Advertisement

ಯೋಜನೆ ತಿಳಿಸಲು ಬೀದಿ ನಾಟಕ

03:57 PM Dec 10, 2019 | Suhan S |

ತಾವರಗೇರಾ: ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಸ್ಥಳಿಯ ಪಪಂ ಸಹಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಗಳನ್ನು ಸಾರುವುದಕ್ಕೆ ಬೀದಿ ನಾಟಕ ಮೂಲಕ ಸೋಮವಾರ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

Advertisement

ಪ್ರಧಾನಮಂತ್ರಿ ಆಶ್ರಯ ಯೋಜನೆ ಮನೆಗಳನ್ನು ಅಳವಡಿಸಿಕೊಳ್ಳವುದು, ಪರಿಸರ ಸರಂಕ್ಷಣೆ, ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸುವುದು, ನೀರಿನ ಸಂರಕ್ಷಣೆ, ಶಕ್ತಿ ಸಂಪನ್ಮೂಲ ಸಂರಕ್ಷಣೆ, ಹೊಗೆ ಮುಕ್ತ ಅಡುಗೆ ಮನೆ, ಹಸಿರಿನತ್ತ ನಡೆ, ಗಿಡಗಳನ್ನುನೆಡೋಣ, ಸಹಬಾಳ್ವೆ, ಆರೋಗ್ಯಕರ ಜೀವನ ಮುಂತಾದ ಯೋಜನೆಗಳ ಬಗ್ಗೆ ಕುಷ್ಟಗಿಯ ಜನಜಾಗೃತಿ ಕಲಾರಂಗ ಸಂಸ್ಥೆ ಯ ಕಲಾವಿದರಾದ ಯಮನೂರಪ್ಪ ಭಜಂತ್ರಿ, ಶುಕಮುನಿ ಗಡಗಿ, ಈರಯ್ಯಸ್ವಾಮಿ, ಗೋಪಾಲ ಕಲಾಲ್‌, ಗಿರಿಜಮ್ಮ ಸೂಡಿ, ಗೌರಮ್ಮ ಕುರಿ ಮತ್ತು ಶರಣಪ್ಪ ವಡಗೇರಿ ವಿವಿಧ ಯೋಜನೆಗಳ ಬಗ್ಗೆ ಬೀದಿ ನಾಟಕ ಪ್ರದರ್ಶಿಸಿದರು. ಮುಖ್ಯಾಧಿಕಾರಿ ಶಂಕರ್‌ ಡಿ. ಕಾಳೆ ಬೀದಿ ನಾಟಕಕ್ಕೆ ಚಾಲನೆ ನೀಡಿದರು. ಶ್ಯಾಮೂರ್ತಿ ಕಟ್ಟಿಮನಿ, ಶರಣಬಸವ ಸೈಂದರ್‌, ಮರೇಶ ನಾಯಕ, ಅಂಬಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next