Advertisement
ಬಡತನದ ಮೂಲ ಹಸಿವು. ಖಾಲಿ ಕೈಯಲ್ಲಿ ಹೊಟ್ಟೆಗೇನು ಇಲ್ಲದೆ, ಕೂತು ಕೂರಗುವ ಪರಿಸ್ಥಿತಿ ರೋಷ- ದ್ವೇಷ ಎಲ್ಲದರ ಅರಿವನ್ನು ನೀಡುತ್ತದೆ. ಕೆಲವೊಬ್ಬರಿಗೆ ಬಡತನದ ಭೇಗುದಿಯಲ್ಲಿ ಬೆಂದು ಬೆಂದು ಜೀವನವೇ ಇಷ್ಟು ಎನ್ನುವ ಅಲಸ್ಯ ಬಂದು ಉತ್ಸಾಹಕ್ಕೆ ಜಿಡ್ಡು ಹತ್ತಿ ಬಿಡುತ್ತದೆ. ಇನ್ನು ಕೆಲವರು ಬಡತನ ಇದ್ದರು ಕಷ್ಟಪಟ್ಟು ಎರಡು ಹೊತ್ತಿನ ಹೊಟ್ಟೆಯ ಹಸಿವನ್ನು ತಣ್ಣಿಸಲು ದುಡಿದು ತಿನ್ನುವ ದಾರಿಯಲ್ಲಿ ಸಾಗಿ ಬಡತನದಲ್ಲೂ ನೆಮ್ಮದಿಯ ಜೀವನವನ್ನು ಬದುಕುತ್ತಾರೆ.
Related Articles
Advertisement
ಹೃದಯವಂತ ವಡಪಾವ್ ಅಂಕಲ್ .. :
ಸತೀಶ್ ವಡಪಾವ್ ಸ್ಟಾಲ್ ಪ್ರಾರಂಭಿಸಿದಾಗ, ಎಲ್ಲಾ ಸ್ಟಾಲ್ ನ ಹಾಗೆ ಸಾಮಾನ್ಯ ಸ್ಟಾಲ್ ಎನ್ನುವ ಹಾಗೆ ಪ್ರತಿದಿನದ ವ್ಯಾಪಾರ ಮಮೂಲಾಗಿ ಸಾಗುತ್ತಿತ್ತು. ದಿನಗಳು ಸವೆದಂತೆ, ತಿಂಗಳು ಸಾಗಿದಂತೆ, ವರ್ಷಗಳು ಉರುಳಿದಂತೆ, ಸತೀಶ್ ಅವರ ವಡಪಾವ್ ರುಚು ಹಾಗೂ ಅವರ ಮನವನ್ನು ಮೆಚ್ಚಿಕೊಂಡು ಬರುವವರ ಸಂಖ್ಯೆಯೂ ಹೆಚ್ಚಾಯಿತು.ಸತೀಶ್ ವಡಪಾವ್ ವ್ಯಾಪಾರಕ್ಕೆ ಈಗ ಮೂವತ್ತು ವರ್ಷ. ವಡಪಾವ್ ಪ್ರಾರಂಭಿಸಿದ್ದೇ ಬಡತನದ ಸ್ಥಿತಿಯ ಒತ್ತಡದಿಂದ ಪಾರಾಗುವ ಸಲುವಾಗಿ. ಸತೀಶ್ ಅವರು ತಯಾರಿಸುವ ವಡಪಾವ್ ಎಲ್ಲರಂತೆ ರುಚಿಯ ಸ್ವಾದ ಮಾತ್ರ ಇದ್ದಿದ್ರೆ ಅದು ಅಷ್ಟು ಸುದ್ದಇ ಆಗುತ್ತಿಲಿಲ್ಲ. ಇವರ ವಡಪಾವ್ ನಲ್ಲಿ ಒಂದು ವಿಶೇಷವಾದ ವಿಷಯ ಇದೆ.
