Advertisement

ರಸ್ತೆಯಲ್ಲಿ ಮದ್ಯದಂಗಡಿಗಳ ಕಸ

08:34 AM Jun 02, 2019 | Team Udayavani |

ಬನಹಟ್ಟಿ: ರಬಕವಿ ಬನಹಟ್ಟಿ ಅವಳಿ ನಗರಗಳ ಮದ್ಯದಂಗಡಿಗಳು ನಗರಸಭೆ ಗುರುತಿಸಿದ ಜಾಗದಲ್ಲಿ ಮದ್ಯದ ಬಾಟಲಿ ಸೇರಿದಂತೆ ಕಸದ ರಾಶಿಯನ್ನು ಹಾಕದೇ ರಸ್ತೆ ಮೇಲೆ ಎಸೆದು ನಗರದ ಸೌಂದರ್ಯ ಹಾಳು ಮಾಡುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

Advertisement

ಬನಹಟ್ಟಿ ನೂಲಿನ ಗಿರಣಿಯ ಎದುರಿನ ಕುಡಚಿ ಜಮಖಂಡಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಮದ್ಯ ಬಾಟಲಿ ಸೇರಿದಂತೆ ಕಸ ಎಸೆಯಲಾಗಿದೆ. ಮನೆ-ಮನೆಗೆ ನಗರಸಭೆ ಕಸ ಸಂಗ್ರಹಿಸುವ ವಾಹನ ಬಂದು ಪ್ರತಿದಿನ ಕಸ ಸಂಗ್ರಹ ಮಾಡಿ ಸೂಕ್ತ ಸ್ಥಳದಲ್ಲಿ ಕಸ ವಿಲೇವಾರಿ ಮಾಡುತ್ತಾರೆ. ಆದರೆ ಈ ಮದ್ಯದಂಗಡಿಗಳು ವಾಹನದಲ್ಲಿ ಕಸ ಎಸೆಯುತ್ತಿದ್ದಾರೆ ಎಂಬ ಆರೋಪಗಳಿವೆ. ಇದೇ ಸ್ಥಳದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು, ಕೆಎಚ್‌ಡಿಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಅನೇಕ ದೇವಸ್ಥಾನಗಳು, ಮಠಗಳಿದ್ದು, ಇಂತ‌ಹ ಸ್ಥಳಗಳ ಕೂಗಳತೆಯಲ್ಲಿಯೇ ಕಸದ ರಾಶಿ ಬಿದ್ದಿರುತ್ತದೆ.

ಬೇಸಿಗೆ ಸಂದರ್ಭದ ನಿಮಿತ್ತ ಅವಳಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ನಿರಂತರ ಸಾರ್ವಜನಿಕರ ಸಂಪರ್ಕದಲ್ಲಿದ್ದು, ಅಲ್ಲಿ ಕಸ ಎಸೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ, ಕೂಡಲೇ ನಮ್ಮ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿ ಅಲ್ಲಿನ ಕಸವನ್ನು ಸೂಕ್ತ ಸ್ಥಳದಲ್ಲಿ ವಿಲೆವಾರಿ ಮಾಡಿಸಿ, ಕಾನೂನು ಬಾಹಿರವಾಗಿ ರಸ್ತೆಗಳ ಮೇಲೆ ಕಸ ಹಾಕುವ ಮದ್ಯದಂಗಡಿಗಳಿಗೆ ನೋಟೀಸ್‌ ನೀಡಿ ಕ್ರಮ ಜರುಗಿಸಲಾಗುವುದು.
• ಆರ್‌. ಎಂ. ಕೊಡಗೆ, ಪೌರಾಯುಕ್ತರು, ನಗರಸಭೆ ರಬಕವಿ ಬನಹಟ್ಟಿ.
ಬನಹಟ್ಟಿ ಸಹಕಾರಿ ನೂಲಿನ ಗಿರಣಿಯ ಎದುರಿಗೆ ಜಮಖಂಡಿಗೆ ಹೋಗುವ ಪ್ರಯಾಣಿಕರು, ಶಿಕ್ಷಕರು, ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಜೋರಾಗಿ ಗಾಳಿ ಬೀಸಿದರೆ ಕಸದ ರಾಶಿ ಜನರ ಮೇಲೆಯೇ ಬರುತ್ತದೆ. ಮೂಗು ಮುಚ್ಚಿಕೊಂಡೇ ನಿಲ್ಲುವಂತಹ ಪರಿಸ್ಥಿತಿ ನಿಮಾರ್ಣವಾಗಿದೆ. •ಮಲ್ಲಪ್ಪ ಸಾಲಕಟ್ಟಿ, ಪ್ರಯಾಣಿಕರು
Advertisement

Udayavani is now on Telegram. Click here to join our channel and stay updated with the latest news.

Next