ಹೈದರಾಬಾದ್: ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಗಾರ್ಬಾ ನೃತ್ಯದಲ್ಲಿ ಭಾಗವಹಿಸುವವರ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಕೆಲವು ಮುಸ್ಲಿಮ್ ಸಮುದಾಯದ ಸದಸ್ಯರ ಮೇಲೆ ಕೆಲವು ಪೊಲೀಸರು ಸಾರ್ವಜನಿಕವಾಗಿ ಥಳಿಸುತ್ತಿರುವ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ತೆಲಂಗಾಣದ ಹೈದರಾಬಾದ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ಬೀದಿ ನಾಯಿಗೆ ಭಾರತದಲ್ಲಿ ಗೌರವವಿದೆ ಆದರೆ ಮುಸ್ಲಿಮರಿಗಿಲ್ಲ ಎಂದು ಹೇಳಿದರು.
ಅವರಿಗೆ ಬೀದಿಯಲ್ಲಿ ಲಾಠಿಯಲ್ಲಿ ಹೊಡೆಯುತ್ತಿದ್ದಾರೆ. ಇದೇನಾ ಭಾರತೀಯ ಪ್ರಜಾಪ್ರಭುತ್ವ? ಇದೇನಾ ಭಾರತದ ಜಾತ್ಯಾತೀಯತೆ? ಬೀದಿ ಬದಿಯಲ್ಲಿರುವ ನಾಯಿಗೂ ಇಲ್ಲಿ ಮರ್ಯಾದೆ ನೀಡಲಾಗುತ್ತದೆ. ಆದರೆ ಮುಸ್ಲಿಮರಿಗೆ ಮರ್ಯಾದೆ ಸಿಗುತ್ತಿಲ್ಲ ಎಂದರು.
ಇದನ್ನೂ ಓದಿ:ಎಮ್ಮೆಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ : 34 ಮಂದಿಗೆ ಗಾಯ
ಆರೋಪಿಗಳ ವಿರುದ್ಧ ಕಾನೂನು ಪ್ರಕಾರವೇ ಕ್ರಮಕೈಗೊಳ್ಳಬೇಕು, ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು ಎಂದು ಆಗ್ರಹಿಸಿದರು.
ಈಗ ನಿಮ್ಮ ಸಮಯ. ನಮ್ಮ ಕಾಲವು ಬರುತ್ತದೆ. ಆದರೆ ಆಗ ನಾವು ಈ ರೀತಿ ಹಿಂಸಾತ್ಮಕವಾಗಿ ಉತ್ತರ ನೀಡುವುದಿಲ್ಲ. ನಾವು ರಾಜಕೀಯ ಶಕ್ತಿ, ಏಕತೆಯಿಂದ ಎದುರಿಸುತ್ತೇವೆ ಎಂದು ಓವೈಸಿ ಹೇಳಿದ್ದಾರೆ.