“ನಾನು ಲೈಫಲ್ಲಿ ಸೋಲುಂಡು ನೋವಲ್ಲಿದ್ದಾಗ, ನಿರ್ಮಾಪಕ ಎಂ.ಎನ್.ಕುಮಾರ್ ನನ್ನ ಕೈ ಹಿಡಿದರು. “ನಾನಿದ್ದೇನೆ’ ಅಂದ್ರು, ಹೇಳಿದಂತೆ ನಡೆದುಕೊಂಡರು. ಅವರಿಗೆ ನಾನು ಋಣಿಯಾಗಿರಿ¤àನಿ…’
– ಹೀಗೆ ಹೇಳುವ ಮೂಲಕ ಮುಂದೊಂದು ದಿನ ನಾನು ಗೆದ್ದೇ ಗೆಲ್ತಿàನಿ ಅಂತ ವಿಶ್ವಾಸದಿಂದ ಹೇಳಿಕೊಂಡರು ನೀನಾಸಂ ಸತೀಶ್.
ಅವರು ಹೇಳಿದ್ದು, “ಟೈಗರ್ ಗಲ್ಲಿ’ ಬಗ್ಗೆ. ಅ.27 ರಂದು ಚಿತ್ರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಮಾಹಿತಿ ಕೊಡಲೆಂದೇ ನಿರ್ದೇಶಕ ರವಿಶ್ರೀವತ್ಸ, ತಮ್ಮ ತಂಡದೊಂದಿಗೆ ಮಾಧ್ಯಮದೆದುರು ಕುಳಿತಿದ್ದರು. ನೀನಾಸಂ ಮೈಕ್ ಹಿಡಿದು ಮಾತಿಗಿಳಿದರು. “ನನ್ನ ಲೈಫಲ್ಲಿ “ಟೈಗರ್ ಗಲ್ಲಿ’ ತುಂಬಾ ಮುಖ್ಯವಾದ ಚಿತ್ರ. ಯಾಕೆಂದರೆ, “ರಾಕೆಟ್’ ಸೋತು ನೆಲಕಚ್ಚಿದ ವೇಳೆ ನಾನು ನೋವಲ್ಲಿದ್ದೆ. ಆಗ, ನಿರ್ಮಾಪಕರು ಈ ಚಿತ್ರ ಕೊಟ್ಟರು. ಹಾಗಾಗಿ ನಾನು ಎಷ್ಟೇ ಎತ್ತರಕ್ಕೆ ಬೆಳೆದರೂ ಹೀಗೇ ಇರಿ¤àನಿ. ನೋವಲ್ಲಿ ಸ್ಪಂದಿಸಿದವರನ್ನು ಎಂದಿಗೂ ಮರೆಯೋದಿಲ್ಲ. ಈ ಚಿತ್ರ ಮಾಡೋಕೆ ಕಾರಣ ಕಥೆ ಮತ್ತು ಪಾತ್ರ. ಎಲ್ಲದ್ದಕ್ಕೂ ಹೆಚ್ಚಾಗಿ ನಿರ್ದೇಶಕರು ನನಗೆ ಮೊದಲ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದು. ಕಥೆ ಹೇಳಿದಾಗ, ಆ ಪಾತ್ರ ಮಾಡೋಕ್ಕಾಗುತ್ತಾ ಎಂಬ ಪ್ರಶ್ನೆ ಎದುರಾಯ್ತು. ಆದರೂ ನಿರ್ದೇಶಕರು ಕೊಟ್ಟ ಪ್ರೋತ್ಸಾಹ, ಧೈರ್ಯದಿಂದ ಒಳ್ಳೇ ಚಿತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ನನಗೆ “ರಾಕೆಟ್’ನಲ್ಲಾಗಿದ್ದ ಸೋಲು, ನೋವು, ಅವಮಾನಗಳನ್ನೆಲ್ಲಾ ಈ ಚಿತ್ರದ ಮೂಲಕ ತೀರಿಸಿಕೊಳ್ಳುವ ನಂಬಿಕೆ ಇದೆ. ಇಲ್ಲಿ ಜ್ವರ ಇದ್ದರೂ ಎನರ್ಜಿ ಇಟ್ಟುಕೊಂಡು ಕೆಲಸ ಮಾಡಿದೆ. ಅದಕ್ಕೆ ಕಾರಣ, ಜತೆಯಲ್ಲಿದ್ದ ತಂಡ. ಇಲ್ಲಿ ಎಲ್ಲಾ ವರ್ಗಕ್ಕೂ ಇಷ್ಟವಾಗುವ ಅಂಶಗಳಿವೆ. ಭ್ರಷ್ಟಾಚಾರ ಸೇರಿದಂತೆ ಈಗಿನ ವಾಸ್ತವಾಂಶ ಚಿತ್ರದ ಹೈಲೈಟ್’ ಅಂದರು ಸತೀಶ್.
