Advertisement
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಎರಡು ಹಾಸ್ಟೆಲ್‌ಗಳು ನಡೆಯುತ್ತಿದ್ದು, ಆ ಎರಡುಹಾಸ್ಟೆಲ್‌ಗಳ ಉಸ್ತುವಾರಿಯನ್ನು ಇಲಾಖೆಯೇನೋಡಿಕೊಳ್ಳುತ್ತಿದೆ. ಉಳಿದಂತೆ ವಿಶ್ವವಿದ್ಯಾಲಯದಿಂದ2 ಮಹಿಳಾ ಹಾಸ್ಟೆಲ್, ಪಿ.ಎಚ್‌ಡಿ ಅಧ್ಯಯನಮಾಡುವವರಿಗಾಗಿ ಇರುವ ಒಂದು ಹಾಸ್ಟೆಲ್,ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೂರು ಹಾಸ್ಟೆಲ್,ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗೆ ಒಂದುಹಾಸ್ಟೆಲ್ ಹಾಗೂ ಈಶಾನ್ಯ ರಾಜ್ಯದವಿದ್ಯಾರ್ಥಿಗಳಿಗಾಗಿ ನೂತನ ಹಾಸ್ಟೆಲ್‌ನಿರ್ಮಾಣವಾಗಿದೆ.
Related Articles
Advertisement
ಸಿಸಿಕ್ಯಾಮರಾಗಳನ್ನು ಕೆಲವೊಂದು ಹಾಸ್ಟೆಲ್‌ನಲ್ಲಿಅಳವಡಿಸಲಾಗಿದ್ದು, ಇನ್ನು ಕೆಲವು ಹಾಸ್ಟೆಲ್‌ನಲ್ಲಿಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದುಅಧಿಕಾರಿಯೊಬ್ಬರು ಮಾಹಿತಿ ನೀಡಿದರು.ಆ್ಯಕ್ಷೆಸ್ ಕಾರ್ಡ್ ಪರಿಚಯಿಸಲು ಚಿಂತನೆ: ಹಾಸ್ಟೆಲ್‌ಗಳಲ್ಲಿ ಅಕ್ರಮವಾಗಿ ವಾಸವಾಗಿರುವವರನ್ನುಹೊರದಬ್ಬಿ, ಅರ್ಹ ವಿದ್ಯಾರ್ಥಿಗಳಿಗೆ ಅನುಕೂಲಮಾಡಿಕೊಡುವ ನಿಟ್ಟಿನಲ್ಲಿ ಡಿಜಿಟಲ್ ಆ್ಯಕ್ಷೆಸ್ ಕಾರ್ಡ್‌ಪರಿಚಯಿಸಲು ಚಿಂತನೆ ನಡೆಸುತ್ತಿದೆ. ಪ್ರತಿವಿದ್ಯಾರ್ಥಿಗೂ ದಾಖಲಾತಿ ಸಂದರ್ಭದಲ್ಲಿ ಐಡಿಕಾರ್ಡ್ ನೀಡಲಾಗುತ್ತದೆ. ಇದನ್ನು ಸ್ಮಾರ್ಟ್ ಕಾರ್ಡ್‌ರೂಪದಲ್ಲಿ ನೀಡಿ, ಅದನ್ನೇ ಆ್ಯಕ್ಷೆಸ್ ಕಾರ್ಡ್ ಆಗಿಬಳಸುವ ಮಾದರಿಯಲ್ಲಿ ಸಿದ್ಧಪಡಿಸಲು ಬೇಕಾದಚರ್ಚೆಗಳು ಆರಂಭವಾಗಿದೆ. ಹಾಗೆಯೇಬಯೊಮೆಟ್ರಿಕ್ ಯಂತ್ರದ ಅಳವಡಿಕೆಗೂ ಚಿಂತನೆನಡೆಸುತ್ತಿದ್ದೇವೆ.
ತಕ್ಷಣವೇ ಇದು ಸಾಧ್ಯವಾಗದೇಇದ್ದರೂ ಹಂತ ಹಂತವಾಗಿ ಇದರ ಅನುಷ್ಠಾನಕ್ಕೆವಿಶ್ವವಿದ್ಯಾಲಯ ಚಿಂತನೆ ನಡೆಸಲಿದ್ದೇವೆ ಎಂದುಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿನೀಡಿದರು.
ರಾಜು ಖಾರ್ವಿ ಕೊಡೇರಿ