೊಲೀಸ್‌ ಭದ್ರತೆಯಲ್ಲಿ
ಸಾಗಿಸಲಾಗುತ್ತದೆ. ರಾಜಕೀಯ ಪಕ್ಷದ ಪ್ರತಿನಿಧಿಗಳ ಬೆಂಗಾವಲಿಗೂ ಅವಕಾಶವಿರುತ್ತದೆ ಎಂದು ಸಂಜೀವ ಕುಮಾರ್‌ ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next