ಹನೂರು: ಪಟ್ಟಣ ಪಂಚಾಯಿತಿ ಚುನಾ ವಣೆಯ ಸ್ಟ್ರಾಂಗ್‌ರೂಂ ಮತ್ತು ಮತ ಎಣಿಕೆ ಕಾರ್ಯಗಳೆಲ್ಲವೂ ಈ ಬಾರಿ ಹನೂರು ಪಟ್ಟಣ ದಲ್ಲಿಯೇ ಜರುಗಲಿವೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿದರು.
ಇದೇ ವೇಳೆ ಸ್ಟ್ರಾಂಗ್‌ರೂಂ ತೆರೆಯಲು ಗುರುತಿಸಿರುವ ಕೊಠಡಿಯನ್ನು ಪರಿಶೀಲಿಸಿ, ಶಾಲೆಯ ಮೈದಾನವನ್ನು ವೀಕ್ಷಣೆ ಮಾಡಿ ಆವರಣವು ಉತ್ತಮವಾಗಿದೆ. ಎಣಿಕೆ ಕಾರ್ಯ ದಂದು ಎಣಿಕೆ ಕೊಠಡಿಯಿಂದ ಸ್ವಲ್ಪ ದೂರದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ಅಗತ್ಯ ಕ್ರಮ ಕೈಗೊ ಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
4 ಶಾಲೆಗಳಲ್ಲಿ 13 ಕೊಠಡಿಗಳು: ಹನೂರು ಪಟ್ಟಣದ 13 ವಾರ್ಡುಗಳಿಗೂ ಪ್ರತ್ಯೇಕ ಕೊಠಡಿ ಗಳನ್ನು ಗುರುತಿಸಲಾಗಿದ್ದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗಳಲ್ಲಿ 4 ಬೂತ್‌ಗಳು, ಕ್ರಿಸ್ತರಾಜ ಶಾಲೆಯಲ್ಲಿ 4 ಬೂತ್‌ಗಳು , ಬಿ.ಮುನಿ ಯಪ್ಪ ಪ್ರೌಢ ಶಾಲೆ ಯಲ್ಲಿ 3 ಬೂತ್‌ಗಳು ಮತ್ತು ರುದ್ರಶೆಟ್ಟಿ ದೊಡ್ಡಿ ಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 2 ಬೂತ್ ತೆರೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ತಹಶೀಲ್ದಾರ್ ನಾಗರಾಜು, ಚುನಾವಣಾಧಿಕಾರಿ ಸ್ವಾಮಿ, ಬಿಆರ್‌ಸಿ ಕ್ಯಾತ, ವಿಎ ಪುನೀತ್ ಇನ್ನಿತರರು ಹಾಜರಿದ್ದರು.
Advertisement
ಪಟ್ಟಣದಲ್ಲಿ ಪಪಂ ಚುನಾವಣೆ ಹಿನ್ನೆಲೆ ತೆರೆಯಲಾಗಿರುವ ಚುನಾವಣಾ ಕಾರ್ಯಾಲಯ ಪರಿಶೀಲಿಸಿ ಮಾತನಾಡಿ, ಕಳೆದ ಪಪಂ ಚುನಾವಣೆ ವೇಳೆ ಮತದಾನ ಪ್ರಕ್ರಿಯೆ ಮಾತ್ರ ಹನೂರು ಪಟ್ಟಣದಲ್ಲಿ ಜರುಗಿತ್ತು. ಮತ ಪೆಟ್ಟಿಗೆಗಳ ಸ್ಟ್ರಾಂಗ್‌ರೂಂ ಮತ್ತು ಎಣಿಕೆ ಕಾರ್ಯ ವನ್ನು ಕೊಳ್ಳೇಗಾಳ ಪಟ್ಟಣದಲ್ಲಿ ನಡೆಸಲಾಗಿತ್ತು. ಈ ಬಾರಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿಯೇ ಸ್ಟ್ರಾಂಗ್‌ರೂಂ ಅನ್ನು ತೆರೆಯಲಾಗುತ್ತಿದ್ದು ಎಣಿಕೆ ಕಾರ್ಯವೂ ಸಹ ಇಲ್ಲಿಯೇ ಜರುಗಲಿದೆ ಎಂದರು.
Related Articles
Advertisement