ನಿರ್ದೇಶಕ ರವಿ ಶ್ರೀವತ್ಸ ಅವರಿಗೆ, ನಿರ್ಮಾಪಕರು ಕೊಟ್ಟ ಸಾಥ್‌ನಿಂದಾಗಿಯೇ “ಟೈಗರ್ ಗಲ್ಲಿ’ ಆಗಲು ಕಾರಣವಂತೆ. “ಟೈಗರ್ ಗಲ್ಲಿ’ ಎಲ್ಲೋ ಒಂದು ಕಡೆ ಬೇರೆಯ ಮಜಾ ಕೊಟ್ಟ ಸಿನಿಮಾ. ಇದು ಬೇರೆ ರೀತಿಯಲ್ಲೇ ನೋಡುಗರನ್ನು ಕರೆದುಕೊಂಡು ಹೋಗುತ್ತೆ ಎಂಬ ಗ್ಯಾರಂಟಿ ಕೊಡ್ತೀನಿ. ಇದುವರೆಗೆ ನಾನು ಮಾಡಿದ ಚಿತ್ರಗಳು ಒನ್‌ಸೈಡೆಡ್ ಎಂಬ ಹಣೆಪಟ್ಟಿ ಪಡೆದಿದ್ದವು. ಆದರೆ, ಇದು ಹೊಸತನದ ಮನರಂಜನೆ ಕೊಡಲಿದೆ. ಇಲ್ಲಿ ಶಿವಮಣಿ, ಅಯ್ಯಪ್ಪ, ಗಿರಿರಾಜ್‌ರಂತಹ ತಂತ್ರಜ್ಞರ ಸಹಕಾರ ಮತ್ತು ಪ್ರೋತ್ಸಾಹ ಸಿಕ್ಕಿದ್ದರಿಂದ ಚಿತ್ರ ನನ್ನ ನಿರೀಕ್ಷೆ ಮೀರಿ ಮೂಡಿಬಂದಿದೆ.
ನನ್ನ ಗುರು ಕೆ.ವಿ. ರಾಜು ಅವರ ಸಲಹೆ ಮತ್ತು ಕೆಲ ಬದಲಾವಣೆಗಳು ಚಿತ್ರದ ವೇಗಕ್ಕೆ ಕಾರಣವಾಗಿವೆ. ಇಲ್ಲಿ ಪ್ರತಿಯೊಂದು ಪಾತ್ರಕ್ಕೂ ಆದ್ಯತೆ ಇದೆ. ಎಲ್ಲವೂ ಅಬ್ಬರಿಸಿ, ಬೊಬ್ಬರಿಸುತ್ತವೆ. ಸತೀಶ್ ಒಳ್ಳೆಯ ನಟ, ಅವರಿಗೆ ಇಲ್ಲಿ ಬೇರೆಯದ್ದೇ ಇಮೇಜ್ ಸಿಗಲಿದೆ. ಉಳಿದಂತೆ ಭಾವನಾ ರಾವ್, ರೋಷಣಿ, ಪೂಜಾ ಲೋಕೇಶ್, ಲಕ್ಷ್ಮೀದೇವಿ, ಯಮುನಾ ಶ್ರೀನಿಧಿ ಹಾಗು ನಿರ್ಮಾಪಕ ಯೋಗಿ ಇತರರ ಪಾತ್ರಗಳು ಕೂಡ ಗಮನಸೆಳೆಯುತ್ತವೆ. ಒಂದಂತೂ ನಿಜ, ಈ ಚಿತ್ರ ನೋಡಿದವರಿಗೆ, ನಾನು ಇರಬೇಕಿತ್ತು ಅನಿಸೋದಂತೂ ಗ್ಯಾರಂಟಿ’ ಅಂದರು ರವಿ ಶ್ರೀವತ್ಸ.
ಶಿವಮಣಿ ಅವರಿಗೆ ಇಲ್ಲೊಂದು ವಿಶೇಷ ಪಾತ್ರ ಸಿಕ್ಕಿದೆಯಂತೆ. ಇನ್ನು ಮುಂದೆ ಅವರು ನಿರ್ದೇಶನದ ಜತೆಗೆ ನಟನೆ ಮುಂದುವರೆಸಿಕೊಂಡು ಹೋಗುತ್ತಾರಂತೆ. “ಜಟ್ಟ’ ಗಿರಿರಾಜ್ ಅವರಿಗಿಲ್ಲಿ ಹೊಸ ಬಗೆಯ ಪಾತ್ರ ಸಿಕ್ಕಿದೆಯಂತೆ.
ಕಮರ್ಷಿಯಲ್ ಚಿತ್ರದಲ್ಲಿ ಕೆಲಸ ಮಾಡಿದ ಖುಷಿ ಅವರದು. ಅಯ್ಯಪ್ಪ ಅವರಿಗೆ ಈ ಚಿತ್ರದ ಕಥೆಯಲ್ಲಿರುವ ಕಮರ್ಷಿಯಲ್ ಅಂಶ ನೋಡಿ ಎಷ್ಟೊಂದು ಎನರ್ಜಿ ಇರುವಂತಹ ಸಬೆjಕ್ಟ್ ಅನ್ನು ಮಿಸ್ ಮಾಡಿಕೊಳ್ಳಬಾರದು ಅಂತ ಅವರೊಂದು ಪಾತ್ರ ಮಾಡಿದ್ದಾರಂತೆ. ಉಳಿದಂತೆ ಪೂಜಾ ಇಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡರೆ, ಭಾವನಾರಾವ್ ಇಲ್ಲಿ ಬೋಲ್ಡ್ ಹುಡುಗಿಯ ಪಾತ್ರ ಮಾಡಿದ್ದಾರೆ, ಮೈಸೂರಿನ ಹೊಸ ಹುಡುಗಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರಂತೆ. ಸಾಯಿಕೃಷ್ಣ ಅವರಿಗೆ ನಿರ್ದೇಶಕರು ವಿಲನ್ ಪಾತ್ರ ಕೊಟ್ಟಿದ್ದಾರಂತೆ. ಈ ಚಿತ್ರವನ್ನು ಜಾಕ್ ಮಂಜು ಅವರು ವಿತರಣೆ ಮಾಡುತ್ತಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ತರುವ ಯೋಚನೆ ಅವರದು.
– ವಿಜಯ್ ಭರಮಸಾಗರ