Advertisement

ಮುಂಬಯಿಯಲ್ಲಿ ನಾಯಿಗಳು ನೀಲಿ ಬಣ್ಣಕ್ಕೆ ತಿರುಗುತ್ತಿರುವುದು ಏಕೆ ?

04:00 PM Aug 14, 2017 | udayavani editorial |

ಹೊಸದಿಲ್ಲಿ : ನವೀ ಮುಂಬಯಿಯ ತಲೋಜಾ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು ವಿಷಕಾರಿ ರಾಸಾಯನಿಕ ತ್ಯಾಜ್ಯಗಳನ್ನು ನೇರವಾಗಿ ಸಮೀಪದ ಕಸಾಡಿ ನದಿಗೆ ಬಿಡುತ್ತಿರುವ ಪರಿಣಾಮವಾಗಿ ಅದನ್ನು ಸೇವಿಸುವ ಇಲ್ಲಿನ ನಾಯಿಗಳು ಕಡು ನೀಲಿ ಬಣ್ಣಕ್ಕೆ ತಿರುಗುತ್ತಿವೆ. 

Advertisement

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ನದಿ, ಕೆರೆ, ಸರೋವರಗಳಲ್ಲಿ ಪ್ರತೀ ಲೀಟರ್‌ ನೀರಿಗೆ 6 ಮಿಲಿಗ್ರಾಂ ಆಮ್ಲಜನಕ ಸಾಂದ್ರತೆ ಇರಬೇಕು; ಆದರೆ ಇಲ್ಲಿ ಅದು ಪ್ರತೀ ಲೀಟರ್‌ ನೀರಿಗೆ 3 ಮಿಲಿಗ್ರಾಂಗಿಂತಲೂ ಕಡಿಮೆ ಸಾಂದ್ರತೆಯಲ್ಲಿದೆ. ಹಾಗಾಗಿ ಜಲಚರ, ಪಶು ಪಕ್ಷಿಗಳಿಗೆ ಇದು ಮಾರಣಾಂತಿಕವಾಗಿದೆ. 

ನವೀ ಮುಂಬಯಿಯ ಕೈಗಾರಿಕಾ ಪ್ರದೇಶದಲ್ಲಿ ಅನೇಕ ಕಾರ್ಖಾನೆಗಳಿವೆ. ಈ ಪೈಕಿ ಫಾರ್ಮಾಸುಟಿಕಲ್‌ ಘಟಕಗಳ ಸಂಖ್ಯೆಯೇ 1,000ಕ್ಕೂ ಮೀರಿ ಇದೆ; ಜತೆಗೆ ಆಹಾರ ಮತ್ತು ಇಂಜಿನಿಯರಿಂಗ್‌ ಫ್ಯಾಕ್ಟರಿಗಳು ಗಮನಾರ್ಹ ಸಂಖ್ಯೆಯಲ್ಲಿವೆ. 

ಈ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು ತಮ್ಮ ವಿಷಕಾರಿ ರಾಸಾಯನಿಕ ತ್ಯಾಜ್ಯಗಳನ್ನು, ಯಾವುದೇ ರೀತಿಯ ವೈಜ್ಞಾನಿಕ ಸಂಸ್ಕರಣೆಗೆ ಒಳಪಡಿಸದೆ, ನೇರವಾಗಿ ಸಮೀಪದ ಕಸಾಡಿ ನದಿಗೆ ಬಿಡುತ್ತಿವೆ. ಹಾಗಾಗಿ ಈ ಪ್ರದೇಶದ ನೆಲ, ಜಲ, ಶಬ್ದ ಹಾಗೂ ವಾಯು ಮಾಲಿನ್ಯವು ಹದಿಮೂರು ಪಟ್ಟು ಜಾಸ್ತಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next