ಸತೀಶ್ ಗುಪ್ತಾ,ವಿದ್ಯಾರ್ಥಿಗಳಿಗೆ ವಡಪಾವ್ ವನ್ನು ಕೇವಲ 5 ರೂಪಾಯಿಗೆ ಮಾರುತ್ತಾರೆ. ಪ್ರತಿದಿನ ಬರುವ ವಿದ್ಯಾರ್ಥಿಗಳಿಗೆ ರುಚಿಯಲ್ಲಿ ಯಾವುದೇ ಕಡಿತ ಇಲ್ಲದೆ ವಿದ್ಯಾರ್ಥಿಗಳಿಗೆ ಮಾತ್ರ 5 ರೂಪಾಯಿಯಲ್ಲಿ ಹೊಟ್ಟೆ ತುಂಬುವ ವಡಪಾವ್ ನೀಡುತ್ತಾರೆ. ಇದರ ಹಿಂದೆಯೂ ಒಂದು ಕಾರಣವಿದೆ. ಸತೀಶ್ ಅವಎ ಕುಟುಂಬ ಬಡತನದಲ್ಲಿ ಇದ್ದಾಗ, ಅವರ ಮಕ್ಕಳು ತುಂಬಾ ಕಷ್ಟವನ್ನು ನೋಡಿ ಬೆಳೆದವರು, ತನ್ನ ಮುಂದೆ ಯಾವ ಮಕ್ಕಳು ಹಸಿವಿನ ಕಷ್ಟವನ್ನು ಅನುಭವಿಸಬಾರದು, ಅವರಿಗೆ ಕೈಗೆಟಕ್ಕುವ ಬೆಲೆಯಲ್ಲಿ ವಡಪಾವ್ ಮಾರಬೇಕೆನ್ನುವ ನಿಟ್ಟಿನಲ್ಲಿ ಸತೀಶ್ 5 ರೂಪಾಯಿನಲ್ಲಿ ಮಕ್ಕಳಿಗೆ ವಡಪಾವ್ ನೀಡುತ್ತಾರೆ. ಕೆಲವೊಮ್ಮೆ ಮಕ್ಕಳಲ್ಲಿ ಹಣಯಿಲ್ಲದೆ ಇದ್ರೆ ಅಥವಾ ಹಣ ಕಮ್ಮಿಯಿದ್ರೆ ಆಗಲೂ ಸತೀಶ್ ವಡಪಾವ್ ಕೊಟ್ಟು ಮಕ್ಕಳ ಮೊಗದಲ್ಲಿ ಅರಳುವ ಖುಷಿಯನ್ನು ನೋಡಿ ಬಡತನದಿಂದ ಸಾಗಿದ ತನ್ನ ಜೀವನವನ್ನು ನೆನೆಸಿಕೊಳ್ಳುತ್ತಾರೆ.
ಇಂದು ಸತೀಶ್ ಅವರ ವಡಪಾವ್ ಸ್ಟಾಲ್ ಮುಂಬಯಿಯಲ್ಲಿ ಪ್ರಸಿದ್ಧಿಯಾಗಿರೋದು ಅವರ ಮಾನವೀಯತಎ ಗುಣದಿಂದ. ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದ ಸತೀಶ್ ಕುಟುಂಬ ಇಂದು ದೇವರ ದಯೆಯಿಂದ ಉಳ್ಳವರ ಮನೆಯಲ್ಲಿರುವ ಎಲ್ಲಾವನ್ನು ತನ್ನ ದುಡಿಮೆಯಿಂದ ಗಳಿಸಿಕೊಂಡು, ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.
ಬಡತನ ಆಗಲಿ, ಸಿರಿತನ ಆಗಲಿ ಕಾಲಕ್ಕೆ ತಕ್ಕ ಬದಲಾಗುವಂಥದ್ದು, ನಮ್ಮ ಮೇಲಿನ ನಂಬಿಕೆ ಹಾಗೂ ದುಡಿದು ಮುನ್ನಡೆಯುವ ವಿಶ್ವಾಸ ಸದಾ ಇರಬೇಕು ಎನ್ನುವುದಕ್ಕೆ ಸತೀಶ್ ಜೀವನವೊಂದು ಉದಾಹರಣೆ.
-ಸುಹಾನ್ ಶೇಕ್